/newsfirstlive-kannada/media/post_attachments/wp-content/uploads/2025/03/4YEAR-BOY.jpg)
ಮಕ್ಕಳು ಅಂದ್ರೆ ಮಕ್ಕಳೇ, ಅವರಿಗೆ ಎಲ್ಲ ವಿಷಯಗಳು ತಮಾಷೆಯಾಗಿಯೇ ಕಾಣುತ್ತವೆ. ಅವು ಎಷ್ಟೇ ಗಂಭೀರವಾದ ವಿಷಯಗಳಿದ್ದರು ಅವರಿಗೆ ಅದು ದೊಡ್ಡದಾಗಿ ಕಂಡು ತಮಾಷೆಯನಿಸುವಂತಹ ವಿಷಯಗಳನ್ನು ದೊಡ್ಡದು ಮಾಡಿ ಎಲ್ಲರನ್ನೂ ಪೇಚಿಗೆ ತಳ್ಳುತ್ತವೆ. ಇಂತಹುದೇ ಒಂದು ಕೆಲಸವನ್ನು ನಾಲ್ಕು ವರ್ಷದ ಮಗು ಮಾಡಿದೆ. ತನ್ನ ತಾಯಿ ಮಾಡಿದ ಒಂದು ಕಾರ್ಯ ಅವನನ್ನು ಅಸಮಾಧಾನಗೊಳಿಸಿದ್ದು, ಸೀದಾ ಪೊಲೀಸ್ ಠಾಣೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ ನನ್ನ ತಾಯಿ ಅತ್ಯಂತ ಹೇಯ ಕೃತ್ಯ ಮಾಡಿದ್ದಾಳೆ ಬಂದು ಅವಳನ್ನು ಅರೆಸ್ಟ್ ಮಾಡಿ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?
ಈ ಒಂದು ಕೆಲಸ ಮಗುವಿನ ತಂದೆ ತಾಯಿಯನ್ನು ದೊಡ್ಡ ಪೇಚಿಗೆ ಸಿಲುಕಿಸಿದೆ. ಅಮೆರಿಕಾದ ವಿಸ್ಕಾನ್ಸಿನ್ ನಾಲ್ಕು ವರ್ಷದ ಬಾಲಕನೊಬ್ಬ ಪೊಲೀಸ್ ಅಧಿಕಾರಿಗಳಿಗೆ 911ಕ್ಕೆ ಒಂದು ಕರೆ ಬಂದಿದೆ. ಕರೆಯಲ್ಲಿ ನಾಲ್ಕು ವರ್ಷದ ಬಾಲಕನ ಧ್ವನಿಯೊಂದು ಮಾತನಾಡಿದೆ. ಆ ಮಗು ಬಹಳ ಸಿಟ್ಟಿನಿಂದ ನನ್ನ ತಾಯಿ ಅತ್ಯಂತ ಕೆಟ್ಟ ಕೆಲಸ ಮಾಡಿದ್ದಾಳೆ ಅವಳನ್ನು ಬಂದು ಅರೆಸ್ಟ್ ಮಾಡಿ ಜೈಲಿಗೆ ಹಾಕಿ ಎಂದು ಹೇಳಿದೆ. 4 ವರ್ಷದ ಮಗುವಿನ ಈ ಕರೆಯನ್ನು ಸ್ವೀಕರಿಸಿದ ಪೊಲೀಸರು ಕೂಡಲೇ ಏನೋ ದೊಡ್ಡ ಅನಾಹುತವಾಗಿದೆ ಎಂದು ನಂಬರ್ ಟ್ರೇಸ್ ಮಾಡಿ ಕರೆ ಮಾಡಿದ ಬಾಲಕನ ಮನೆಗೆ ನುಗ್ಗಿದೆ.
ಇದನ್ನೂ ಓದಿ:ಈ ದೇಶದಲ್ಲಿ ಸಮೋಸಾ ತಿನ್ನೋದು ಕಾನೂನು ಬಾಹಿರ.. ಅಪ್ಪಿ ತಪ್ಪಿ ತಯಾರಿಸಿದರೆ, ಸೇವಿಸಿದರೆ ಶಿಕ್ಷೆ ಫಿಕ್ಸ್!
ಏನೋ ದೊಡ್ಡ ಸಮಸ್ಯೆಯನ್ನೇ ಮದು ಎದುರಿಸುತ್ತಿದೆ ಎಂದು ಓಡೋಡಿ ಬಂದ ಮಹಿಳಾ ಪೊಲೀಸರಿಗೆ ಅಸಲಿಗೆ ಶಾಕ್ ಕಾದಿತ್ತು. ಮನೆಯಲ್ಲಿರುವ ತಾಯಿಯನ್ನು ವಿಚಾರಿಸಿದಾಗ ವಿಷಯವೇ ಬೇರೆಯಾಗಿತ್ತು. ಗಾಬರಿಗೊಂಡು ಬಂದ ಪೊಲೀಸರು ಬಿದ್ದು ಬಿದ್ದು ನಗುತ್ತಲೇ ವಾಪಸ್ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಮನೆಗೆ ಬಂದು ಏನಾಯ್ತು ಎಂದು ಕೇಳಿದ ಪೊಲೀಸರಿಗೆ 4 ವರ್ಷದ ಮಗು ನನ್ನ ತಾಯಿ ನನ್ನ ಪಾಲಿನ ಐಸ್ಕ್ರೀಮ್ ತಿಂದಿದ್ದಾಳೆ ಅವಳನ್ನು ಈಗಲೇ ಜೈಲಿಗೆ ಹಾಕಿ ಎಂದು ಹೇಳಿದೆ. ಕೊನೆಗೆ ಪೊಲೀಸರು ತಮ್ಮ ಹಣದಿಂದಲೇ ಮಗುವಿಗೆ ಐಸ್ಕ್ರೀಮ್ ತರಿಸಿ ಕೊಟ್ಟು ಇನ್ಮೇಲೆ ಹೀಗೆಲ್ಲಾ ಪೊಲೀಸರಿಗೆ ಕರೆ ಮಾಡಬಾರದು ಎಂದು ಬುದ್ಧಿವಾದ ಹೇಳಿ ವಾಪಸ್ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ