ಅಯ್ಯೋ ಪಾಪ.. ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ 4 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು?

author-image
admin
Updated On
ಅಯ್ಯೋ ಪಾಪ.. ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ 4 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು?
Advertisment
  • ಲಿಫ್ಟ್ ಬಳಿ ಆಟವಾಡುತ್ತಿದ್ದ ನಾಲ್ಕೂವರೆ ವರ್ಷದ ಬಾಲಕ
  • ದುರಂತ ನಡೆದು 10 ನಿಮಿಷಗಳಾದರೂ ಯಾರ ಗಮನಕ್ಕೂ ಬಂದಿಲ್ಲ
  • ಮೇಲಿನಿಂದ ಬಟನ್ ಒತ್ತಿದಾಗ ಲಿಫ್ಟ್ ಜಾಮ್‌ ಆಗಿರೋದು ಪತ್ತೆ!

ಲಿಫ್ಟ್ ಬಳಿ ಆಟವಾಡುತ್ತಿದ್ದ ನಾಲ್ಕೂವರೆ ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕಳೆದ ರಾತ್ರಿ 10.30ರ ಸಮಯದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘೋರ ದುರಂತ ನಡೆದಿದ್ದು, ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಲಿಫ್ಟ್‌ನ ಬಾಗಿಲು ಮುಚ್ಚುತ್ತಿದ್ದಾಗ ಈ ಬಾಲಕ ಲಿಫ್ಟ್ ಬಳಿ ತೆರಳಿದ್ದು 2 ಬಾಗಿಲುಗಳ ಮಧ್ಯೆ ಸಿಲುಕಿಕೊಂಡಿದ್ದಾನೆ. ಬಾಲಕನ ದೇಹ ನಜ್ಜುಗುಜ್ಜಾಗಿ ಲಿಫ್ಟ್‌ ಸಂಪೂರ್ಣವಾಗಿ ಜಾಮ್ ಆಗಿದೆ. ಈ ದುರಂತ ನಡೆದು 10 ನಿಮಿಷಗಳಾದರೂ ಯಾರ ಗಮನಕ್ಕೂ ಬಂದಿಲ್ಲ. ಮೇಲಿನಿಂದ ಲಿಫ್ಟ್ ಬಟನ್ ಒತ್ತಿದಾಗ ಜಾಮ್‌ ಆಗಿರುವುದು ಕಂಡು ಬಂದಿದೆ.

publive-image

ಲಿಫ್ಟ್ ಬಾಗಿಲಲ್ಲಿ ಸಿಲುಕಿ ಸಾವನ್ನಪ್ಪಿದ ಮಗುವನ್ನು ನಾಲ್ಕೂವರೆ ವರ್ಷದ ಸುರೇಂದರ್ ಎಂದು ಗುರುತಿಸಲಾಗಿದೆ. ಈ ಸುರೇಂದರ್ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಮಗ. ನೇಪಾಳ ಮೂಲದ ಶ್ಯಾಮ್‌ ಬಹದೂರ್‌ ಎಂಬುವವರು ಕಳೆದ 7 ತಿಂಗಳ ಹಿಂದೆ ಈ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಶ್ಯಾಮ್ ಬಹುದೂರ್ ಮಗ ಸುರೇಂದರ್ ಈ ಲಿಫ್ಟ್ ದುರಂತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬರ್ತ್​ ಡೇ ಅಂತಿದ್ದೀರಿ.. ಅಪ್ಪ ಅಮ್ಮ ಬಂದಿಲ್ಲ ಏಕೆ? ಮೊಮ್ಮಗಳ ಮಾತು ಅಜ್ಜ ಅಜ್ಜಿಯನ್ನ ಅಕ್ಷರಶಃ ಅಳಿಸುತ್ತಿದೆ! 

ಬಾಲಕ ಸುರೇಂದರ್ ತಂದೆ-ತಾಯಿ ಹಾಗೂ ತಂಗಿ 6 ಅಂತಸ್ಥಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಲಿಫ್ಟ್ ಪಕ್ಕದಲ್ಲೇ ಇವರ ವಾಸಿಸುತ್ತಿದ್ದ ಮನೆಯಿದ್ದು, ಬಾಲಕ ಆಟವಾಡುತ್ತಿದ್ದಾಗ ಲಿಫ್ಟ್ ಬಳಿ ಹೋಗಿ ಬಾಗಿಲ ಮಧ್ಯೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಸ್ಥಳೀಯರು ರಕ್ತಸಿಕ್ತವಾಗಿದ್ದ ಬಾಲಕನನ್ನು ಹೊರ ತೆಗೆದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರು ಬಾಲಕ ಸಾವನ್ನಪ್ಪಿರೋದನ್ನ ಖಚಿತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment