3ನೇ ಅಂತಸ್ತಿನ ಕಿಟಕಿಯಲ್ಲಿ ಸಿಲುಕಿದ್ದ 4 ವರ್ಷದ ಬಾಲಕಿ.. ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ -Video

author-image
Bheemappa
Updated On
3ನೇ ಅಂತಸ್ತಿನ ಕಿಟಕಿಯಲ್ಲಿ ಸಿಲುಕಿದ್ದ 4 ವರ್ಷದ ಬಾಲಕಿ..  ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ -Video
Advertisment
  • ಹಿರಿಯ ಮಗಳನ್ನು ಶಾಲೆ ಬಸ್​ ಹತ್ತಿಸಲು ಹೋಗಿದ್ದ ತಾಯಿ
  • ಮನೆಯಲ್ಲಿದ್ದ ಸಣ್ಣ ಮಗಳು ಆಡುತ್ತಾ ಕಿಟಕಿಯನ್ನ ಏರಿದ್ದಳು
  • ಜೀವ ಭಯದಿಂದ ಕಿರುಚಾಡಿ ಅಳುತ್ತಿದ್ದ 4 ವರ್ಷದ ಬಾಲಕಿ

ಮುಂಬೈ: ಅಪಾರ್ಟ್​​ಮೆಂಟ್​ನ ಮೂರನೇ ಅಂತಸ್ತಿನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ 4 ವರ್ಷದ ಬಾಲಕಿಯ ಜೀವವನ್ನ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಉಳಿಸಿದ್ದಾರೆ. ಈ ಘಟನೆಯು ಮಹಾರಾಷ್ಟ್ರದ ಪುಣೆಯ ಗುಜರ್ ನಿಂಬಾಳ್ಕರ್ವಾಡಿ ಏರಿಯಾದಲ್ಲಿ ನಡೆದಿದೆ.

ಗುಜರ್ ನಿಂಬಾಳ್ಕರ್ವಾಡಿ ಏರಿಯಾದ ಅಪಾರ್ಟ್​​ಮೆಂಟ್​ನಲ್ಲಿ ಮಹಿಳೆಯೊಬ್ಬರು ತನ್ನ ಹಿರಿಯ ಮಗಳನ್ನ ಶಾಲೆಯ ಬಸ್​ ಹತ್ತಿಸಲು 3ನೇ ಅಂತಸ್ತಿನಿಂದ ಕೆಳಗೆ ಹೋಗಿದ್ದರು. ಈ ವೇಳೆ 4 ವರ್ಷದ ಚಿಕ್ಕಮಗಳನ್ನು ಮನೆಯಲ್ಲಿ ಬಿಟ್ಟು ಹೊರಗಡೆಯಿಂದ ಲಾಕ್ ಮಾಡಿಕೊಂಡು ಹೋಗಿದ್ದರು. ಆದರೆ ಮನೆಯೊಳಗಿದ್ದ ಚಿಕ್ಕ ಮಗಳು ಆಟವಾಡುತ್ತ ಕಂಬಿ ಹಿಡಿದು ಕಿಟಕಿಯನ್ನ ಏರಿದ್ದಾಳೆ.

ಇದನ್ನೂ ಓದಿ: UAE ಅಲ್ಲಿ ಶಾಶ್ವತವಾಗಿ ನೆಲೆಸಬೇಕಾ..? ಗೋಲ್ಡನ್​ ವೀಸಾ ಪಡೆಯಲು ಈಗ ಸುವರ್ಣ ಅವಕಾಶ..!

publive-image

ಬಳಿಕ ಕಿಟಕಿಯ ಮೂಲಕ ಆಚೆ ಬರಲು ಯತ್ನಿಸಿದಾಗ ತಲೆ ಕಿಟಕಿಗೆ ಇದ್ದ ಕಂಬಿಗೆ ಸಿಲುಕಿಕೊಂಡಿದೆ. ದೇಹವೆಲ್ಲ ಹೊರ ಭಾಗದಲ್ಲಿತ್ತು. ತಲೆ ಕಂಬಿಯಲ್ಲಿ ಸಿಲುಕಿ ಮಗು ಜೀವ ಭಯದಿಂದ ಒದ್ದಾಡುತ್ತಿದ್ದಾಗ ತಾಯಿ ಜೋರಾಗಿ ಕಿರುಚಾಡಿದ್ದರಿಂದ ಸ್ಥಳೀಯರು ಓಡಿ ಬಂದಿದ್ದಾರೆ. ಇದೇ ಫ್ಲಾಟ್​ನಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಕೂಡ ವಾಸಿಸುತ್ತಿದ್ದರಿಂದ ತಕ್ಷಣ ಅವರು ಕೂಡ 3ನೇ ಅಂತಸ್ತಿಗೆ ಓಡಿ ಬಂದು ಮಗುವನ್ನ ಸುರಕ್ಷಿತವಾಗಿ ಹೊರ ತೆಗೆದು ಜೀವ ಉಳಿಸಿದ್ದಾರೆ.


">July 8, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment