/newsfirstlive-kannada/media/post_attachments/wp-content/uploads/2025/02/Untitled.jpg)
ಉತ್ತರಪ್ರದೇಶದ ಮೊರದಾಬಾದ್ನಲ್ಲಿ ಬುಧವಾರ ಒಂದು ಎಂತವರೂ ಕೂಡ ಬೆಚ್ಚಿ ಬೀಳುವಂತಹ ಘಟನ ನಡೆದಿದೆ. 4 ವರ್ಷದ ಪುಟಾಣಿ ಮಗುವೊಂದು ಅವರ ಅಜ್ಜಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಅಮ್ಮ ಕೊರಳು ಬಿಗಿದುಕೊಂಡ ವಿಡಿಯೋ ತೋರಿಸಿ ನೋಡು ಅಜ್ಜಿ, ಅಪ್ಪ ಅಮ್ಮನನ್ನು ಹೀಗೆ ಮಾಡಿದ್ದಾನೆ ಎಂದು ಹೇಳಿದೆ. ಮೊಬೈಲ್ನ್ನು ಅಮ್ಮ ಫ್ಯಾನ್ಗೆ ನೇತಾಡುತ್ತಿದ್ದ ದೃಶ್ಯದ ಕಡೆಗೆ ತೋರಿಸಿ ವಿಷಯವನ್ನು ಬಹಿರಂಗ ಪಡಿಸಿದೆ. ಇದನ್ನು ಕಂಡ ಅಜ್ಜಿ ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ. ಈ ಒಂದು ಘಟನೆ ಮೊರದಾಬಾದ್ನ ಬುದ್ಧಿ ವಿಹಾರ ಕಾಲೋನಿಯಲ್ಲಿ ನಡೆದಿದೆ.
ಇದನ್ನು ನೋಡಿದ ಆ ಪುಟ್ಟ ಮಗುವಿನ ಅಜ್ಜಿ ಕೂಡಲೇ ಪೊಲೀಸರಿಗೆ ಹಾಗೂ ಉಳಿದ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಮಗುವಿನ ತಂದೆ ರೋಹಿತ್ ಕುಮಾರ್ ಎಂಬುವವನು ಸಾಫ್ಟ್ವೇರ್ ಇಂಜನೀಯರ್ ಮೂಲತಃ ಘಾಜಿಉಯಾಬಾದ್ನ ಮೋದಿ ನಗರದವನು. ಈಗಾಗಲೇ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಹೀಗೆ ಕೊರಳಿಗೆ ನೇಣು ಬಿಗಿದುಕೊಂಡು ಜೀವಕಳೆದುಕೊಂಡ 35 ವರ್ಷದ ರುಬಿ ರಾಣಿ ಬಿಕಂಪುರನ ಕುಲ್ವಾಡ ಬ್ಲಾಕ್ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಘಾಜಿಯಾಬಾದ್ನ ಮುರಾದ್ನಗರದ ಜಲಾಲಪುರದವರು. 2019ರಲ್ಲಿ ಇವರು ರೋಹಿತ್ ಕುಮಾರ್ ಜೊತೆ ಮದುವೆಯಾಗಿದ್ದರು. ಮೊರದಾಬಾದ್ನಲ್ಲಿ ಬಾಡಿಗೆ ಮನೆಯಲ್ಲಿದ್ದರು.
ಇದನ್ನೂ ಓದಿ:‘45 ಕಿಮೀ ಕಾಲ್ನಡಿಗೆ, ರಸ್ತೆಯಲ್ಲಿ ಶವಗಳ ಕಂಡೆ..’ ಛಿದ್ರಗೊಂಡ US ಕನಸಿನ ಕಣ್ಣೀರ ಕತೆ..!
ಸದ್ಯ ರೋಹಿತ್ ಕುಮಾರ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರುಬಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಸಂತ್ರಸ್ತೆಯ ಕುಟುಂಬದವರು ರುಬಿ ತಾನಾಗಿಯೇ ಜೀವ ಕಳೆದುಕೊಂಡಿಲ್ಲ. ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರೋಹಿತ್ ಕುಮಾರ್ ಪದೇ ಪದೇ ರಾನಿ ರುಬಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಕೆಲವು ದಿನಗಳ ಹಿಂದೆ ರಾಣಿ ಅಕೌಂಟ್ನಿಂದ 50 ಸಾವಿರ ರೂಪಾಯಿಯನ್ನ ತನ್ನ ಅಕೌಂಟ್ಗೆ ಹಾಕಿಸಿಕೊಂಡಿದ್ದನಂತೆ. ಜೋಡಿಗಳಿಬ್ಬರು ಸೇರಿ ಮೋದಿನಗರದಲ್ಲಿ ಒಂದು ಮನೆಯನ್ನು ಖರೀದಿಸಿದ್ದರಂತೆ ಇನ್ಸ್ಟಾಲ್ಮೆಂಟ್ ಕಟ್ಟಲಾಗದ್ದಕ್ಕೆ ಮನೆ ಮಾರೋಣ ಅಂತ ರೋಹಿತ್ ಹಠ ಹಿಡಿದಾಗ ರಾಣಿ ವಿರೋಧಿಸಿದ್ದಳಂತೆ. ರೋಹಿತ್ ಆಕೆಯನ್ನು ಮಾನಸಿಕವಾಗಿ ದೈಹಿಕವಾಗಿ ಪೀಡಿಸಿದ್ದಾನೆ. ಮೊಮ್ಮಗಳು ವಿಡಿಯೋ ಕಾಲ್ ಮಾಡಿದಾಗಲೂ ಕೂಡ ತಂದೆಯೇ ಇದನ್ನು ಮಾಡಿದ್ದು ಎಂದು ಹೇಳಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಗಲ್ಲಿ ಗಲ್ಲಿಯಲ್ಲಿ ಅಕ್ರಮ ವಲಸಿಗರಿಗಾಗಿ ಟ್ರಂಪ್ ಸರ್ಕಾರ ಹುಡುಕಾಟ.. ಭಾರತೀಯರಿಗೂ ಗೇಟ್ ಪಾಸ್
ಆದ್ರೆ ಮತ್ತೊಂದು ಕಡೆ ಪೊಲೀಸರು ಇದು ರಾಣಿ ತಾನೇ ಖುದ್ದಾಗಿ ಜೀವ ಕಳೆದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆಯುವುದಕ್ಕೂ ಮೊದಲು ರಾಣಿ ತನ್ನ ಮೊಬೈಲ್ನಿಂದ ರೋಹಿತ್ಗೆ ಕರೆ ಮಾಡಿದ್ದಳು. ಜೀವ ಕಳೆದುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಪೊಲೀಸರು ರೋಹಿತ್ ಕುಮಾರ್ನ ಫೋನ್, ಲ್ಯಾಪ್ಟಾಪ್ ಹಾಗೂ ಇತರ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಸೀಜ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ