newsfirstkannada.com

ಬಿಜೆಪಿ ಬಳಿಕ ಕಾಂಗ್ರೆಸ್​​ ಸರ್ಕಾರದ ವಿರುದ್ಧ 40% ಕಮಿಷನ್​​ ಆರೋಪ.. ಏನಿದು ಸ್ಟೋರಿ?

Share :

Published February 9, 2024 at 6:12am

  ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರೆದ 40% ಕಮಿಷನ್

  ಪ್ಯಾಕೇಜ್ ಟೆಂಡರ್​ನಿಂದ ಗುತ್ತಿಗೆದಾರರಿಗೆ ಅನ್ಯಾಯ

  ಪ್ಯಾಕೇಜ್ ಟೆಂಡರ್ ರದ್ದು ಮಾಡದಿದ್ರೆ ಹೋರಾಟಕ್ಕೆ ಕರೆ

ಬೆಂಗಳೂರು: 40% ಕಮಿಷನ್​ ಆರೋಪ ಹಿಂದಿನ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು. ಅಷ್ಟೇ ಅಲ್ಲ, ಚುನಾವಣೆಯಲ್ಲಿ ಅದ್ರಿಂದಲೇ ಕೇಸರೆ ಪಡೆಗೆ ಹೊಡೆತವೂ ಬಿದ್ದಿತ್ತು ಅಂದ್ರು ತಪ್ಪಾಗಲ್ಲ. ಇದೀಗ 40 % ಕಮಿಷನ್​ ಬಿಜೆಪಿ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಂಗ್ರೆಸ್​ ಸರ್ಕಾರದಲ್ಲೂ ಈ ಕಮಿಷನ್​ ರೋಗ ಮತ್ತೆ ಕಾಣಿಸಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದ ಗುತ್ತಿಗೆದಾರರ ಸಂಘ ಆರೋಪಗಳ ಸುರಿಮಳೆಗೈದಿದೆ.

ಬಿಜೆಪಿ ಸರ್ಕಾರವಿದ್ದಾಗ ಮಾತ್ರವಲ್ಲ ಕಾಂಗ್ರೆಸ್​ ಸರ್ಕಾರದಲ್ಲೂ 40% ಕಮಿಷನ್ ಮುಂದುವರೆದಿದೆ. ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಈಗಿನ ಸರ್ಕಾರದಲ್ಲೂ 40% ಕಮಿಷನ್ ಮುಂದುವರೆದಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಆದ್ರೆ, ಆಗ ಶಾಸಕರೇ ನೇರವಾಗಿ ಹಣ ಕೇಳ್ತಿದ್ರು.ಆದ್ರೀಗ ಅಧಿಕಾರಿಗಳೇ ಹಣ ಕೇಳ್ತಿದ್ದಾರೆ ಎಂದು ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳಿಂದಲೇ ರಾಜ್ಯದಲ್ಲಿ ಭ್ರಷ್ಟಾಚಾರ ಬೇರೂರಿದೆ. ಮಿತಿಮೀರಿದ ಭ್ರಷ್ಟಾಚಾರಿ ಅಧಿಕಾರಿಗಳಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಯಾಗಳಿದ್ದಾರೆ. ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು. ಸರ್ಕಾರ ಕೂಡಲೇ ಪ್ಯಾಕೇಜ್ ಸಿಸ್ಟಮ್ ಸ್ಟಾಪ್ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ, ಬೇರೆ ಜಿಲ್ಲೆಗಳಲ್ಲೂ ಕರೆದಿದ್ದಾರೆ. ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ದುಡ್ಡು ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ, ಇದೀಗ ಪ್ಯಾಕೇಜ್​ ಟೆಂಡರ್​ ಮೂಲಕ ಗುತ್ತಿಗೆ ನೀಡಲಾಗ್ತಿದ್ದು, ಇದ್ರಿಂದಾಗಿ ಅರ್ಹ ಗುತ್ತಿಗೆದಾರರಿಗೆ ಅನ್ಯಾಯ ಆಗ್ತಿದೆ ಎಂದು ಕೆಂಪಣ್ಣ ಅಸಮಾಧಾನ ಹೊರಹಾಕಿದ್ರು. ನೆರೆ ರಾಜ್ಯದ ಗುತ್ತಿಗೆ ಅನಕೂಲ ಮಾಡಿಕೊಡಲು ಪ್ಯಾಕೇಜ್ ಟೆಂಡರ್ ಮಾಡ್ತಾ ಇದ್ದಾರೆ. ಪ್ಯಾಕೇಜ್ ಟೆಂಡರ್ ಪದ್ಧತಿ ಭ್ರಷ್ಟಾಚಾರಕ್ಕೆ ಅಸ್ಪದವಾಗಿದೆ ಎಂದ್ರು. ಇನ್ನೂ, ಈ ಪ್ಯಾಕೇಜ್ ಟೆಂಡರ್ ರದ್ದು ಮಾಡದೇ ಇದ್ರೆ ಹೋರಾಟ ಮಾಡಲು ಕರೆ ಕೊಡುತ್ತೇವೆ ಎಂದು ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಕೇವಲ ಒಂದು ವಾರದಲ್ಲಿ ಬಿಬಿಎಂಪಿಯಲ್ಲಿ 300 ಕೋಟಿ ಪ್ಯಾಕೇಜ್ ಟೆಂಡರ್​ನ್ನ ಆಹ್ವಾನಿಸಲಾಗಿದ್ದು, ಈ ಬಗ್ಗೆಯೂ ಕೆಂಪಣ್ಣ ಅನುಮಾನ ವ್ಯಕ್ತಪಡಿಸಿದ್ರು. ಕಾಮಗಾರಿ ‌ಪೂರ್ಣಗೊಳಿಸಿ 2 ವರ್ಷ ಆದ್ರೂ ಇನ್ನೂ ಹಣ ಬಿಡುಗಡೆ ಆಗಿಲ್ಲ. ಹಿಂದಿನ ಸರ್ಕಾರದಲ್ಲಿ ಕಮಿಷನ್​ ಹಾವಳಿ, ಈಗಿನ ಸರ್ಕಾರದಲ್ಲಾದ್ರೂ ಕಮಿಷನ್​ ಮುಕ್ತವಾಗುತ್ತೆ. ಬಾಕಿ ಹಣ ಪಾವತಿಯಾಗುತ್ತೆ ಅಂತ ಕಾದಿದ್ದ ಗುತ್ತಿಗೆದಾರರಿಗೆ ಇದೀಗ ಮತ್ತೆ ಕಮಿಷನ್​ ಭೂತ ಬೆನ್ನತ್ತಿದೆ. ಅಷ್ಟೇ ಅಲ್ಲ ಅದರ ಜೊತೆಗೆ ಪ್ಯಾಕೇಜ್ ಟೆಂಡರ್​ ಕಂಟಕ ಕೂಡ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಬಳಿಕ ಕಾಂಗ್ರೆಸ್​​ ಸರ್ಕಾರದ ವಿರುದ್ಧ 40% ಕಮಿಷನ್​​ ಆರೋಪ.. ಏನಿದು ಸ್ಟೋರಿ?

https://newsfirstlive.com/wp-content/uploads/2023/08/KEMPANNA.jpg

Load More