40 ದಿನಗಳಲ್ಲಿ ಈ ಮಹಿಳೆಯ ಗಂಡ ಮಾಡಿದ್ದು ಕೇವಲ 6 ಬಾರಿ ಸ್ನಾನ
ಗಂಡನ ವಿಚಿತ್ರ ಹವ್ಯಾಸಕ್ಕೆ ಬೇಸತ್ತು ಡಿವೋರ್ಸ್ ಮೊರೆ ಹೋದ ಪತ್ನಿ
ಹೆಂಡತಿ ವಿಚ್ಛೇದನದ ಅರ್ಜಿಗೆ ಕೊಳಕು ಗಂಡನ ಉತ್ತರ ಏನು ಗೊತ್ತಾ?
ಆಗ್ರಾ: ಗಂಡ, ಹೆಂಡತಿ ಅನ್ಯೋನ್ಯವಾಗಿದ್ರೆ ಪ್ರೀತಿ. ಇಲ್ಲದಿದ್ದರೆ ಫಜೀತಿ. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದರೆ ಸಂಸಾರ ನಡೆಸೋದು ಕಷ್ಟವಾಗುತ್ತೆ. ಈಗಂತೂ ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲಾ ಡಿವೋರ್ಸ್ ಮೊರೆ ಹೋಗುವುದು ಹೆಚ್ಚಾಗಿದೆ. ಇಂತಹದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಕಾರಣ ಮಾತ್ರ ಸ್ವಲ್ಪ ವಿಚಿತ್ರವಾಗಿದೆ.
ಇತ್ತೀಚಿಗೆ ಮದುವೆಯಾದ ಮಹಿಳೆಯೊಬ್ಬರು ತನ್ನ ಗಂಡ ಪ್ರತಿದಿನ ಸ್ನಾನ ಮಾಡುವುದಿಲ್ಲ ಅನ್ನೋ ಒಂದೇ ಕಾರಣಕ್ಕೆ ಡಿವೋರ್ಸ್ ಕೇಳಿದ್ದಾರೆ. ಈ ಗಂಡ, ಹೆಂಡತಿ ಮದುವೆಯಾಗಿ ಕೇವಲ 40 ದಿನಗಳಷ್ಟೇ ಕಳೆದು ಹೋಗಿದೆ. ಈ 40 ದಿನಗಳಲ್ಲಿ ಈ ಮಹಿಳೆಯ ಗಂಡ ಕೇವಲ 6 ಬಾರಿ ಸ್ನಾನ ಮಾಡಿದ್ದಾನಂತೆ. ಹೀಗಾಗಿ ಆಗ್ರಾದ ನವವಿವಾಹಿತೆ ಡಿವೋರ್ಸ್‌ಗಾಗಿ ಅರ್ಜಿ ಹಾಕಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ ಮಹಿಳೆಯ ಡಿವೋರ್ಸ್ ಅರ್ಜಿ ಸಾಕಷ್ಟು ವಿಚಿತ್ರ ಕಾರಣಗಳು ಉಲ್ಲೇಖವಾಗಿದೆ. ಅದು ಏನಂದ್ರೆ ತನ್ನ ಗಂಡನಿಗೆ ಪ್ರತಿದಿನ ಸ್ನಾನ ಮಾಡುವ ಹವ್ಯಾಸವೇ ಇಲ್ಲ. ತನಗೆ ಆತನ ದೇಹದಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ನನಗೆ ಈ ಕೊಳಕು ಗಂಡನಿಂದ ಡಿವೋರ್ಸ್ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: VIDEO: ಡಿವೋರ್ಸ್ ಪಾರ್ಟಿ ಆಯೋಜಿಸಿ ಹುಚ್ಚೆದ್ದು ಕುಣಿದ ಮಹಿಳೆ! ಈಕೆ ಯಾರು ಗೊತ್ತಾ?
ಈ ಮಹಿಳೆಯನ್ನು ಮದುವೆಯಾದ ಗಂಡ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾನೆ. ದೇಹದ ವಾಸನೆಯನ್ನು ಹೆಂಡತಿ ತಾಳಲಾರದೇ ಮದುವೆಯಾದ 40ನೇ ದಿನಕ್ಕೆ ತನ್ನ ದಾಂಪತ್ಯ ಜೀವನ ಅಂತ್ಯಗೊಳಿಸಲು ಮುಂದಾಗಿದ್ದಾರೆ. ಗಂಡನ ಮನೆ ಬಿಟ್ಟು ತವರು ಮನೆಗೆ ಹಿಂತಿರುಗಿದ್ದಾಳೆ. ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪದಲ್ಲೂ ಮಹಿಳೆಯ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.
ಸ್ನಾನ ಮಾಡದ ಗಂಡ ಹೇಳೋದೇನು?
ಹೆಂಡತಿಯ ಆರೋಪಕ್ಕೆ ಆ ವ್ಯಕ್ತಿ ಕೂಡ ಶಾಕಿಂಗ್ ಉತ್ತರ ಕೊಟ್ಟಿದ್ದಾನೆ. ಫ್ಯಾಮಿಲಿ ಕೋರ್ಟ್ ಸಲಹೆಗಾರರ ಪ್ರಶ್ನೆಗೆ ಹೌದು.. ನಾನು ನೀರಿಗೆ ಪವಿತ್ರಾ ಗಂಗಾಜಲ ಹಾಕಿ ವಾರಕ್ಕೊಮ್ಮೆ ಸ್ನಾನ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾನೆ. ಇನ್ನು ಮುಂದೆ ಹೆಂಡತಿಗಾಗಿ ನಾನು ಬದಲಾಗುತ್ತೇನೆ. ದೇಹದ ವಾಸನೆ ತಡೆಯಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ. ಇಷ್ಟಾದರೂ ಆ ನವವಿವಾಹಿತೆ ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ