newsfirstkannada.com

×

ಮೇಘಸ್ಫೋಟ.. ಮಳೆಯಿಂದ 40 ಜನರು ಸಾವು, 329 ಕೋಟಿಗಳಷ್ಟು ನಷ್ಟ

Share :

Published July 21, 2024 at 7:43am

Update July 21, 2024 at 7:45am

    ಮಳೆಯಿಂದಾಗಿ ಭೀಕರ ಪ್ರವಾಹ, ಕೊಚ್ಚಿ ಹೋದ ವ್ಯಕ್ತಿ

    ಮಗಳನ್ನು ಪ್ರವಾಹದಿಂದ ಕಾಪಾಡಿ ಸಾವನ್ನಪ್ಪಿದ ತಂದೆ

    ಇಲ್ಲಿಯವರೆಗೆ 40 ಜನರ ಸಾವಿಗೆ ಕಾರಣವಾಗಿದೆ ಮಳೆ

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಜನಜೀವನ ಅಸ್ತವ್ಯಸ್ತವಾಗಲು ಭೀಕರ ಮಳೆ ಕಾರಣವಾಗಿದೆ. ಜೂನ್​ 27ರಿಂದ ಜುಲೈ 20ರವರೆಗೆ ಸುಮಾರು 40 ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಳೆಯಿಂದಾಗಿ ಹಿಮಾಚಲ ಪ್ರದೇಶವು 329 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಸಿರ್ಮೌರ್​ ಜಿಲ್ಲೆಯ ಪೌಂಟಾ ಉಪವಿಭಾಗದ ಅಂಜ್​ ಭೋಜ್​ ಪ್ರದೇಶದ ರೈತುವಾ ಗ್ರಾಮದಲ್ಲಿ ಮಳೆಯಿಂದ ಮೇಘ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಇದನ್ನೂ ಓದಿ: VIDEO: ನೋಡ ನೋಡುತ್ತಿದ್ದಂತೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಅಪರಿಚಿತ ಯುವಕ.. ಮೊಬೈಲ್​ನಲ್ಲಿ ದೃಶ್ಯ ಸೆರೆ

ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ದಂಡಾ ಅಂಜ್​ ಗ್ರಾಮದ ಅಮನ್​ ಸಿಂಗ್​ ಎಂದು ಗುರುತಿಸಲಾಗಿದೆ. 48 ವರ್ಷದ ಈ ವ್ಯಕ್ತಿಗಾಗಿ ನಿರಂತರವಾಗಿ ಹುಡುಕಾಟ ನಡೆಸಲಾಗಿದೆ. ಕೊನೆಗೆ ಅಮನ್​​ ಸಿಂಗ್​ ಮೃತದೇಹ ಟನ್ಸ್​ ನದಿಯಲ್ಲಿ ಸಿಕ್ಕಿದೆ.

ಇದನ್ನೂ ಓದಿ: 34 ಗಾಯ, 5 ಗಂಟೆ ಡಿ ಗ್ಯಾಂಗ್‌ ಟಾರ್ಚರ್‌.. ಪಟ್ಟಣಗೆರೆ ಶೆಡ್‌ ನರಕದ 10 ಭಯಾನಕ ಸತ್ಯಗಳು ಬಹಿರಂಗ

ಪ್ರವಾಹ ಉಂಟಾದಂತೆ ಅಮನ್​ ತನ್ನ ಮಗಳೊಂದಿಗೆ ಅಲ್ಲಿದ್ದ ಗೋಶಾಲೆಯತ್ತ ಓಡಿ ಹೋದರು. ಆದರೆ ಈ ವೇಳೆ ರಭಸವಾಗಿದ್ದ ಪ್ರವಾಹಕ್ಕೆ ಮಗಳನ್ನು ಬಚಾವ್​ ಮಾಡಿದ ಅವನ್​ ಕೊಚ್ಚಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಘಸ್ಫೋಟ.. ಮಳೆಯಿಂದ 40 ಜನರು ಸಾವು, 329 ಕೋಟಿಗಳಷ್ಟು ನಷ್ಟ

https://newsfirstlive.com/wp-content/uploads/2024/07/Himachal-pradesh.jpg

Load More