/newsfirstlive-kannada/media/post_attachments/wp-content/uploads/2025/04/ice-cream.jpg)
ಬೆಂಗಳೂರು: 400 ರೂಪಾಯಿ ಐಸ್​ಕ್ರೀಂಗಾಗಿ ಮಹಿಳೆಯೊಬ್ಬರು 40 ಸಾವಿರ ರೂಪಾಯಿ ಕಳೆದುಕೊಂಡಿರೋ ಘಟನೆ ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
/newsfirstlive-kannada/media/post_attachments/wp-content/uploads/2024/06/ICE_CREAM.jpg)
ಮಹಿಳೆಯೊಬ್ಬರು ಬಿಗ್​ ಬಾಸ್ಕೆಟ್ ಆಪ್​ನಲ್ಲಿ 2 ಕೆ.ಜಿ ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತುಂಬರಿ ಸೊಪ್ಪು, 1 ಕೆ.ಜಿ ಐಸ್ ಕ್ರೀಂ ಅರ್ಡರ್ ಮಾಡಿದ್ದಾರೆ. ಆದ್ರೆ, ಡೆಲಿವರಿ ಬಾಯ್ ಕೇವಲ 2 ಕೆ.ಜಿ ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತುಂಬರಿ ಸೊಪ್ಪು ನೀಡಿದ್ದಾನೆ. ಆದ್ರೆ ಐಸ್ ಕ್ರೀಂ ಇಲ್ಲದಿದ್ದಕ್ಕೆ ನೆಟ್ ಅಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/ICE-CREAM.jpg)
ಹೀಗೆ ಮೊದಲು ಕರೆ ಮಾಡಿದಾಗ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಬಂದಿದೆ. ಮತ್ತೆ ಗೂಗಲ್​ನಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ ಮಹಿಳೆಯೊಂದಿಗೆ ಮಾತನಾಡಿದ್ದಾನೆ. ಆಗ ಆ ವ್ಯಕ್ತಿ ಮಹಿಳೆ ಆರ್ಡರ್ ಮಾಡಿದ್ದ ಲಿಸ್ಟ್ ಕೇಳಿದ್ದಾನೆ. ತಾನು ಮಾಡಿದ ಆರ್ಡರ್ ಬಗ್ಗೆ ಮಹಿಳೆ ತಿಳಿಸಿದ್ದಾರೆ. ಆಗ 1 ಕೆ.ಜಿ ಐಸ್ ಕ್ರೀಂನ 400 ರೂಪಾಯಿಯನ್ನು ವಾಪಸ್ಸು ನೀಡುವುದಾಗಿ ಮೊಬೈಲ್​ನಲ್ಲಿ ಕೆಲವು ಆಪ್ಶನ್ ಕ್ಲಿಕ್ ಮಾಡುವಂತೆ ತಿಳಿಸಿ 40 ಸಾವಿರ ವಂಚನೆ ಮಾಡಿದ್ದಾನೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us