ಕಳೆದ 48 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಕೇಳಿ ಬರುತ್ತಿದೆ ಭಾರತದ ಈ ಹಾಡು.. ಬೆರಗಾಗಿದ್ದೇಕೆ ಪ್ರಪಂಚ?

author-image
Gopal Kulkarni
Updated On
ಕಳೆದ 48 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಕೇಳಿ ಬರುತ್ತಿದೆ ಭಾರತದ ಈ ಹಾಡು.. ಬೆರಗಾಗಿದ್ದೇಕೆ ಪ್ರಪಂಚ?
Advertisment
  • ಐದು ದಶಕಗಳಿಂದ ಬಾಹ್ಯಾಕ್ಯಾಶದಲ್ಲಿ ಮಾರ್ಧನಿಸುತ್ತಿದೆ ಭಾರತದ ಹಾಡು
  • 1977ರಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಹೊರಟ ನೌಕೆಗಳಲ್ಲಿತ್ತು ಆ ಒಂದು ಗೀತೆ
  • ಅಂದಿನಿಂದ ಇಂದಿನವರೆಗೂ ಕೇಸರಿಬಾಯಿ ಕೇರ್ಕರ್​ ಅವರ ಆ ಹಾಡು ಕೇಳುತ್ತದೆ

ಕಳೆದ ಐದು ದಶಕಗಳಿಂದ ಬಾಹ್ಯಾಕಾಶದಲ್ಲಿ ನಿರಂತರವಾಗಿ ಭಾರತದ ಒಂದು ಹಾಡು ಕೇಳಿ ಬರುತ್ತದೆ ಎಂದರೆ ಅದು ನಂಬಲಿಕ್ಕೆ ಕೊಂಚ ಆಶ್ಚರ್ಯವಾಗಬಹುದು ಹಾಗೂ ಹಿಂಜರಿಯಲುಬಹುದು. ಆದರೆ ಅದು ಸತ್ಯ ಕಳೆದ 48 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಭಾರತದ ಒಂದು ಹಾಡು ನಿರಂತರವಾಗಿ ಕೇಳಿ ಬರುತ್ತಿದೆ. ಇಲ್ಲಿ ಅದರ ಬಗ್ಗೆ ನಾವು ನಿಮಗೆ ವಿಸ್ತಾರವಾಗಿ ಹೇಳುತ್ತೇವೆ.

publive-image

ಇದು 1977ನೇ ಇಸ್ವಿಯ ಮಾತು. ಆಗ ನಾಸಾ ವೊಯಾಜರ್ 1 ಮತ್ತು ವೊಯಾಜರ್​ 2 ಎಂಬ ಬಾಹ್ಯಾಕಾಶ ನೌಕೆಯನ್ನು ಲಾಂಚ್ ಮಾಡಿತ್ತು. ವೊಯಾಜರ್ ಮತ್ತು 2 ಬಾಹ್ಯಾಕಾಶ ಸಂಶೋಧನೆಗೆ ಹಾಗೂ ತನಿಖೆಯ ಉದ್ದೇಶದಿಂದಾಗಿ ಉಡಾಯಿಸಲಾಗಿತ್ತು. ಸೌರಮಂಡಲ ಹಾಗೂ ಬಾಹ್ಯಾಕಾಶದ ಅಂತರನಕ್ಷತ್ರೀಯ ಅಧ್ಯಯನಕ್ಕಾಗಿ ಈ ಎರಡು ಬಾಹ್ಯಾಕಾಶ ನೌಕೆಗಳು ಅಂತರಿಕ್ಷಕ್ಕೆ ನೆಗೆದಿದ್ದವು.

ಇದನ್ನೂ ಓದಿ:ಇಂದಿಗೂ ಈ ದೇಶಗಳಿಗೆ ಬ್ರಿಟಿಷ್ ರಾಜಮನೆತನವೇ ಸರ್ವಸ್ವ..ಸ್ವಾತಂತ್ರ್ಯದ ನಂತರವೂ ಬಿಟ್ಟಿಲ್ಲ ಆಂಗ್ಲರ ರಾಜಕೀಯ ನಂಟು!

publive-image

ಸೈನ್ಸ್ ನಾಸಾ ಗವರ್ನಮೆಂಟ್​ ಅವರು ಹೇಳುವ ಪ್ರಕಾರ ಇದು ಪೃಥ್ವಿಯಿಂದ ಅತ್ಯಂತ ದೂರಕ್ಕೆ ಮಾನವ ನಿರ್ಮಿತ ವಸ್ತುವೊಂದು ಮೊದಲ ಬಾರಿಗೆ ಹಾರಿದ್ದು ವೋಯಾಜರ್ 1 ಮತ್ತು 2.
ಪೃಥ್ವಿಯಿಂದ ಸೂರ್ಯನು ಸುಮಾರು 14 ಕೋಟಿ 96 ಲಕ್ಷ ಕಿಲೋಮೀಟರ್ ದೂರದಲ್ಲಿದ್ದಾನೆ. ನಾಸಾ ಹೇಳುವ ಪ್ರಕಾರ, ಈ ಬಾಹ್ಯಾಕಾಶ ನೌಕೆಗಳು ಪೃಥ್ವಿಯಿಂದ ಸುಮಾರು 150 ಪಟ್ಟು ದೂರ ಸಾಗಿದ್ದವಂತೆ. ವೊಯಾಜರ್-1ನ್ನು 05 ಸೆಪ್ಟೆಂಬರ್ 1977ರಲ್ಲಿ ಮತ್ತು ವೊಯಾಜರ್ 2ನ್ನು ಆಗಸ್ಟ್​ 20, 1977ರಂದು ಲಾಂಚ್ ಮಾಡಲಾಗಿತ್ತು. ಈ ಎರಡು ನೌಕೆಗಳ ಮೇಲೆ ಬಂಗಾರದ, ಬೆಳ್ಳಿ ಹಾಗೂ ತಾಮ್ರದ ಡಿಸ್ಕ್​ಗಳನ್ನು ಅಳವಡಿಸಲಾಗಿದೆ.

publive-image

ಅದರಲ್ಲಿ ಅನೇಕ ಅನೇಕ ಭಾಷೆಯ ಧ್ವನಿಗಳನ್ನು ಹಾಗೂ ದೊಡ್ಡ ದೊಡ್ಡ ಸಂಗೀತಗಾರರ ಹಾಡುಗಳನ್ನು ರಿಕಾರ್ಡ್ ಮಾಡಿಕೊಳ್ಳಲಗಿತ್ತು.ಭಾರತದ ಶಾಸ್ತ್ರೀಯ ಸಂಗೀತದ ಗೀತೆಯಾದ ‘ಜಾತಾ ಕಹಾ ಹೋ‘ ಎಂಬ ಹಾಡನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಜೈಪುರದ ಸುರಶ್ರೀ ಎಂದು ಪ್ರಸಿದ್ಧಿ ಪಡೆದಿದ್ದ ಕೇಸರಿಬಾಯಿ ಕೇರ್ಕರ್ ಅವರು ಹಾಡಿದ್ದರು. ಅದು ಮಾತ್ರವಲ್ಲ ಮಾನವರ ಗುರುತನ್ನು ಕೂಡ ಹಲವು ರೀತಿಯಲ್ಲಿ ಕೋಡಿಂಗ್ ಮಾಡಿ ಇದರಲ್ಲಿ ಸೇರಿಸಲಾಗಿತ್ತು. ಕಾರಣ ಬೇರೆ ಜಗತ್ತಿನ ಯಾರದಾದರು ಕೈಗೆ ಇದು ಸಿಕ್ಕಲ್ಲಿ ಅವರಿಗೆ ನಮ್ಮ ಬಗ್ಗೆ ಗೊತ್ತಾಗಲಿ ಎಂಬ ಉದ್ದೇಶವಿತ್ತು.

ಇದನ್ನೂ ಓದಿ:BREAKING: ಮಾಸ್ಕೋ ಕಟ್ಟಡದ ಮೇಲೆ ಉಕ್ರೇನ್​ ಡ್ರೋನ್ ದಾಳಿ.. ಫಲಿಸದ ಶಾಂತಿ ಮಾತುಕತೆ!

ಈ ಒಂದು ಮಿಷನ್​ ಅಸಲಿ ಗುರಿ ನಮ್ಮ ಸೌರಮಂಡಲದಲ್ಲಿರುವ ಗ್ರಹಗಳ ಅಧ್ಯಯನದ ಬಳಿಕ ಉಳಿದ ಸೌರಮಂಡಲದ ಅಧ್ಯಯನವನ್ನು ಮಾಡುವುದಾಗಿತ್ತು. ಸದ್ಯ ಇದು ಈಗ ಅಂತರಿಕ್ಷದ ಶೂನ್ಯ ಪಥದಲ್ಲಿ ಪರಿಭ್ರಮಣೆ ಮಾಡುತ್ತಿದೆ. ಇಂದಿಗೂ ಕೂಡ ಕೇಸರಿ ಬಾಯಿ ಕೇರ್ಕರ್ ಅವರ ಜಾತಾ ಕಹಾ ಹೋ ಹಾಡು ಬಾಹ್ಯಾಕಾಶದಲ್ಲಿ ಕೇಳಿಬರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment