/newsfirstlive-kannada/media/post_attachments/wp-content/uploads/2024/01/bihar-3.jpg)
ಮದುವೆ ಆಗೋದು ಅಂದ್ರೆ ಈಗಿನ ಕಾಲಕ್ಕೆ ದುಬಾರಿ ಎಂದೇ ಸರಿ. ಮನೆ ಕಟ್ಟಿ ನೋಡು ಮದುವೆ ಆಗಿ ನೋಡು ಎಂಬ ದೊಡ್ಡವರ ಮಾತಂತು ಈಗೀನ ಸಮಯಕ್ಕೆ ಸರಿಯಾಗಿ ತಾಳೆಯಾಗುತ್ತದೆ. ಆದರೆ ಇಲ್ಲೊಂದು ಮದುವೆ ಮಾತ್ರ ಕೊಂಚ ಚರ್ಚೆಯನ್ನು ಹುಟ್ಟುಹಾಕಿದೆ. ಅದೇನೆಂದರೆ 40 ವರ್ಷದ ಶಿಕ್ಷಕಿಯೊಬ್ಬರು 20 ವರ್ಷ ವಿದ್ಯಾರ್ಥಿಯನ್ನು ವಿವಾಹವಾಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಮದುವೆಯಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆಯೇ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಅನೇಕರು ವೀಕ್ಷಿಸಿದ್ದಾರೆ. ಜೊತೆಗೆ ಚರ್ಚೆಯನ್ನು ಮಾಡುತ್ತಿದ್ದಾರೆ.
"Love is Blind" "Unique Love Story"
Woman of 40 married 20 year old boy.
Societal mongers question Indian culture.
Love can transcend cultural norms.
Love evolves the dynamics of relationships. #Samastipur_Biharpic.twitter.com/3RNkQ6WfSE— Nadeem Khorajia (@NadeemKhorajia)
"Love is Blind" "Unique Love Story"
Woman of 40 married 20 year old boy.
Societal mongers question Indian culture.
Love can transcend cultural norms.
Love evolves the dynamics of relationships. #Samastipur_Biharpic.twitter.com/3RNkQ6WfSE— Nadeem Khorajia (@NadeemKhorajia) January 3, 2024
">January 3, 2024
ವಿಡಿಯೋದಲ್ಲಿ ಏನಿದೆ?
40 ವರ್ಷದ ಶಿಕ್ಷಕಿ ಮಧು ಮಗಳಂತೆ ಸಿಂಗಾರಗೊಂಡಿದ್ದಾರೆ. ವಿದ್ಯಾರ್ಥಿ ಸಿಂಪಲ್ಲಾಗಿ ಬಟ್ಟೆ ಧರಿಸಿದ್ದಾನೆ. ಅತ್ತ ವಿದ್ಯಾರ್ಥಿ ಮತ್ತು ಟೀಚರ್ ವಿವಾಹ ಲವ್ ಮ್ಯಾರೇಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ದೃಶ್ಯದಲ್ಲಿ ವಿಡಿಯೋ ಚಿತ್ರೀಕರಿಸುವ ವ್ಯಕ್ತಿಯೊಬ್ಬ ಹಾಡನ್ನು ಹಾಡುತ್ತಿರುವುದು ಕೇಳಿಬಂದಿದೆ.
ಮತ್ತೊಂದೆಡೆ ಟ್ವಿಟ್ಟರ್ನಲ್ಲಿ 40 ವರ್ಷದ ಶಿಕ್ಷಕಿ ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಹುಡುಗನನ್ನು ವಿವಾಹವಾಗಿದ್ದಕ್ಕೆ ಚರ್ಚೆ ಹುಟ್ಟುಹಾಕಿದೆ. ಆದರೆ ಕೆಲವರು ಪ್ರೀತಿ ಅವೆಲ್ಲವನ್ನ ಮರೆಸುತ್ತದೆ ಎಂದು ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ