newsfirstkannada.com

ಸಮುದ್ರ ಮಟ್ಟದಿಂದ 4000 ಅಡಿ ಎತ್ತರ.. ದೇವಿರಮ್ಮನನ್ನು ಕಾಣಲು ಹರಿದು ಬಂದ ಭಕ್ತಸಾಗರ

Share :

Published November 13, 2023 at 7:02am

Update November 13, 2023 at 10:12am

    ಬೆಟ್ಟದ ತುದಿಯಲ್ಲಿ ನೆಲೆಸಿದ್ದಾಳೆ ಬಿಂಡಿಗ ದೇವಿರಮ್ಮ

    ಕಿರಿದಾದ ದಾರಿಯಲ್ಲಿ ಬೆಟ್ಟವನ್ನ ಏರುವುದೇ ದೊಡ್ಡ ಸಾಹಸ

    ದೀಪಾವಳಿಯ ಮೊದಲನೆಯ ದಿನ ಮಾತ್ರ ಬೆಟ್ಟ ಹತ್ತಲು ಅವಕಾಶ

ದೀಪಾವಳಿ ಬಂತು ಅಂದ್ರೆ ಸಾಕು ರಾಜ್ಯದ ಜನರಿಗೆ ಸಂತಸದ ಸುದ್ದಿ. ಒಂದು ಕಡೆ ಪಟಾಕಿ ಸಿಡಿಸುವ ಖುಷಿ ಆದ್ರೆ, ಇನ್ನೊಂದು ಕಡೆ ವರ್ಷಕ್ಕೆ ಒಮ್ಮೆ ದರ್ಶನ ನೀಡುವ ದೇವಿರಮ್ಮನ ನೋಡೋ ಅವಕಾಶ ಸಿಗುತ್ತೆ. ವರ್ಷದಿಂದ ಕಾದು ಕುಳಿತಿದ್ದ ಭಕ್ತರು ದೇವಿರಮ್ಮನ ದರ್ಶನ ಪಡೆದು ಪುನೀತರಾಗಿದ್ದಾರೆ.

ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ದೇಗುಲ

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಬಿಂಡಿಗ ದೇವಿರಮ್ಮ ಬೆಟ್ಟದ ತುದಿಯಲ್ಲಿ ನೆಲೆಸಿದ್ದಾಳೆ. ರಾಜ್ಯದ ಅತ್ಯಂತ ಕಿರಿದಾದ ಬೆಟ್ಟಗಳಲ್ಲಿ ಒಂದಾದ ಈ ದೇವಿರಮ್ಮ ಬೆಟ್ಟವನ್ನು ಹತ್ತಲು ವರ್ಷದಲ್ಲಿ ಒಂದು ದಿನ ಅಂದ್ರೆ, ದೀಪಾವಳಿಯ ಮೊದಲನೆಯ ದಿನ ಮಾತ್ರ ಬೆಟ್ಟ ಹತ್ತಲು ಅವಕಾಶವಿರುತ್ತದೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ದೇವಿರಮ್ಮ ನೆಲೆಯೂರಿದ್ದಾಳೆ. ಈ ಬೆಟ್ಟ ನೋಡಲು ಎಷ್ಟು ಸುಂದರವೋ, ಅಷ್ಟೇ ಭಯಂಕರವೂ ಆಗಿದೆ. ಕಾಫೀ ತೋಟದ ಮಧ್ಯದಲ್ಲಿ ದುರ್ಗಮ ಹಾದಿಯಲ್ಲಿ ದೇವಿರಮ್ಮನ ಬೆಟ್ಟವನ್ನು ಹತ್ತುವುದೇ ಒಂದು ಸಾಹಸ. ಇನ್ನು ಮಧ್ಯರಾತ್ರಿಯೇ ಬೆಟ್ಟದತ್ತ ದೌಡಾಯಿಸಿದ ಭಕ್ತರು ರಾತ್ರಿಯಿಡೀ ಬರಗಾಲಲ್ಲಿ ಬೆಟ್ಟವನ್ನು ಏರಿ ತಾಯಿ ದೇವಿರಮ್ಮನ ದರ್ಶನವನ್ನು ಪಡೆದು ಧನ್ಯರಾದ್ರು.

ದೇವಿರಮ್ಮ ಜಾತ್ರೆಗೆ ಹರಿದು ಬಂದ ಭಕ್ತಸಾಗರ

ಇನ್ನು ಮಲ್ಲೇನಹಳ್ಳಿಯಿಂದ ಅತೀ ಹೆಚ್ಚು ಭಕ್ತರು ಬೆಟ್ಟವನ್ನ ಹತ್ತಿದ್ರೆ ಅರಶಿನ ಗುಪ್ಪೆ, ಮಾಣಿಕ್ಯದಾರದಿಂದಲೂ ಸಾಲು ಸಾಲು ಭಕ್ತಗಣವೇ ಹರಿದು ಬಂತು. ಈ ಬಾರಿ 70 ಸಾವಿರಕ್ಕೂ ಅಧಿಕ ಭಕ್ತರು ದೇವಿರಮ್ಮನ ದರ್ಶನ ಪಡೆದಿದ್ದಾರಂತೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೂ ಸೂಕ್ತ ಬಂದೋಬಸ್ತ್​ ವ್ಯವಸ್ಥೆ ಮಾಡಿತ್ತು.

ಬೆಟ್ಟದಲ್ಲಿ ದೇವಿರಮ್ಮನ ದರ್ಶನದ ಬಳಿಕವೇ ಬಿಂಡಿಗ ಮಲ್ಲೇನಗಳ್ಳಿಯ ದೇವಿರಮ್ಮನ ಜಾತ್ರಾ ಮಹೋತ್ಸವ ಚಾಲನೆ ಸಿಗುತ್ತೆ. ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದ್ದು, ಸಾವಿರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮುದ್ರ ಮಟ್ಟದಿಂದ 4000 ಅಡಿ ಎತ್ತರ.. ದೇವಿರಮ್ಮನನ್ನು ಕಾಣಲು ಹರಿದು ಬಂದ ಭಕ್ತಸಾಗರ

https://newsfirstlive.com/wp-content/uploads/2023/11/Deviramma-Chikamagaluru.jpg

Load More