newsfirstkannada.com

’ನಾನೊಬ್ಬ ರೈತನ ಮಗ.. ನಮ್ಮ ಕುಟುಂಬದಲ್ಲೇ ನಾನು ಮೊದಲ ಪದವೀಧರ‘- UPSC ಪಾಸ್​ ಆದ ಅಭ್ಯರ್ಥಿ ಸಂತಸ

Share :

Published April 16, 2024 at 6:31pm

Update April 16, 2024 at 6:32pm

    UPSCಯಲ್ಲಿ ಪಾಸ್​ ಆಗಿರೋ ಅಭ್ಯರ್ಥಿ ಮುಗಿಲನ್ ಹೇಳಿದ್ದೇನು?

    ಇಂಡಿಯಾ ಫಾರ್ IASನಿಂದ ತರಬೇತಿ ಪಡೆದ 12 ಕನ್ನಡಿಗರು ಆಯ್ಕೆ

    ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ಮನೆ ಮಾಡಿದ ಸಂತಸ

ಬೆಂಗಳೂರು: 2023ನೇ ಸಾಲಿನ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟು 1,016 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ. ಈ 1,016 ಅಭ್ಯರ್ಥಿಗಳ ಪೈಕಿ ಕರ್ನಾಟಕದಲ್ಲಿ ಒಟ್ಟು 25 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ. 25 ಅಭ್ಯರ್ಥಿಗಳಲ್ಲಿ ಒಟ್ಟು 12 ಕನ್ನಡಿಗರು ಇಂಡಿಯಾ ಫಾರ್ ಐಎಎಸ್​ನಿಂದ ತರಬೇತಿ ಪಡೆದವರಾಗಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆ ಫಲಿತಾಂಶ ಪ್ರಕಟ: ಫಸ್ಟ್‌ RANK ಬಂದ ಆದಿತ್ಯ ಶ್ರೀವಾಸ್ತವ್‌ ಯಾರು? ಹಿನ್ನೆಲೆ ಏನು?

ಇಂಡಿಯಾ ಫಾರ್ ಐಎಎಸ್​ನಲ್ಲಿ ತರಬೇತಿ ಪಡೆದ 20 ಮಂದಿ UPSC ಅಡಿಯಲ್ಲಿ IAS, IPS, IFS ಸೇರಿ‌ 23 ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ಸಂತಸ ಮನೆ ಮಾಡಿದೆ. ಇಂಡಿಯಾ ಫಾರ್ ಐಎಎಸ್​ನಲ್ಲಿ ತರಬೇತಿ ಪಡೆದ 20 ಮಂದಿ ಸಿಹಿ ತಿನಿಸುತ್ತ ಸಂಭ್ರಮದಲ್ಲಿ ಮಾಡುತ್ತಿದ್ದಾರೆ.

ಇನ್ನು, UPSCಯಲ್ಲಿ ಪಾಸ್​ ಆಗಿರೋ ಅಭ್ಯರ್ಥಿ ಮುಗಿಲನ್ ಅವರು ನ್ಯೂಸ್​ ಫಸ್ಟ್​ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಬಂದ ನಾನಗೆ ಇದು ಎರಡನೇ ಪ್ರಯತ್ನ. ಇದನ್ನೂ ಸಾಧಿಸಿರುವುದಕ್ಕೆ ನಿಜಕ್ಕೂ ನನಗೆ ಖುಷಿ ಆಗುತ್ತಿದೆ. ಬೆಂಗಳೂರಿನ ಹಲವರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಎನ್ವಿರಾನ್ಮೆಂಟ್​ನಿಂದಲೇ ನಾವೆಲ್ಲಾ ಪಾಸ್​​ ಆಗಲು ಸಾಧ್ಯವಾಯಿತು. ನನಗೆ 404 ಱಕಿಂಗ್​ ಬಂದಿದೆ. ನನ್ನ ತಂದೆ ಒಬ್ಬ ರೈತ. ಅವರು ತ್ರಿಪುರ ಜಿಲ್ಲೆಯವರು. ನಮ್ಮ ಕುಟುಂಬದಲ್ಲೇ ನಾನು ಮೊದಲ ಪದವೀಧರನಾಗಿದ್ದೇನೆ. ನನಗೆ ಕೊಟ್ಟ ಕೆಲಸದಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ. ನಾಗರಿಕರಿಗೆ ಪ್ರಯೋಜನ ಆಗುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ದೇಶದಲ್ಲಿ UPSC ಪರೀಕ್ಷೆಯಲ್ಲಿ ಪಾಸ್​ ಆಗಿರೋ ಟಾಪ್​ 10 ಟಾಪರ್‌ಗಳು!

10 ಟಾಪರ್‌ಗಳು ಇವರೇ!
1. ಆದಿತ್ಯ ಶ್ರೀವಾಸ್ತವ
2. ಅನಿಮೇಶ ಪ್ರಧಾನ್
3. ಡೋಣೂರು ಅಣ್ಣಾ ರೆಡ್ಡಿ
4. ಪಿ.ಕೆ ಸಿದ್ಧಾರ್ಥ್ ರಾಮ್‌ಕುಮಾರ್
5. ರುಹಾನಿ
6. ಸೃಷ್ಟಿ ದಾಬಾಸ್
7. ಅನ್ಮೋಲ್ ರಾಥೋರ್
8. ಆಶಿಶ್ ಕುಮಾರ್
9. ನೌಶೀನ್
10. ಐಶ್ವರ್ಯಂ ಪ್ರಜಾಪತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ನಾನೊಬ್ಬ ರೈತನ ಮಗ.. ನಮ್ಮ ಕುಟುಂಬದಲ್ಲೇ ನಾನು ಮೊದಲ ಪದವೀಧರ‘- UPSC ಪಾಸ್​ ಆದ ಅಭ್ಯರ್ಥಿ ಸಂತಸ

https://newsfirstlive.com/wp-content/uploads/2024/04/upsc.jpg

Load More