newsfirstkannada.com

ಮದುವೆ ಆಗಲ್ಲ ಎಂದಿದ್ದಕ್ಕೆ ಬರೋಬ್ಬರಿ 20 ಸಲ ಚಾಕು ಇರಿದು ಕೊಂದ.. ಏನಿದು ಸ್ಟೋರಿ?

Share :

Published March 31, 2024 at 8:46pm

Update March 31, 2024 at 8:49pm

  ಮದುವೆ ಆಗಲ್ಲ ಅಂದಿದಕ್ಕೆ ಪ್ರಾಣ ತೆಗೆದೇ ಬಿಟ್ಟ ಕಿರಾತಕ

  ಜಯನಗರದ ಶಾಲಿನಿ ಗ್ರೌಂಡ್​ನಲ್ಲೇ ಚಿಮ್ಮಿತು ನೆತ್ತರು..!

  ಪ್ರಿಯತಮೆ​ ಮೇಲೆ ಪ್ರಿಯಕರನ ಡೆಡ್ಲಿ ಅಟ್ಯಾಕ್! ಏನಿದು ಸ್ಟೋರಿ?

ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಸಲ ಚಾಕುವಿನಿಂದ ಚುಚ್ಚಿ ತನ್ನ ಪ್ರೇಯಸಿನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಜಯನಗರ 5ನೇ ಬ್ಲಾಕ್​ನಲ್ಲಿರುವ ಶಾಲಿನಿ ಗ್ರೌಂಡ್​ನಲ್ಲಿ ನಡೆದಿದೆ. ಕ್ರಿಕೆಟ್​​, ಪುಟ್​ಬಾಲ್​ ಅಂತ ಈ ಗ್ರೌಂಡ್​ನಲ್ಲಿ ಯಾವಾಗಲೂ ಹುಡುಗರು ಇದ್ದೇ ಇರ್ತಾರೆ. ಸಂಜೆಯಾದ್ರೆ ವಾಕಿಂಗ್ ಮಾಡೋರು, ಜಾಗಿಂಗ್ ಮಾಡೋರು ಕಾಣಿಸ್ತಾರೆ. ಹೀಗೆ ಶನಿವಾರ ಸಂಜೆ ಕತ್ತಲೆ ಕವಿಯುವಾಗ ಭೀರಕವಾದ ಕೊಲೆ ನಡೆದಿದೆ. ಇಳಿ ಸಂಜೆ, ಒಳ್ಳೆ ಗಾಳಿ. ಸ್ವಲ್ಪವೊತ್ತು ಮಾತಾಡೋಣ ಅಂತ ಕೂತ್ಕೊಂಡಿದ್ದ ಪ್ರಿಯಕರ, ತನ್ನ ಪ್ರಿಯತಮೆನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

20ಕ್ಕೂ ಹೆಚ್ಚು ಸಲ ಚಾಕು ಇರಿದು ಕೊಲೆ ಮಾಡಿದ ಪ್ರಿಯಕರ!

ಶಾಲಿನಿ ಗ್ರೌಂಡ್​ಗೆ ಮಾತಾಡೋಕೆ ಬಂದ ಜೋಡಿ ನಡುವೆ ಜಗಳ ಶುರುವಾಗಿತ್ತು. ಈ ಜಗಳಲ್ಲಿ ಇಬ್ಬರು ನಡುವೆ ಮಾತಿನ ಚಕಮಕಿಯೂ ಜೋರಾಗಿತ್ತು. ಈ ವೇಳೆ ಸಿಟ್ಟಿಗೆದ್ದ ಪ್ರಿಯಕರ, ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದಿದ್ದಾನಂತೆ. ಒಂದಲ್ಲ ಎರಡಲ್ಲ ಸುಮಾರು 20ಕ್ಕೂ ಹೆಚ್ಚು ಬಾರಿ ನಿರಂತರವಾಗಿ ಚಾಕುವಿನಿಂದ ಹಲ್ಲೆ ಮಾಡಿ ಪ್ರಾಣ ತೆಗೆದಿದ್ದಾನಂತೆ.

42 ವರ್ಷದ ಮೃತ ಫರೀದಾ ಬೆಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡ್ತಿದ್ದಳು ಎನ್ನಲಾಗಿದೆ. ಈ ವೇಳೆ ಪರಿಚಯವಾದ ಗಿರೀಶ್​ ಜೊತೆ ಲವ್ ಆಗಿದೆ. ಇಬ್ಬರು ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದಾರೆ. ಪ್ರೀತಿ, ಗೀತಿ ಇತ್ಯಾದಿ ಅಂತ ಸುತ್ತಾಡಿದ್ದಾರೆ. ಇಬ್ಬರು ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅದ್ಯಾವಾಗ ಇವರ ಪ್ರೀತಿ ನಡುವೆ ಮದುವೆ ಅನ್ನೋ ಮೂರಕ್ಷರದ ಕೂಗು ಕೇಳಿಬಂತೋ ಅಲ್ಲಿಂದ ಇಬ್ಬರ ನಡುವಿನ ಪ್ರೀತಿ ಅಲುಗಾಡೋಕೆ ಶುರುವಾಗಿದೆ. ಅದರಲ್ಲೂ ಫರೀದಾ ಮದುವೆಗೆ ಬಿಲ್​ಕುಲ್​ ಒಪ್ಪಲ್ಲ. ಮದುವೆ ಅಂದ್ರೆನೇ ಏನಾದರೂ ಒಂದು ಕಾರಣ ಕೊಟ್ಟು ಹೋಗ್ತಿದ್ದಳಂತೆ. ಇದು ಗಿರೀಶ್​ಗೆ ಇಷ್ಟ ಆಗಿಲ್ಲ. ತನ್ನನ್ನ ಇಷ್ಟಪಡ್ತಿದ್ದ ಫರೀದಾ, ತನ್ನ ಜೊತೆ ಇರಬೇಕು ಅಂತ ಬಯಸಿದ ಫರೀದಾ ಮದುವೆ ಆಗೋಕೆ ಯಾಕೆ ಒಪ್ತಿಲ್ಲ ಅನ್ನೋದು ಗಿರೀಶ್​ಗೆ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ನಡೆದ ಬೆಳವಣಿಗೆಯಲ್ಲಿ ಈ ಕೊಲೆಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಲಿಜ ಸಂಘ ಚುನಾವಣೆ; ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​ ತಾಯಿಗೆ ಭರ್ಜರಿ ಜಯ

ಅಂದ್ಹಾಗೆ, ಗಿರೀಶ್​ ಈ ಹಿಂದೆ ಮುಸ್ಲಿಂ ಆಗಿ ಕನ್ವರ್ಟ್ ಆಗಿದ್ದ. ಹಿಂದೂ ಧರ್ಮದಲ್ಲಿದ್ದ ಹುಟ್ಟಿದ್ದ ಗಿರೀಶ್, 2011ರಲ್ಲಿ​ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಕಾರಣ ಹಿಂದೂ ಧರ್ಮದಲ್ಲಿ ಆಚರಿಸುವ ಮೂರ್ತಿ ಪೂಜೆ ಇಷ್ಟವಾಗ್ತಿರಲಿಲ್ಲವಂತೆ. ರಿಹಾನ್​ ಅಂತ ಹೆಸರು ಬದಲಿಸಿಕೊಂಡು ಇಸ್ಲಾಂ ಧರ್ಮ ಪರಿಪಾಲನೆ ಮಾಡ್ತಿದ್ದ ಗಿರೀಶ್​ ಹಿಂದೂ ಸಂಪ್ರದಾಯಗಳಿಂದ ದೂರವೇ ಉಳಿದಿದ್ದ. ಅದರೆ ಮನೆಯಲ್ಲಿ ಸಹೋದರಿಯಿದ್ದ ಕಾರಣ ಬಹಿರಂಗವಾಗಿ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದ. ತಾನು ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗಿದ್ದೀನಿ ಅಂತ ಗೊತ್ತಾದ್ರೆ ತನ್ನ ತಂಗಿಗೆ ವರ ಸಿಗಲ್ಲ ಅನ್ನೋ ಕಾರಣಕ್ಕೆ ಇದನ್ನ ಮುಚ್ಚಿಟ್ಟಿದ್ದ. ತಂಗಿಗೇ ಮಾತ್ರವಲ್ಲ ಈ ಕಾರಣದಿಂದ ತನಗೂ ವಧು ಸಿಕ್ಕಿರಲಿಲ್ಲ ಅನ್ನೋದು ಇಲ್ಲಿ ಗಮನಾರ್ಹ. ಇದರಿಂದ ಹೊರಗೆ ಬರೋಕೆ ಮುಸ್ಲಿಂ ಧರ್ಮದಿಂದ ಮತ್ತೆ ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿದ್ದನಂತೆ ಗಿರೀಶ್​.

ಒಂದು ಕಡೆ ಮೂರ್ತಿ ಪೂಜೆ ಇಷ್ಟವಾಗದೇ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗಿ ಬಂದಿದ್ದ. ಈ ಕಡೆ ಮದುವೆನೂ ಆಗಿಲ್ಲ. ಆದರೂ ಹಾಗೋ ಹೀಗೆ ಜೀವನ ಮಾಡ್ತಿದ್ದ ಗಿರೀಶ್​ಗೆ, 2022ರಲ್ಲಿ ಫರೀದಾ ಪರಿಚಯ ಆಗುತ್ತೆ. ಫರೀದಾ ಜೊತೆ ಫ್ರೆಂಡ್​ಷಿಪ್ ಆಗುತ್ತೆ. ದಿನ ಕಳೆದಂತೆ ಆ ಫ್ರೆಂಡ್​ಷಿಪ್ ಪ್ರೀತಿಗೆ ತಿರುಗುತ್ತೆ. ಸ್ಪಾ ಒಂದರಲ್ಲಿ ಕೆಲಸ ಮಾಡ್ತಿದ್ದ ಫರೀದಾ ಪಿಜಿಯಲ್ಲಿದ್ದುಕೊಂಡು ಜೀವನ ಮಾಡ್ತಿದ್ದಳು. ಇದೇ ಸಮಯಕ್ಕೆ ಗಿರೀಶ್​ ಜೊತೆ ಪರಿಚಯ ಆಗಿ ಆ ಪರಿಚಯ ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕೇಸ್​ನಲ್ಲಿ ಗಿರೀಶ್​ದು ಒಂದು ಕಥೆಯಾದ್ರೆ ಫರೀದಾದು ಇನ್ನೊಂದು ಕಥೆ. ಹೌದು, ಗಿರೀಶ್​ ಪರಿಚಯ ಆಗೋದಕ್ಕೂ ಮುಂಚೆಯೇ ಫರೀದಾಗೆ ಮದುವೆ ಆಗಿ ಒಂದು ಮಗು ಇತ್ತು. ದುರಾದೃಷ್ಟಕರ ಗಂಡ ಸಾವನ್ನಪ್ಪಿದ್ದ. ಆದರೆ ಈ ಸತ್ಯ ಗಿರೀಶ್​ಗೆ ಗೊತ್ತಿರಲಿಲ್ಲ. ಇದೇ ತಿಂಗಳು 6ನೇ ನೇ ತಾರೀಕು ಫರೀದಾ ಆಸ್ಪತ್ರೆಗೆ ಹೋಗಿ ಬರ್ತೀನಿ ಅಂತೇಳಿ ಕೊಲ್ಕತ್ತಾಗೆ ಹೋಗಿದ್ದಳಂತೆ. ಕೊಲ್ಕತ್ತಾದಿಂದ ಬರುವಾಗ ತನ್ನ ಮಗಳನ್ನ ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾಳೆ. ಆಗ ಫರೀದಾ ತನಗೆ ಸುಳ್ಳು ಹೇಳಿದ್ದಳು ಅನ್ನೋದು ಗಿರೀಶ್​ಗೆ ಗೊತ್ತಾಗುತ್ತೆ. ಇನ್ನೊಂದು ದಿನ ರೀಮಾ ರಾಯ್ ಎನ್ನುವ ಗೆಳತಿ ಜೊತೆ ಫರೀದಾ ಹೊರಗೆ ಹೋಗಿರ್ತಾಳೆ. ಇದರ ಬಗ್ಗೆ ತಿಳಿದುಕೊಂಡ ಗಿರೀಶ್​, ರೀಮಾ ರಾಯ್ ಪತಿಗೆ ಕಾಲ್ ಮಾಡಿ ಹಿಗ್ಗಾಮುಗ್ಗಾ ನಿಂದಿಸಿದ್ದ. ನಿನ್ನ ಪತ್ನಿ ಸರಿಯಿಲ್ಲ, ಅವಳು ಪರೀಧಾಳನ್ನ ಕೂಡ ಅದೇ ರೀತಿ ಮಾಡ್ತಿದ್ದಾಳೆ ಅಂತ ದಮ್ಕಿ ಹಾಕಿದ್ದ. ಈ ವಿಚಾರವಾಗಿ ಫರೀದಾ ಮತ್ತು ಗಿರೀಶ್​ಗೆ ಜೋರು ಜಗಳ ಆಗುತ್ತೆ. ಆಮೇಲೆ ಫರೀದಾಳನ್ನ ಸಮಾಧಾನ ಮಾಡೋಕೆ ಅಂತ ಮಾರ್ಚ್ 26ನೇ ತಾರೀಕು ಪಾರ್ಟಿ ಆಯೋಜಿಸ್ತಾನೆ. ಈ ಪಾರ್ಟಿಲ್ಲಿ ಫರೀದಾಗೆ ಗಿರೀಶ್​ ಮದುವೆ ಆಗುವಂತೆ ಅಪ್ರೋಚ್ ಮಾಡಿದ್ದಾನೆ. ಆದ್ರೆ ಫರೀದಾ ಈ ಮದುವೆಗೆ ಒಪ್ಪೋದಿಲ್ಲ. ಪದೇ ಪದೇ ಮದುವೆ ವಿಷ್ಯ ಬಂದಾಗೆಲ್ಲಾ ಫರೀದಾ ರಿಜೆಕ್ಟ್​ ಮಾಡ್ತಿದ್ದಕ್ಕೆ ಗಿರೀಶ್​ಗೆ ಕೋಪಗೊಂಡಿದ್ದ.
ಓಯೋ ರೂಮ್​ನಲ್ಲಿದ್ದವರು ಶಾಲಿನ ಗ್ರೌಂಡ್​ಗೆ ಬಂದಿದ್ದರು!

ಮಾತಾಡ್ತಾ ಮಾತಾಡ್ತಾನೇ ಚಾಕು ತೆಗೆದು ಕೊಂದೇ ಬಿಟ್ಟ!

ಮಾರ್ಚ್ 30ನೇ ತಾರೀಖು ಗಿರೀಶ್​ ಮತ್ತು ಫರೀದಾ ಓಯೋ ರೂಮ್​ನಲ್ಲಿ ಉಳಿದುಕೊಂಡಿದ್ದರು. ಸಂಜೆ 7 ಗಂಟೆ ಸುಮಾರಿಗೆ ಅಲ್ಲೇ ಹತ್ತಿರದಲ್ಲಿದ್ದ ಶಾಲಿನಿ ಗ್ರೌಂಡ್​ಗೆ ವಾಕಿಂಗ್ ಹೋಗೋಣ ಅಂತ ಬಂದಿದ್ದಾರೆ. ಈ ವೇಳೆ ಗ್ರೌಂಡ್​ನಲ್ಲಿದ್ದ ಮೆಟ್ಟಿಲುಗಳ ಮೇಲೆ ಕೂತ್ಕೊಂಡು ಮಾತಾಡಿದ್ದಾರೆ. ಆದರೆ ಈ ಮಾತುಕತೆಯಲ್ಲಿ ಅದೇನ್ ಆಯ್ತೋ ಗೊತ್ತಿಲ್ಲ, ಮೊದಲೇ ಪ್ಲಾನ್ ಮಾಡಿ ಬಂದಂತಿದ್ದ ಗಿರೀಶ್​, ಚಾಕು ತೆಗೆದು ಫರೀದಾ ಮೇಲೆ ಹಲ್ಲೆ ಮಾಡಿಯೇ ಬಿಟ್ಟಿದ್ದಾನೆ. ಬೇಡ ಬೇಡ ಅಂದ್ರು ಸುಮಾರು 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ರಕ್ತ ಹರಿಸಿದ್ದಾನೆ. ಶಾಲಿನಿ ಗ್ರೌಂಡ್​ನಲ್ಲಿ ಕೊಲೆಯಾಗಿದ್ದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹೀತಿ ನೀಡಿದ್ದರು. ಅಷ್ಟೊತ್ತಿಗಾಗಲೇ ಸ್ಥಳಕ್ಕೆ ಧಾವಿಸಿದ ಜಯನಗರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಮದುವೆಗೆ ನಿರಾಕರಿಸಿದ್ದು ಹಾಗೂ ಸ್ಪಾದಲ್ಲಿ ಕೆಲಸ ಬಿಡು ಅಂದ್ರೆ ಬಿಟ್ಟಿರಲಿಲ್ಲ ಅನ್ನೋ ಕಾರಣಕ್ಕೆ ಈ ಘಟನೆ ನಡೆದಿದೆ ಅಂತ ಗೊತ್ತಾಗಿದೆ. ಇನ್ನು ಹೆಚ್ಚಿನ ತನಿಖೆಗೆ ಎಫ್​ಎಸ್​ಎಲ್ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಇಲ್ಲಿ ಸರಿ ತಪ್ಪಿನ ವಿಚಾರಣೆ ಮಾಡೋಕೆ ಪೊಲೀಸರಿದ್ದಾರೆ. ಆದರೆ ಪ್ರೀತಿ ಬಲೆಗೆ ಬಿದ್ದ ಫರೀದಾ ಪ್ರಾಣಬಿಟ್ಟಳು. ಮಗು ಅನಾಥವಾಯ್ತು ಈ ಕಡೆ ಮೊದಲೇ ಧರ್ಮದ ವಿಚಾರದಲ್ಲಿ ಎಡವಿ ಕೈ ಸುಟ್ಟುಕೊಂಡಿದ್ದ ಗಿರೀಶ್​, ಈ ಕಡೆ ಪ್ರೀತಿಯಲ್ಲೂ ಸೋತು ಜೈಲು ಸೇರುವಂತಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗಲ್ಲ ಎಂದಿದ್ದಕ್ಕೆ ಬರೋಬ್ಬರಿ 20 ಸಲ ಚಾಕು ಇರಿದು ಕೊಂದ.. ಏನಿದು ಸ್ಟೋರಿ?

https://newsfirstlive.com/wp-content/uploads/2024/03/death-2024-03-31T185343.338.jpg

Load More