/newsfirstlive-kannada/media/post_attachments/wp-content/uploads/2025/04/42-YEARS-WOMEN.jpg)
ಸಾಧನೆಗೆ ವಯಸ್ಸಿನ ಹಂಗೇ ಇರಲ್ಲ. ಇದನ್ನು ಅನೇಕರು ಅನೇಕ ಕ್ಷೇತ್ರಗಳಲ್ಲಿ ಅನೇಕರು ಸಾಬೀತು ಮಾಡಿದ್ದಾರೆ. ಹಲವಾರು ತತ್ವಜ್ಞಾನಿಗಳು ಏಜ್ ಇಸ್​ ಜಸ್ಟ್​ ಎ ನಂಬರ್ ಎಂದು ಶತಮಾನಗಳ ಹಿಂದೆಯೇ ಹೇಳಿದ್ದಾರೆ. ಅದು ನಿಜ ಎನ್ನುವುದನ್ನು ಅನೇಕರು ಸಾಬೀತು ಕೂಡ ಮಾಡಿದ್ದಾರೆ. ಅವರಲ್ಲಿ ಈಗ ಒಬ್ಬರು ಈ ಕೊಪ್ಪಳದ 42 ವಯಸ್ಸಿನ ಮಹಿಳೆ ಕೂಡ ಒಬ್ಬರು.
ಪಿಯುಸಿ, ಎಸ್​ಎಸ್​ಎಲ್​ಸಿ ಪರೀಕ್ಷೆಯೆಂದರೆ ಶಾಲಾ ವಿದ್ಯಾರ್ಥಿಗಳೇ ಒಂದು ಕ್ಷಣ ಹೆದರಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಾರೆ. ಅದರೆ ಕೊಪ್ಪಳದ ಮೃತ್ಯುಂಜವ್ವ ಎಂಬ ಮಹಿಳೆ ನಿರಂತರ ಪರಿಶ್ರಮ ಹಾಗೂ ಗುರಿಯೆಡೆಗಿನ ದೃಷ್ಟಿಯಿಂದ ಎಲ್ಲ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿ ಮಾಡುತ್ತದೆ ಎಂಬುದನ್ನು ನಿರೂಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/42-YEARS-WOMEN-1.jpg)
ಕೊಪ್ಪಳ ಜಿಲ್ಲೆಯ ಕುಕನೂರಿನ ಮೃತ್ಯುಂಜವ್ವ ಕಂಬಳಿ ಎಂಬುವವರು ತಮ್ಮ 42ನೇ ವಯಸ್ಸಿನಲ್ಲಿ ಪಿಯುಸಿ ಪ್ರವೇಶ ಪಡೆದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಡ್ಮಿಷನ್ ಮಾಡಿ ಮೊದಲ ಪ್ರಯತ್ನದಲ್ಲಿಯೇ ಮೃತ್ಯುಂಜವ್ವ ಪಿಯುಸಿಯನ್ನು ಸರಳವಾಗಿ ಪಾಸ್ ಮಾಡಿದ್ದಾರೆ. ಎಲ್ಲಾ ವಿಷಯದಲ್ಲೂ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವ ಗೃಹಿಣಿ, ಓದುವ ಹಂಬಲ ಮತ್ತು ಮಕ್ಕಳ ಸ್ಪೂರ್ತಿಯಿಂದಾಗಿ ಆಸೆ ಈಡೇರಿದೆ ಎಂದು ಹೇಳಿದ್ದಾರೆ. ಇನ್ನು ಮೃತ್ಯುಂಜವನ್ನ ಕಂಬಳಿ ಅವರ ಈ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us