newsfirstkannada.com

ಶಾಪಿಂಗ್ ಮಾಲ್​ನಲ್ಲಿ ಭೀಕರ ಅಗ್ನಿ ದುರಂತ.. ಸುಟ್ಟ ಗಾಯದಿಂದ 44 ಜನರು ಸಾವು

Share :

Published March 1, 2024 at 8:50am

  ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ

  ದುರ್ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ

  ವಸತಿ ಪ್ರದೇಶದಲ್ಲಿದ್ದ ಶಾಪಿಂಗ್​ ಮಾಲ್​ನಲ್ಲಿ ಅಗ್ನಿ ಅನಾಹುತ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಿನ್ನೆ ರಾತ್ರಿ ಭೀಕರ ಅಗ್ನಿ ದುರಂತ ನಡೆದಿದೆ. ಬೈಲಿ ರೋಡ್ ಪ್ರದೇಶದಲ್ಲಿರುವ ಆರು ಅಂತಸ್ತಿನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಸಂಭವಿಸಿ ಕನಿಷ್ಠ 44 ಜನ ಸಾವನ್ನಪ್ಪಿದ್ದಾರೆ.

ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಢಾಕಾದ ಡೌನ್‌ಟೌನ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದವರು ರಕ್ಷಣೆಗೆ ದೌಡಾಯಿಸಿದ್ದಾರೆ. 22 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 10 ಮಂದಿಯನ್ನು ಶೇಖ್ ಹಸೀನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಪಿಂಗ್ ಮಾಲ್​ನಲ್ಲಿ ಭೀಕರ ಅಗ್ನಿ ದುರಂತ.. ಸುಟ್ಟ ಗಾಯದಿಂದ 44 ಜನರು ಸಾವು

https://newsfirstlive.com/wp-content/uploads/2024/03/DAKHA.jpg

Load More