/newsfirstlive-kannada/media/post_attachments/wp-content/uploads/2025/07/SCHOOL-5.jpg)
ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯಲ್ಲಿ ನಡೆದ ಹಗರಣವೊಂದು ದೇಶದಲ್ಲಿ ಭಾರೀ ಸದ್ದು ಮಾಡ್ತಿದೆ. ಶಾಲೆಗೆ 24 ಲೀಟರ್ ಬಣ್ಣ ಬಳಿಯಲು 443 ಕೂಲಿಯಾಳುಗಳನ್ನು ಬಳಸಿಕೊಂಡು 3.38 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ಹಗರಣ ಬೆಳಕಿಗೆ ಬಂದಿದ್ದು ಹೇಗೆ..?
ಸೋಶಿಯಲ್ ಮಿಡಿಯಾದಲ್ಲಿ ಹಗರಣದ ಬಿಲ್ ವೈರಲ್ ಆಗಿದ್ದು, ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಣಾಧಿಕಾರಿಗಳು ಹಗರಣದ ತನಿಖೆಗೆ ಮುಂದಾಗಿದ್ದಾರೆ. ಎರಡು ಶಾಲೆಗಳಿಗೆ ಬಣ್ಣ ಬಳಿಯಲು 215 ಮೇಸ್ತ್ರಿಗಳು ಹಾಗೂ 443 ಕೂಲಿಯಾಳುಗಳ ಬಳಕೆ ಮಾಡಲಾಗಿದೆ ಎಂದು ಬಿಲ್ನಲ್ಲಿ ತೋರಿಸಲಾಗಿದೆ. ಅಂದ್ಹಾಗೆ ಎರಡು ಶಾಲೆಗಳಿಗೆ ಹಚ್ಚಲು ತಂದಿರುವ ಬಣ್ಣ 4,704 ರೂಪಾಯಿ ಬೆಲೆಯ 24 ಲೀಟರ್ ಮಾತ್ರ!
ಎಲ್ಲಿದೆ ಶಾಲೆ..?
ಜಿಲ್ಲೆಯ ಸಕಾಂಡಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಗೆ 4 ಲೀಟರ್ ಬಣ್ಣ ತರಿಸಲಾಗಿದೆ. ಅದರ ಬೆಲೆ 784 ರೂಪಾಯಿ. ಇದಕ್ಕೆ 168 ಕೂಲಿಯಾಳುಗಳು 65 ಮೇಸ್ತ್ರಿಗಳನ್ನು ಬಳಸಲಾಗಿದೆ. ಇವರಿಗೆ 1,06,984 ರೂಪಾಯಿ ನೀಡಲಾಗಿದೆ. ಇನ್ನು, ಎರಡನೇ ಶಾಲೆ ನಿಪಾನಿಯಾ ಗ್ರಾಮದಲ್ಲಿದೆ. ಇಲ್ಲಿ 20 ಲೀಟರ್ ಬಣ್ಣ. 150 ಮೇಸ್ತ್ರಿಗಳು ಹಾಗೂ 275 ಕೂಲಿಯಾಳುಗಳು ಕೆಲಸ ಮಾಡಿದ್ದಾರೆ. ಇವರಿಗೆ 2,31,650 ರೂಪಾಯಿ ನೀಡಲಾಗಿದೆ.
ಇದನ್ನೂ ಓದಿ: ಕ್ಯಾಬ್ ಚಾಲಕರನ್ನ ಸೀರಿಯಲ್ ಆಗಿ ಮುಗಿಸ್ತಿದ್ದ ಭಯಾನಕ ಗ್ಯಾಂಗ್.. ಬೆಟ್ಟಗಳಲ್ಲಿ ಬಿಸಾಡುತ್ತಿದ್ದ ಪಾಪಿಗಳು!
ಎರಡೂ ಶಾಲೆಗಳಿಗೂ ಬಣ್ಣ ಹಚ್ಚಲು ಗುತ್ತಿಗೆ ಪಡೆದುಕೊಂಡಿರೋದು ಒಬ್ಬರೇ. ಸುಧಾಕರ್ ಎಂಬ ಗುತ್ತಿಗೆದಾರನಿಗೆ ಮೇ 5ರಂದು ಬಿಲ್ ಪಾವತಿಸಲಾಗಿದೆ. ಈ ಬಿಲ್‌ಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಕೂಡ ಇದೆ. ವಿಶಾಲ್ ಕುಮಾರ್ ಅನ್ನೋರು ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗೆ ಬಣ್ಣ ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಲಾಗಿದೆ. ಕೇವಲ ನಾಲ್ಕು ಲೀಟರ್ ಬಣ್ಣವನ್ನು ಗೋಡೆಗೆ ಹಚ್ಚಲು ಇಷ್ಟು ಜನರನ್ನು ಬಳಸಿದ್ದು ಹೇಗೆ ಅನ್ನೋದು ಅವರ ಪ್ರಶ್ನೆಯಾಗಿದೆ.
ಇದನ್ನೂ ಓದಿ: 336 ರನ್ಗಳ ಭರ್ಜರಿ ಗೆಲುವು.. 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಟೀಂ ಇಂಡಿಯಾ..!
In Madhya Pradesh's Shahdol district, a miracle of mathematics and manpower has been achieved:
168 labourers and 65 masons were employed to apply four litres of paint to a government school wall in Sakandi village. pic.twitter.com/ciikcJs6Sn— vishal kumar (@vishalsah1986) July 5, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ