newsfirstkannada.com

ಬ್ಯಾಡಗಿ APMCಗೆ ಬೆಂಕಿ ಇಟ್ಟ ಕೇಸ್; 47 ಕಿಡಿಗೇಡಿಗಳನ್ನು ವಶಕ್ಕೆ ಪಡೆದ ಪೊಲೀಸರು..!

Share :

Published March 12, 2024 at 10:25am

Update March 12, 2024 at 10:32am

    ನಿನ್ನೆಯ ಹಿಂಸಾಚಾರದಲ್ಲಿ ಎಸ್​ಪಿ ಅಂಶುಕುಮಾರ್ ಕೈಗೆ ಗಾಯ

    ಒಂದು ತಿಂಗಳ ಕಾಲ ಎಪಿಎಂಸಿ ಮಾರುಕಟ್ಟೆ ಬಂದ್​ಗೆ ನಿರ್ಧಾರ

    6 ಕಾರು, 3 ಬೈಕ್, 1 ಅಗ್ನಿಶಾಮಕ ವಾಹನ, ಆಡಳಿತ ಕಚೇರಿ ಭಸ್ಮ

ಹಾವೇರಿ: ಬ್ಯಾಡಗಿ ಪಟ್ಟಣದಲ್ಲಿ ರೈತರ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ನಿನ್ನೆ ಎಪಿಎಂಸಿ ಮಾರುಕಟ್ಟೆಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಡಗಿಗೆ ಬರುವ ಮಾರ್ಗದಲ್ಲಿ ಪೊಲೀಸರು, ಮೆಣಸಿನ ಕಾಯಿ ತುಂಬಿದ ಲಾರಿಗಳು, ವಾಹನಗಳನ್ನ ತಪಾಸಣೆ ಮಾಡಿದ್ದಾರೆ. ಈ ವೇಳೆ ಟಾಟಾ ಏಸ್ ಚಾಲಕನಿಗೆ ರೈತರು ಕಲ್ಲಿನಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಎಸ್​ಪಿಗೆ ಗಾಯ
ನಿನ್ನೆಯ ಗಲಾಟೆಯಲ್ಲಿ ಹಾವೇರಿ ಎಸ್​​ಪಿ ಅಂಶುಕುಮಾರ್ ಅವರ ಕೈಗೆ ಗಾಯವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಆಗಮಿಸಿದ ಎಸ್​ಪಿ ತಲೆಗೆ ಕೆಲ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದಿದ್ದು, ಹೆಲ್ಮೆಟ್ ಹಾಕಿದ ಕಾರಣ ಅಪಾಯದಿಂದ ಬಚಾವಾಗಿದ್ದಾರೆ. ಆದ್ರೆ ಅವರ ಕೈಗೆ ಪೆಟ್ಟಾಗಿದ್ದು, ಹ್ಯಾಂಡ್ ಗ್ರಿಪ್ ಬ್ಯಾಂಡೇಜ್ ಹಾಕಲಾಗಿದೆ.

47 ಕಿಡಿಗೇಡಿಗಳ ಬಂಧನ
ಪ್ರಕರಣ ಸಂಬಂಧ ಪೊಲೀಸರು ಈವರೆಗೂ 47 ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಮೆಣಸಿನಕಾಯಿ ಬೆಲೆ ಕುಸಿತದಿಂದ ರೊಚ್ಚಿಗೆದ್ದ ಕೆಲ ಜನರು ಮಾರುಕಟ್ಟೆಗೆ ಬೆಂಕಿಯಿಟ್ಟು ಪುಂಡಾಟ ಮೆರೆದಿದ್ದರು. ಇದರ ಪರಿಣಾಮ 6 ಕಾರು, 3 ಬೈಕ್, 1 ಅಗ್ನಿಶಾಮಕ ವಾಹನ, ಹಾಗೂ ಆಡಳಿತ ಕಚೇರಿ ಸುಟ್ಟು ಭಸ್ಮವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ 47 ಕೀಡಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬೆಂಕಿ ಇಟ್ಟಿದ್ದಕ್ಕೆ ಸ್ಥಳೀಯರು ಹಾಗೂ ವರ್ತಕರು ಬೇಸರ ಹೊರಹಾಕಿದ್ದಾರೆ. ನಿನ್ನೆ ಮಾರುಕಟ್ಟೆಗೆ ಬಂದ ಮೆಣಸಿನಕಾಯಿ ಸರಿಯಿಲ್ಲ. ಮೆಣಸಿನಕಾಯಿಗೆ ನೀರು ಹಾಕಿಕೊಂಡು ಬಂದಿದ್ದಾರೆ. ಅಂಥಾ ಮಾಲ್‌ಗೆ ರೇಟ್ ಕೊಡು ಅಂದ್ರೆ ಎಲ್ಲಿಂದ ಕೊಡಬೇಕು? ನಿನ್ನೆಯ ಘಟನೆಯಲ್ಲಿ ಸ್ಥಳೀಯ ರೈತರು ಯಾರು ಇಲ್ಲ ಅಂತ ವರ್ತಕರು ಹೇಳಿದ್ದಾರೆ. ನಮಗೆ ಅನ್ನ ಹಾಕಿದ ಸ್ಥಳಕ್ಕೆ ಬೆಂಕಿ ಇಟ್ಟಿದ್ದಾರೆ. ಇನ್ನು ಒಂದು ತಿಂಗಳು ಮಾರ್ಕೆಟ್ ಬಂದ್ ಇರಲಿದೆ ಎಂದು ವರ್ತಕರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಡಗಿ APMCಗೆ ಬೆಂಕಿ ಇಟ್ಟ ಕೇಸ್; 47 ಕಿಡಿಗೇಡಿಗಳನ್ನು ವಶಕ್ಕೆ ಪಡೆದ ಪೊಲೀಸರು..!

https://newsfirstlive.com/wp-content/uploads/2024/03/haveri.jpg

Load More