newsfirstkannada.com

ಒಳ ಉಡುಪಿನಲ್ಲಿ 49 ಲಕ್ಷ ಮೌಲ್ಯದ ಚಿನ್ನ ಸಾಗಾಟ! ಬೆಂಗಳೂರು ಏರ್​ಪೋರ್ಟ್​ನಲ್ಲಿ ಇಬ್ಬರು ಮಹಿಳೆಯರ ಬಂಧನ

Share :

Published April 30, 2024 at 2:15pm

Update April 30, 2024 at 2:16pm

    ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ

    ಇಬ್ಬರು ಮಹಿಳೆಯರ ಒಳ ಉಡುಪಿನಲ್ಲಿ ಸಿಕ್ತು 49 ಲಕ್ಷ ಮೌಲ್ಯದ ಚಿನ್ನ

    ದುಬೈನಿಂದ ಬೆಂಗಳೂರಿಗೆ ಒಳ ಉಡುಪಿನಲ್ಲಿ ಚಿನ್ನ ಸಾಗಿಸಿದ ಐನಾತಿ ಗಿತ್ತಿಯರು

ಚಿಕ್ಕಬಳ್ಳಾಪುರ: ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಒಳ ಉಡುಪಿನಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

ಇಬ್ಬರು ಮಹಿಳೆಯರು ಇಂಡಿಗೋ 6E1486 ವಿಮಾನದಲ್ಲಿ ದುಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಅಕ್ರಮ ಚಿನ್ನ ಸಾಗಾಟಕ್ಕೆಂದು ಹಲವು ಲೇಯರ್​ಗಳ ಒಳ ಉಡುಪು ಧರಿಸಿಕೊಂಡು ಕೆಂಪೇಗೌಡ ಏರ್ಪೋರ್ಟ್​ಗೆ ಕಾಲಿಟ್ಟಿದ್ದಾರೆ. ಆದರೆ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಖತರ್ನಾಕ್ ಮಹಿಳೆಯರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಲಾರಿ.. ಅಪಘಾತದಲ್ಲಿ ಛಿದ್ರಛಿದ್ರವಾದ ಸವಾರನ ದೇಹ

ನಿನ್ನೆ ರಾತ್ರಿ ದುಬೈನಿಂದ ಕೆಂಪೇಗೌಡ ಏರ್ಪೋರ್ಟ್​ಗೆ ಇಬ್ಬರು ಮಹಿಳೆಯರು ಬಂದಿದ್ದಾರೆ. ಬಂಧಿತರಿಂದ ಸುಮಾರು 49 ಲಕ್ಷ 52 ಸಾವಿರ ಮೌಲ್ಯದ 717 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಮಹಿಳೆಯರನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಳ ಉಡುಪಿನಲ್ಲಿ 49 ಲಕ್ಷ ಮೌಲ್ಯದ ಚಿನ್ನ ಸಾಗಾಟ! ಬೆಂಗಳೂರು ಏರ್​ಪೋರ್ಟ್​ನಲ್ಲಿ ಇಬ್ಬರು ಮಹಿಳೆಯರ ಬಂಧನ

https://newsfirstlive.com/wp-content/uploads/2024/04/Gold-4.jpg

Load More