4ನೇ ಕ್ಲಾಸ್​ ಫೇಲ್​.. 68ನೇ ವಯಸ್ಸಿನಲ್ಲಿ ನೇರವಾಗಿ 7ನೇ ತರಗತಿ ಪರೀಕ್ಷೆ ಬರೆದ ಖ್ಯಾತ ನಟ!

author-image
AS Harshith
Updated On
4ನೇ ಕ್ಲಾಸ್​ ಫೇಲ್​.. 68ನೇ ವಯಸ್ಸಿನಲ್ಲಿ ನೇರವಾಗಿ 7ನೇ ತರಗತಿ ಪರೀಕ್ಷೆ ಬರೆದ ಖ್ಯಾತ ನಟ!
Advertisment
  • ರಾಜ್ಯ ಸಾಕ್ಷರತಾ ಮಿಷನ್​ ನಡೆಸುತ್ತಿರುವ ಪರೀಕ್ಷೆ
  • 7ನೇ ತರಗತಿ ಉತ್ತೀರ್ಣರಾದ್ರೆ 10ನೇ ತರಗತಿಗೆ ಅರ್ಹತೆ!
  • ಸಾಲು ಸಾಲು ಸಾಧನೆಯ ಜೊತೆಗೆ 7ನೇ ತರಗತಿ ಪರೀಕ್ಷೆ ಬರೆದ ನಟ

ವಯಸ್ಸು ಬರೀ ಸಂಖ್ಯೆಯಷ್ಟೇ. ವಯಸ್ಸನ್ನು ಮೀರಿ ಸಾಧನೆ ಮಾಡಿದ ಸಾಧಕರು ಭಾರತದಲ್ಲಿ ಅನೇಕರಿದ್ದಾರೆ. ಆದರೆ ಸಾಧನೆ ಮಾಡಬೇಕು ಎಂಬ ಛಲವಿದ್ದರೆ ಏನು ಬೇಕಾದರೂ ಮಾಡಬಹುದು. ಅದರಂತೆಯೇ ನಟರೊಬ್ಬರು ತನ್ನ 68ನೇ ವಯಸ್ಸಿನಲ್ಲಿ ಇದೀಗ 7ನೇ ತರಗತಿ ಪರೀಕ್ಷೆ ಬರೆದಿದ್ದಾರೆ ಎಂದರೆ ನಂಬುತ್ತೀರಾ?. ನಂಬಲೇಬೇಕು.

ಮಾಲಿವುಡ್​​ ಖ್ಯಾತ ಹಿರಿಯ ನಟ ಇಂದ್ರನ್ಸ್​ ಬಗ್ಗೆ ಬಹುತೇಕರಿಗೆ ತಿಳಿದಿದೆ. ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅನೇಕರ ಗಮನ ಸೆಳೆದವರಿವರು. ಇವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಆದರೆ ನಟನೆ, ಸಾಧನೆಯ ಜೊತೆಗೆ ಇಂದ್ರನ್ಸ್​ ತನ್ನ 68ನೇ ವಯಸ್ಸಿನಲ್ಲಿ ರಾಜ್ಯ ಸಾಕ್ಷರತಾ ಮಿಷನ್​ ನಡೆಸುತ್ತಿರುವ 7ನೇ ತರಗತಿ ಸಮಾನತೆಯ ಪರೀಕ್ಷೆ ಬರೆದಿದ್ದಾರೆ. ಆ ಮೂಲಕ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದ್ದಾರೆ.

4ನೇ ತರಗತಿ ಫೇಲ್​

ನಟ ಇಂದನ್ಸ್​ 4ನೇ ತರಗತಿಗೆ ಶಾಲೆ ತೊರೆದಿದ್ದರು. ಆದರೆ ಶನಿವಾರದಂದು ಸರ್ಕಾರಿ ಹೈಯರ್​ ಪ್ರೈಮರಿ ಶಾಲೆಯಲ್ಲಿ ನಡೆಯುವ ಹಿಂದಿ, ಮಲಯಾಳಂ, ಇಂಗ್ಲೀಷ್​​ ಪರೀಕ್ಷೆಯಲ್ಲಿ ಭಾಗಿಯಾದರು. ಇಂದು ಸಮಾಜ ವಿಜ್ಞಾನ ಮತ್ತು ಗಣಿತ ಪರೀಕ್ಷೆ ಬರೆದಿದ್ದಾರೆ.

publive-image

ಇದನ್ನೂ ಓದಿ: ಕಲಾವಿದರ ಸಂಘಕ್ಕೆ ಮತ್ತೊಂದು ಸಂಕಷ್ಟ.. ಹೋಮ, ಹವನ, ಆಕ್ರೋಶದ ನಡುವೆ ಸರ್ಕಾರದಿಂದ ಶಾಕ್..!

ಅಂದಹಾಗೆಯೇ ಈ ಪರೀಕ್ಷೆಯ ಫಲಿತಾಂಶ ಎರಡು ವಾರಗಳ ಬಳಿಕ ಹೊರಬೀಳಲಿದೆ. ಒಂದು ವೇಳೆ 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರು 10ನೇ ತರಗತಿ ಪರೀಕ್ಷೆಯಲ್ಲಿ ಕುಳಿತುಕೊಳ್ಳಬಹುದಾಗಿದೆ.

ಇದನ್ನೂ ಓದಿ: Sunday Special: ಮನೆಯಲ್ಲೇ ಮಾಡಿ ಚಿಕನ್​​ ಮುಮ್ತಾಜ್.. ​ಸಿಂಪಲ್​ ರೆಸಿಪಿ 10 ನಿಮಿಷದಲ್ಲೇ ರೆಡಿ

publive-image

ಸಾಕ್ಷರತಾ ಮಿಷನ್​ ನಿರ್ದೇಶಕಿ ಎ.ಜಿ ಒಲಿನಾ ಈ ಕುರಿತು ಮಾತನಾಡಿ, 10ನೇ ತರಗತಿ ಪರೀಕ್ಷೆಯಲ್ಲೂ ಉತ್ತೀರ್ಣರಾದರೆ ಅವರನ್ನು ಸಾಕ್ಷರತಾ ಮಿಷನ್​ ರಾಯಭಾರಿಯಾಗಿ ನೇಮಕ ಮಾಡುವುದಾಗಿ ತಿಳಿಸಿದ್ದಾರೆ. ಶಿಕ್ಷಣವು ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment