/newsfirstlive-kannada/media/post_attachments/wp-content/uploads/2025/01/ENG-Vs-IND.jpg)
ಪುಣೆಯಲ್ಲಿ ನಡೆದ 4ನೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು 15 ರನ್ಗಳಿಂದ ಗೆಲ್ಲುವ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಸರಣಿಯನ್ನು ತನ್ನ ಮಡಲಿಗೆ ಹಾಕಿಕೊಂಡಿದೆ. ಭಾರತ ನೀಡಿದ್ದು 181 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿತು 5 ಓವರ್ಗೆ ವಿಕಟ್ ನಷ್ಟವಿಲ್ಲದೇ 51 ರನ್ ಗಳಿಸಿದ್ದ ಇಂಗ್ಲೆಂಡ್ ಕೇವಲ ಐದು ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಟೀಂ ಇಂಡಿಯಾ ಪರ ಭರ್ಜರಿ ಬೌಲಿಂಗ್ ಮಾಡಿದ ರವಿ ಬಿಷ್ಣೋವಿ ಮತ್ತು ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಕಿತ್ತು ಇಂಗ್ಲೆಂಡ್ ಬ್ಯಾಟಿಂಗ್ನ ಬೆನ್ನೆಲುಬು ಮುರಿದರು ಆರಂಭದಲ್ಲಿ ಅಬ್ಬರಿಸುತ್ತಿದ್ದ ಬೆನ್ ಡಕೆತ್ರನ್ನ ಬಿಷ್ಣೋವಿ ಔಟ್ ಮಾಡುವುದರ ಮೂಲಕ ಮತ್ತು ಅವರ ಬೆನ್ನಲ್ಲೆ ಜೊಸ್ ಬಟ್ಲರ್ ವಿಕೆಟ್ ಕೀಳುವ ಮೂಲಕ ಪಂದ್ಯಕ್ಕೆ ದೊಡ್ಡ ತಿರುವನ್ನೇ ಕೊಟ್ಟರು. ಭಾರತದ ಭರ್ಜರಿ ಬೌಲಿಂಗ್ ಎದುರು ಕೇವಲ 166 ರನ್ಗಳನ್ನು ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ಇಂಗ್ಲೆಂಡ್ ಸೋಲಿಗೆ ಶರಣಾಗುವ ಮೂಲಕ ಸರಣಿಯನ್ನು ಭಾರತದ ಮಡಿಲಗೆ ಹಾಕಿತು.
ಇದನ್ನೂ ಓದಿ:ಕೊಹ್ಲಿ ಔಟ್ ಆಗ್ತಿದ್ದಂತೆ ಜೇಟ್ಲಿ ಸ್ಟೇಡಿಯಂ ಫುಲ್ ಖಾಲಿ ಖಾಲಿ.. ವಿರಾಟ್ ಕ್ಲೀನ್ ಬೋಲ್ಡ್, ಫ್ಯಾನ್ಸ್ ಬೇಸರ
ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ಕೇವಲ ಒಂದು ರನ್ ಗಳಿಸಿದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿ ನಡೆದರು. ಅವರ ಬೆನ್ನ ಹಿಂದೆ ಬಂದ ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತುವ ಮೂಲಕ ಭಾರತೀಯ ಅಭಿಮಾನಿಗಳನ್ನು ನಿರಾಸೆಗೆ ತಳ್ಳಿದ್ದರು. ರಿಂಕು ಸಿಂಗ್ ಹಾಗೂ ಅಭಿಷೇಕ್ ವರ್ಮ ಕೊಂಚ ಹೊತ್ತು ಸ್ಕ್ರೀಜ್ ಕಾಯ್ದುಕೊಂಡರು 29 ರನ್ ಗಳಿಸಿದ ಅಭಿಷೇಕ್ ವರ್ಮಾ ರಶೀದ್ಗೆ ವಿಕೆಟ್ ಒಪ್ಪಿಸಿದರೆ ರಿಂಕು ಸಿಂಗ್ 30 ರನ್ ಗಳಿಸಿ ಕರ್ಸ್ಗೆ ವಿಕೆಟ್ ಒಪ್ಪಿಸಿದರು
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ‘Q’.. ವಿರಾಟ್ ಕೊಹ್ಲಿ ನೋಡಲು ಸ್ಟೇಡಿಯಂಗೆ ಬಂದ ಯುವಕರಿಗೆ ಬಿಗ್ ಶಾಕ್
ನಂತರ ಬಂದ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ನಿಂದ ಟೀಂ ಇಂಡಿಯಾ 181 ರನ್ ಪೇರಿಸಿತು. ಆಕ್ರಮಣಕಾರಿ ಆಟಕ್ಕಿಳಿದ ಇಬ್ಬರು ಆಟಗಾರರು 53 ರನ್ ಗಳಿಸಿ ತಂಡದ ಮೊತ್ತ 181 ತಲುಪಲು ಸಹಾಯಕಾರಿಯಾದರು 34 ಎಸೆತಗಳನ್ನು ಎದುರಿಸಿದ ಶಿವಂ ದುಬೆ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ 53 ರನ್ ಗಳಿಸಿದರು. ಇತ್ತ ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳನ್ನು ಎದುರಿಸಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಭರ್ಜರಿ ಬೌಂಡರಿ ಸಿಡಿಸುವ ಮೂಲಕ 53 ರನ್ ಗಳಿಸಿದರು. ಕೊನೆಗೆ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡ ಭಾರತ ತಂಡ 181 ರನ್ ಗಳಿಸಿತು. ಇಂಗ್ಲೆಂಡ್ನ್ನು 166 ರನ್ಗಳಿಗೆ ಕಟ್ಟಿ ಹಾಕಿ ಸರಣಿಯನ್ನು ಕೈವಶ ಮಾಡಿಕೊಂಡಿತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ