newsfirstkannada.com

BREAKING: ಬಳ್ಳಾರಿಯಲ್ಲಿ ಬರೋಬ್ಬರಿ 5 ಕೋಟಿ 60 ಲಕ್ಷ ದಾಖಲೆ ರಹಿತ ಹಣ ಸೀಜ್

Share :

Published April 7, 2024 at 5:34pm

Update April 7, 2024 at 5:38pm

    ಚುನಾವಣೆ ಅಧಿಕಾರಿಗಳು, ಪೋಲಿಸರ ಪರಿಶೀಲನೆ ವೇಳೆ ನಗದು ಹಣ ಪತ್ತೆ

    ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ, ಬ್ರೂಸ್ ಪೇಟೆ ಸಿಪಿಐ ನೇತೃತ್ವದಲ್ಲಿ ದಾಳಿ

    ಹಣ ಸಾಗಿಸುತ್ತಿದ್ದವರನ್ನ ವಿಚಾರಣೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳು

ಬಳ್ಳಾರಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದ ರಂಗು ಜೋರಾಗಿದೆ. ಮತಯಾಚನೆ ಬಿರುಸಾಗಿರುವಾಗಲೇ ಗಣಿನಾಡು ಖ್ಯಾತಿಯ ಬಳ್ಳಾರಿಯಲ್ಲಿ ದಾಖಲೆ ಇಲ್ಲದೆ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ. ದಾಖಲೆ ಇಲ್ಲದೇ ವಾಹನಗಳಲ್ಲಿ ಸಾಗಿಸುತ್ತಿದ್ದ ಹಣವನ್ನು ಸೀಜ್​ ಮಾಡುತ್ತಿದ್ದಾರೆ. ಇದೀಗ ಚುನಾವಣೆ ಅಧಿಕಾರಿಗಳು ಬರೋಬ್ಬರಿ 5 ಕೋಟಿ 60 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: PHOTOS: ಬೆಂಕಿ ಅಂದ್ರೆ ಸುಮ್ನೆ ನಾ ಗುರು.. ಬಿಗ್‌ಬಾಸ್ ಸ್ಪರ್ಧಿ ತನಿಷಾ ಫೋಟೋಶೂಟ್‌ಗೆ ಫ್ಯಾನ್ಸ್‌ ಫುಲ್ ಫಿದಾ!

ಹೌದು, ಎಲೆಕ್ಷನ್‌ಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಚೆಕ್‌ಪೋಸ್ಟ್‌ಗಳನ್ನ ತೆರೆದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಹೀಗೆ ನಗರದ ಬ್ರೂಸ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೇ ಹಣವನ್ನ ಕಾರಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರು ಪರಿಶೀಲನೆ ವೇಳೆ ಕಂಬಳಿ ಬಜಾರ್​ನಲ್ಲಿರುವ ನರೇಶ್ ಗೋಲ್ಡ್ ಶಾಪ್ ಮನೆಯೊಂದರಲ್ಲಿದ್ದ 5.60 ಕೋಟಿ ರೂಪಾಯಿ
1 ಕೆಜಿ ಚಿನ್ನ, 68 ಕೆಜಿ ಗಟ್ಟಿ ಬೆಳ್ಳಿ ಪತ್ತೆಯಾಗಿವೆ. ಬಳ್ಳಾರಿ ಡಿವೈಎಸ್ಪಿ, ಬ್ರೂಸ್ ಪೇಟೆ ಸಿಪಿಐ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಸ್ಥಳಕ್ಕೆ ಖುದ್ದಾಗಿ ಎಸ್ಪಿ ರಂಜಿತ್ ಕುಮಾರ್ ಅವರು ಭೇಟಿ ನೀಡಿ‌ ಪರಿಶೀಲ‌ನೆ ನಡೆಸಿದ್ದಾರೆ. ಈ ಹಣದ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡು ವಶಪಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬಳ್ಳಾರಿಯಲ್ಲಿ ಬರೋಬ್ಬರಿ 5 ಕೋಟಿ 60 ಲಕ್ಷ ದಾಖಲೆ ರಹಿತ ಹಣ ಸೀಜ್

https://newsfirstlive.com/wp-content/uploads/2024/04/money4.jpg

Load More