ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?

author-image
Bheemappa
Updated On
ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?
Advertisment
  • ನಿರೂಪಕರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ, ಅದು ಏನು?
  • ಈ ಬಾರಿ ಹೊಸ ಅವತಾರದಲ್ಲಿ ಬರುತ್ತಿದೆ ಕಾಮಿಡಿ ಕಿಲಾಡಿಗಳು
  • 5 ತಂಡಗಳಿಂದ ಒಂದು ಟ್ರೋಫಿಗಾಗಿ ಹಣಾಹಣಿ ಹೇಗೆ ನಡೆಸಲಿದೆ?

ಕಾಮಿಡಿ ಕಿಲಾಡಿಗಳು ಹೊಸ ರೂಪದಲ್ಲಿ ಬರ್ತಿದೆ. ಈ ವಾರ ಲಾಂಚ್ ಆಗ್ತಿರೋ ಶೋನಲ್ಲಿ ಹಳೆ ನಿರೂಪಕರೆಲ್ಲ ಜಡ್ಜಸ್‌ಗಳಾಗಿದ್ದಾರೆ ಅನ್ನೋದನ್ನ ಹೇಳಿದ್ವಿ. ಹಾಗಾದ್ರೆ, ನಿರೂಪಕರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈಗ ಆ ಕ್ವಶ್ಚನ್‌ಗೂ ಕೂಡ ಆ್ಯನ್ಸರ್ ಸಿಕ್ಕಿದೆ.

publive-image

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ ಅವತಾರದಲ್ಲಿ ಬರ್ತಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಹೆಸರಿನಲ್ಲಿ ವೀಕೆಂಡ್​​ನಲ್ಲಿ ನಗುವಿನ ಟಾನಿಕ್‌ ನೀಡೋಕೆ ಸಿದ್ಧವಾಗಿರುವ ಈ ಶೋನಲ್ಲಿ ನಗುವಿನ ಮಹಾಯುದ್ಧ ನಡೆಯೋದಿದೆ.

ಇದನ್ನೂ ಓದಿ: ಭಯಾನಕವಾಗಿ ಮರಕ್ಕೆ ಡಿಕ್ಕಿಯಾದ ಕಾರು.. ಸ್ಥಳದಲ್ಲೇ ಸಾವನ್ನಪ್ಪಿದ ಡ್ರೈವರ್​

ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌, ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಕಾರ್ಯಕ್ರಮ ಮುಖ್ಯ ಆರ್ಕಷಣೆಗಳಲ್ಲಿ ಒಂದಾಗಿರುವ ನವರಸ ನಾಯಕ ಜಗ್ಗೇಶ್ ಈಗಾಗಲೇ ಜನರ ತಲೆಯಲ್ಲಿ ಹೊಸ ಯೋಚನಯೊಂದನ್ನ ಪ್ರೋಮೋ ಮೂಲಕ ಬಿಟ್ಟಿದ್ದು, ಇಲ್ಲಿ ನಗಿಸ್ತಾರೆ ನಗಬಾರದು ಅಂತ ಹೇಳುವ ಮೂಲಕ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಕುತೂಹಲವನ್ನ ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದ್ದು ಇಲ್ಲಿ T20 ಮ್ಯಾಚ್​ಗಳಲ್ಲಿ ಇರುವಂತೆ ತಂಡಗಳು, ಮಾಲೀಕರು, ಕ್ಯಾಪ್ಟನ್‌ಗಳು ಇದ್ದು ಕ್ರಿಕೇಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲೂ ಕೂಡ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನ ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯಲಿದೆ. ಇಲ್ಲಿ 5 ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ ನಟಿ ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷೆ ಕೆಂಡಾಮಂಡಲ.. ನೋಟಿಸ್ ಜಾರಿ, ಯಾಕೆ?

publive-image

ಇದನ್ನೂ ಓದಿ: ‘ನನಗೆ ಸಿಗದ ನೇಹಾ ಯಾರಿಗೂ ಸಿಗಬಾರದು’- CID ಮುಂದೆ ಭಯಾನಕ ಸತ್ಯ ಬಾಯ್ಬಿಟ್ಟ ಫಯಾಜ್‌

ಈ ಶೋನಲ್ಲಿ ತಂಡವಾಗಿ ಪ್ರರ್ದಶನ ನೀಡುವ ಕಲಾವಿದರಿಗೆ ವೀಕೆಂಡಿನಲ್ಲಿ ಅವರ ಪ್ರರ್ದಶನ ಆಧಾರದ ಮೇಲೆ ಪ್ರತಿವಾರ 1 ಲಕ್ಷ ನಗದು ಬಹುಮಾನವನ್ನ ಗೆಲ್ಲುವ ಅವಕಾಶವನ್ನ ಈ ಕಾರ್ಯಕ್ರಮದಲ್ಲಿ ನೀಡಲಾಗಿದೆ. ಪಂಚ ಪಾಂಡವರಂತೆ ಇರುವ 5 ನಿರೂಪಕರು ಇಲ್ಲಿ ಹೊಸ ಜವಾಬ್ದಾರಿಯನ್ನ ಹೊತ್ತಿರುವ ಕಾರಣ ಹೊಸ ನಿರೂಪಕರು ಈ ಶೋನ ಮೂಲಕ ಬರ್ತಿದ್ದಾರೆ. ಅವರು ನಿರೂಪಣೆ ಮಾತ್ರ ಹೊಸಬರು ಆದ್ರೆ, ಈ ಶೋನಿಂದ ಬಂದವರೇ ಅವರು. ಅವ್ರು ಮತ್ತ್ಯಾರು ಅಲ್ಲ, ಶಿವರಾಜ್‌ ಕೆ.ಆರ್‌.ಪೇಟೆ ಮತ್ತು ನಯನಾ. ಈ ವಾರ ಲಾಂಚ್ ಆಗ್ತಿರೋ ಹೊಸ ಶೋ ಬಗ್ಗೆ ಜನರಿಗಂತೂ ಸಖತ್‌ ಕುತೂಹಲ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment