/newsfirstlive-kannada/media/post_attachments/wp-content/uploads/2024/08/CANCER-AYURVEDIC-MEDICINE.jpg)
ಆಯುರ್ವೇದ ಭಾರತದ ಪುರಾತನವಾದ ಔಷಧಿ ಪದ್ಧತಿ. ಇಂಗ್ಲೀಷ್ ಮೆಡಿಸನ್​ನಲ್ಲಿ ಇರದ ಎಷ್ಟೋ ಪರಿಹಾರಗಳು ಆಯುರ್ವೇದದಲ್ಲಿವೆ ಎಂದು ಅನೇಕರು ಒಪ್ಪುತ್ತಾರೆ ಕೂಡ. ಕೇವಲ ಒಂದು ರೋಗಕ್ಕೆ ಮದ್ದು ನೀಡುವುದಲ್ಲ, ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವಂತ ಔಷಧಿಗಳನ್ನು ನೀಡುವುದು ಆಯುರ್ವೇದದ ಮೂಲ ಉದ್ದೇಶ. ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕ್ಕೆ ಮೂಲ ಬೇರೇ ಆಯುರ್ವೇದ. ನಿಸರ್ಗದತ್ತವಾಗಿ ಬಂದ ಗಿಡಮೂಲಿಕೆಗಳೇ ಈ ಆಯುರ್ವೇದಿ ಔಷಧಕ್ಕೆ ಆಗರ. ಈ ಗಿಡಮೂಲಿಕೆಗಳು ಶತಮಾನಗಳಿಂದ ರೋಗನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿವೆ. ರೋಗ ಬಂದಮೇಲೆ ಅದಕ್ಕೆ ಪರಿಹಾರ ಹುಡುಕುವುದಕ್ಕಿಂತ. ಅದು ಬರದಂತೆ ತಡೆಯುವದು ಆಯುರ್ವೇದದ ಮೂಲ ಉದ್ದೇಶ. ನಿಮ್ಮ ನಿತ್ಯ ಆಹಾರ ಪದ್ಧತಿಯಲ್ಲಿ ಆಯುರ್ವೇದಿ ಮೂಲಿಕೆಗಳನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಸದೃಢತೆಯನ್ನು ಕಾಣಬಹುದು.
ಜಗತ್ತಿಗೆ ಅತಿ ಹೆಚ್ಚು ಮಾರಕವಾಗಿ ಕಾಡುತ್ತಿರೋದು ಕ್ಯಾನ್ಸರ್. ದೇಹದ ಯಾವುದಾದರೂ ಜೀವಕೋಶ ಅಂಟಿಕೊಂಡು ಅದು ಇಡೀ ದೇಹಕ್ಕೆ ಪಸರಿಸುವಂತೆ ಮಾಡಿಬಿಡುತ್ತದೆ ಇದು. ಇದು ಬಂದಮೇಲೆ ಒದ್ದಾಡುವುದಕ್ಕಿಂತ, ಬರದಂತೆ ತಡೆಯುವುದೇ ಒಳ್ಳೆಯ ಮಾರ್ಗ. ಹೀಗಾಗಿ ಐದು ಆಯುರ್ವೇದಿಕ ಗಿಡಮೂಲಿಕೆಗಳು ನಿಮಗೆ ಕ್ಯಾನ್ಸರ್ ಬರದಂತೆ ತಡೆಯುತ್ತವೆ.
/newsfirstlive-kannada/media/post_attachments/wp-content/uploads/2024/08/CANCER-AYURVEDIC-GARLIC-1.jpg)
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಆ್ಯಂಟಿಬ್ಯಾಕ್ಟಿರಯಲ್​ನ ಅಂಶಗಳಿವೆ. ಇವು ಜೀವಕೋಶಗಳಿಗೆ ಕ್ಯಾನ್ಸರ್ ಅಂಟದಂತೆ ನಿಯಂತ್ರಣ ಮಾಡುತ್ತವೆ. ಹಲವಾರು ಬಗೆಯ ಕ್ಯಾನ್ಸರ್​ಗಳು ದೇಹಕ್ಕೆ ತಗಲದಂತೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಬೆಳ್ಳುಳ್ಳಿ, ಲೀವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಪ್ಯಾನ್​ಕ್ರೀಸ್ ಹಾಗೂ ಪ್ರೋಸ್ಟೆಟ್ ಕ್ಯಾನ್ಸರ್​ಗಳು ಜೀವಕೋಶಗಳಲ್ಲಿ ಸೇರದಂತೆ ಇದು ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/08/CANCER-AYURVEDIC-TURMERIC.jpg)
ಅರಿಷಿಣ: ಆಯುರ್ವೇದಲ್ಲಿ ಅರಿಷಿಣಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ, ಇದರಿಂದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳಿವೆ. ಅರಿಷಿಣದಲ್ಲಿ ಜೀವಕೋಶದಲ್ಲಿ ಹುಟ್ಟಿರುವ ಕ್ಯಾನ್ಸರ್​ನ್ನು ಕೊಲ್ಲುವ ಶಕ್ತಿಯಿದೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಇದರಲ್ಲಿ ಕರ್ಕ್ಯೂಮಿನ್ ಅನ್ನುವ ಔಷಧಿ ಅಂಶವಿದ್ದು, ಅದು ಕ್ಯಾನ್ಸರ್​ನ್ನು ಬರದಂತೆ ತಡೆಯುವ ಶಕ್ತಿಯನ್ನು ಹೊಂದಿದೆ. ಕೇವಲ ಕ್ಯಾನ್ಸರ್ ಮಾತ್ರವಲ್ಲ ಅರಿಷಿಣ ನೂರಾರು ಸಮಸ್ಯೆಗಳಿಗೆ ರಾಮಬಾಣ ಅನ್ನೋದು ಎಲ್ಲರಿಗೂ ಗೊತ್ತಿದೆ.
/newsfirstlive-kannada/media/post_attachments/wp-content/uploads/2024/08/AMRUTABALLI.jpg)
ಅಮೃತಬಳ್ಳಿ: ಅಮೃತಬಳ್ಳಿ ಆಯುರ್ವೇದ ಗಿಡಮೂಲಿಕೆಗಳಲ್ಲಿಯೇ ಅತ್ಯಂತ ಉತ್ಕೃಷ್ಟವಾದ ಔಷಧಿ ಗುಣವನ್ನು ಹೊಂದಿರುವ ಮೂಲಿಕೆ, ನೆಗಡಿ ಕೆಮ್ಮು ಕಫದಿಂದ ಹಿಡಿದು ಅನೇಕ ರೀತಿಯ ವೈರಸ್​ಗಳನ್ನೂ ಕೂಡ ಸುಲಭವಾಗಿ ಕೊಲ್ಲಬಲ್ಲ ಶಕ್ತಿ ಇದಕ್ಕೆ ಇದೆ. ಇದರ ಸೇವನೆಯಿಂದ ಕೂಡ ಕ್ಯಾನ್ಸರ್ ಬರದಂತೆ ತಡೆಯಬಹುದು. ಇದು ದೇಹವನ್ನು ಕ್ಯಾನ್ಸರ್​ನ್ನು ರಕ್ಷಿಸುವಂತೆ ತಯಾರು ಮಾಡುತ್ತದೆ
/newsfirstlive-kannada/media/post_attachments/wp-content/uploads/2024/08/ASHWAGANDHA.jpg)
ಅಶ್ವಗಂಧ: ಅಶ್ವಗಂಧದಲ್ಲಿ ಆ್ಯಂಟಿಆಕ್ಸಿಡೆಂಟ್​ನಂತ ಅಂಶಗಳು ಇರುವುದರಿಂದ ಇದು ಕ್ಯಾನ್ಸರ್​ನ ಗಡ್ಡೆಗಳು ಬೆಳೆಯದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಆಹಾರ ಪದ್ಧತಿಯಲ್ಲಿ ರೂಢಿಯಾಗಿಟ್ಟುಕೊಂಡರೆ ಭವಿಷ್ಯದಲ್ಲಿ ಕ್ಯಾನ್ಸರ್​ನಂತಹ ಮಾರಕ ರೋಗಗಳು ಬರದಂತೆ ಕಾಯುತ್ತದೆ
/newsfirstlive-kannada/media/post_attachments/wp-content/uploads/2024/08/AMRUTABALLI-1.jpg)
ನೆಲ್ಲಿಕಾಯಿ: ನೆಲ್ಲಿಕಾಯಿಗೂ ಕೂಡ ಕ್ಯಾನ್ಸರ್ ಬರದಂತೆ ತಡೆಯುವ ನಿರೋಧಕ ಶಕ್ತಿಯಿದೆ. ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಸೆಲ್ಸ್​ಗಳಿಂದ ಆಗುವ ಹಾನಿಯನ್ನು ತಡೆಯುವ ಪ್ರತಿರಕ್ಷಣಾ ಶಕ್ತಿಯೂ ದೇಹದಲ್ಲಿ ಹೆಚ್ಚುತ್ತದೆ. ಹೀಗೆ ಈ ಐದು ಆಯುರ್ವೇದಿಕ ಗಿಡಮೂಲಿಕೆಗಳಿಂದ ನಾವು ಕ್ಯಾನ್ಸರ್​ನ್ನು ಸುಲಭವಾಗಿ ತಡೆಯಬಹುದು. ಇವುಗಳ ಜೊತೆಗೆ ಪೌಷ್ಠಿಕ ಆಹಾರ ಹಾಗೂ ದುಶ್ಚಟಗಳಿಂದ ದೂರ ಇರುವುದು ಕೂಡ ಒಳ್ಳೆಯದೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us