/newsfirstlive-kannada/media/post_attachments/wp-content/uploads/2025/03/Venice.jpg)
ಇವು ಪ್ರಪಂಚದ ಅತ್ಯಂತ ಸುಂದರವಾದ ನಗರಗಳು. ಈ ನಗರಗಳ ಸೌಂದರ್ಯ ಸವಿಯಲು ಎರಡು ಕಣ್ಣುಗಳು ಕಡಿಮೆ ಎನಿಸಿಬಿಡುತ್ತದೆ. ದೇಶ ವಿದೇಶಿ ಪ್ರವಾಸಿಗರನ್ನು ತನ್ನ ಕಬಂಧ ಬಾಹುಗಳನ್ನು ಚಾಚಿ ಕರೆಯುವ, ಪ್ರಕೃತಿ ಸೌಂದರ್ಯವೆನ್ನವುದು ಇಲ್ಲಿಯೇ ಬೀಡು ಬಿಟ್ಟುಕೊಂಡು ನಿಂತಿದೆಯಾ ಎನ್ನುವ ಮಟ್ಟಿನ ಸುಂದರತೆಯನ್ನು ತನ್ನ ನೆಲಕ್ಕಂಟಿಸಿಕೊಂಡಿರುವ ನಗರಳು ಇವು. ಆದರೆ ಈ ನಗರಗಳಲ್ಲಿ ಕಾರುಗಳಿಗೆ ಬಿಲ್ಕುಲ್ ಪ್ರವೇಶವಿಲ್ಲ. ಕಾರುಗಳನ್ನು ತೆಗೆದುಕೊಂಡು ಹೋದರೆ ಊರಾಚೆಯೇ ನಿಮ್ಮನ್ನು ನಿಲ್ಲಿಸುತ್ತಾರೆ. ಅಂತಹ ನಗರಗಳು ಯಾವುವು ಎಂಬುದನ್ನು ನೋಡುವುದಾದ್ರೆ.
1. ಇಟಲಿಯ ವೆನ್ಸಿ: ಇದನ್ನು ತೇಲುವ ನಗರಿ ಎಂದೇ ಜಗತ್ತು ಬಣ್ಣಿಸುತ್ತದೆ. ಇಟಲಿಯ ವೆನ್ಸಿಯಲ್ಲಿ ನೀವು ಹುಡುಕಿದರೂ ಕೂಡ ಒಂದೇ ಒಂದು ರೋಡು ಸಿಗೋದಿಲ್ಲ. ಇಲ್ಲಿ ಇರುವುದು ಕೇವಲ ಕೆನಾಲ್ಗಳು ಅಂದ್ರೆ ಕಾಲುವೆಗಳು. ಗೊಂಡಾಲಾ ಇಲ್ಲವೇ ಹಡಗುಗಳ ಮೂಲಕವೇ ನೀವು ಸಾಗಬೇಕು ಮತ್ತು ಅವುಗಳ ಮೂಲಕವೇ ನೀವು ಈ ತೇಲುವ ನಗರಿ ವೆನ್ಸಿಯ ಸೌಂದರ್ಯವನ್ನು ಸವಿಯಬೇಕು.
2.ನೆದರ್ಲ್ಯಾಂಡ್ನ ಗಿಥೋರ್ನ್: ನೆದರ್ಲ್ಯಾಂಡ್ನ ಈ ಗಿಥೋರ್ನ್ ನಗರವನ್ನು ಡಚ್ ವೆನ್ಸಿ ಎಂದು ಕರೆಯಲಾಗುತ್ತದೆ. ಅಂದ್ರೆ ಇಟಲಿಯ ವೆನ್ಸಿಗೆ ಈ ನಗರವನ್ನು ಹೋಲಿಸಲಾಗುತ್ತದೆ. ಕಾರಣ ಇದು ಕೂಡ ಒಂದು ರೀತಿಯ ತೇಲುವ ನಗರಿ. ಈ ನಳನಳಿಸುವ ಪ್ರಕೃತಿ ಸೌಂದರ್ಯ ಹೊಂದಿರುವ ನಗರದಲ್ಲೂ ಕೂಡ ಒಂದೇ ಒಂದು ರಸ್ತೆಯಿಲ್ಲ. ಕೇವಲ ಕಾಲುವೆ ಹಾಗೂ ಪಾದಚಾರಿ ಸೇತುವೆಗಳು ಮಾತ್ರ ಕಾಣ ಸಿಗುತ್ತವೆ. ಹೀಗಾಗಿ ಇಲ್ಲಿಯೂ ಕೂಡ ನೀವು ನಾವೆಗಳ ಮೂಲಕವೇ ಈ ನಗರದ ಪ್ರಕೃತಿ ಸೌಂದರ್ಯ ಸವಿಯಬೇಕು.
3.ಯುಎಸ್ನ ಮ್ಯಾಕಿನಾಕ್ ದ್ವೀಪ: ಇದು ಯುಎಸ್ನ ಮಿಚಿಗನ್ನಲ್ಲಿ ಇರುವಂತ ದ್ವೀಪ. ಇಲ್ಲಿ ಯಾವುದೇ ರೀತಿಯ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ಎಲ್ಲಾ ಮೋಟಾರ್ ವೆಹಿಕಲ್ಗಳಿಗೆ ನಿಷೇಧವಿದೆ. ಕೇವಲ ಸೈಕಲ್, ಕುದುರೆಯ ಟಾಂಗಾ ಇಲ್ಲವೇ ಕಾಲ್ನಡಿಗೆಯಲ್ಲಿಯೇ ನೀವು ನಡೆದುಕೊಂಡು ಹೋಗಬೇಕು. ಕಾರು, ಬೈಕ್ ಈ ರೀತಿಯ ಯಾವುದೇ ವಾಹನಗಳಿಗೂ ಪ್ರವೇಶವಿಲ್ಲ.
4. ಗ್ರೀಸ್ನ ಹೈಡ್ರಾ ದ್ವೀಪ: ಈ ದ್ವೀಪವೂ ಕೂಡ ತನ್ನ ಸುತ್ತಲು ಸೌಂದರ್ಯ ರಾಶಿಯನ್ನು ಹೊತ್ತುಕೊಂಡು ಕುಳಿತಿದೆ. ಇಲ್ಲಿಯೂ ಕೂಡ ಯಾವುದೇ ಮೋಟಾರ್ ವಾಹನಗಳಿಗೆ ಪ್ರವೇಶವಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಒಂದು ಕತ್ತೆ ಮೇಲೆ ಕುಳಿತು ಪ್ರಯಾಣ ಮಾಡಬೇಕು, ಹಡಗುಗಳ ಮೇಲೆ ಪ್ರಯಾಣಿಸಬೇಕು. ಇಲ್ಲವೇ ಕಾಲ್ನಡಿಗೆಯೇ ಗತಿ.
5. ಕೀನ್ಯಾದ ಲಮು: ಕಿನ್ಯಾದ ಲಮು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿಕೊಂಡಿದೆ. ಈ ಇಡೀ ನಗರದಲ್ಲಿ ಹುಡುಕಿದರೇ ಒಂದೇ ಒಂದು ಕಾರು ಅಥವಾ ಒಂದೇ ಒಂದು ಬೈಕ್ ಕೂಡ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಸ್ಥಳೀಯರ ಕತ್ತೆ ಮತ್ತು ನಾವೆಗಳನ್ನು ತಮ್ಮ ಪ್ರಾಥಮಿಕ ಸಾರಿಗೆಯ ವ್ಯವಸ್ಥೆಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರವಾಸಿಗರಿಗೂ ಕೂಡ ಅದೇ ವ್ಯವಸ್ಥೆ ಇರುತ್ತದೆ.
ಇದನ್ನೂ ಓದಿ:ಕಳೆದ 48 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಕೇಳಿ ಬರುತ್ತಿದೆ ಭಾರತದ ಈ ಹಾಡು.. ಬೆರಗಾಗಿದ್ದೇಕೆ ಪ್ರಪಂಚ?
ಹೀಗೆ ಈ ಸುಂದರ ನಗರಿಗಳಲ್ಲಿ ಮೋಟಾರು ವಾಹನಗಳನ್ನು ನಿಷೇಧಿಸಲು ಹಲವು ಕಾರಣಗಳಿವೆ. ತಮ್ಮ ಪ್ರದೇಶವನ್ನು ಪರಿಸರ ಸ್ನೇಹಿಯನ್ನಾಗಿಸುವ, ತಾಜಾ ಗಾಳಿ ಸಿಗುವಂತೆ ಮಾಡುವ ಹಾಗೂ ಬರುವ ಪ್ರವಾಸಿಗರಿಗೆ ಸ್ವಚ್ಛ ಹಾಗೂ ಸುಂದರ ಪರಿಸರವನ್ನು ಒದಗಿಸುವ ಉದ್ದೇಶದಿಂದ ಈ ತಾಣಗಳಲ್ಲಿ ಕಾರು, ಬೈಕ್, ಟ್ರಕ್ ಇಂತಹ ಯಾವುದೇ ಮೋಟಾರು ವಾಹನಗಳಿಗೆ ಪ್ರವೇಶವಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ