ಸೀಬಕ್ಥ್ರೋನ್ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳೇನು?
ಅತಿ ಹೆಚ್ಚು ವಿಟಮಿನ್ C ಪೋಷಕಾಂಶ ಹೊಂದಿರುವ ಹಣ್ಣು ಇದು
ಚರ್ಮದ ಸಮಸ್ಯೆಗಳಿಗೆ ರಾಮಬಾಣ, ಜೀರ್ಣಕ್ರಿಯೆಗೆ ಸಂಜೀವಿನಿ!
ಪ್ರತಿ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿಯೇ ಪರಿಹಾರವಿದೆ. ಪ್ರಕೃತಿ ಕೇವಲ ನೀರು ಅರಣ್ಯದಿಂದ ತುಂಬಿಲ್ಲ. ತುಂಬಿಕೊಂಡ ಅರಣ್ಯದಲ್ಲಿ ನೀರಿನಲ್ಲಿಯೂ ಕೂಡ ಔಷಧಿ ಗುಣವನ್ನು ಇಟ್ಟುಕೊಂಡು ಕುಳಿತಿದೆ. ಪ್ರತಿ ಮರದಲ್ಲಿ, ಪ್ರತಿ ಹಣ್ಣಲ್ಲೂ ಪ್ರತಿ ಬೇರಲ್ಲೂ ಒಂದಿಲ್ಲ ಒಂದು ಔಷಧಿಯ ಗುಣವಿದೆ. ನಾವು ಹುಡುಕಬೇಕಷ್ಟೇ.
ಅಂಥಹ ಔಷಧ ಗುಣವಿರುವ, ಹಲವು ಸಮಸ್ಯೆಗಳಿಗೆ ರಾಮಬಾಣದಂತಿರುವ ಮತ್ತೊಂದು ಹಣ್ಣು ಅಂದ್ರೆ ಅದು ಸೀಬಕ್ಥ್ರೋನ್. ಇದನ್ನು ಸಮುದ್ರದ ಮುಳ್ಳಿನ ಹಣ್ಣೆಂದೇ ಕರೆಯುತ್ತಾರೆ. ಬೆರಿಽ ತರಹದ ಈ ಹಣ್ಣನ್ನು ಆರೇಂಜ್ ಬೆರಿಽ ಎಂದೇ ಕರೆಯುತ್ತಾರೆ. ಈ ತರಹದ ಹಣ್ಣು ಯುರೋಪ್ ಮತ್ತು ಏಷಿಯಾದಲ್ಲಿ ಹೆಚ್ಚು ಕಂಡು ಬರುತ್ತವೆ. ಚರ್ಮದ ಆರೋಗ್ಯ ಸಮಸ್ಯೆಗಳಿಗೆ ಈ ಆರೆಂಜ್ ಬೆರಿಽ ಒಂದು ರಾಮಬಾಣ. ಇದರ ಪ್ರಯೋಜನಗಳೇನು ಅನ್ನೋದನ್ನ ನೋಡುವುದಾದ್ರೆ.
ಇದನ್ನೂ ಓದಿ: ಅತಿಯಾದ ಲೈಂಗಿಕ ಕ್ರಿಯೆಯಿಂದ ಎದುರಾಗೋ ಸಮಸ್ಯೆಗಳೇನು? ನೀವು ಓದಲೇಬೇಕಾದ ಸ್ಟೋರಿ!
ಪೋಷಕಾಂಶಗಳ ಶಕ್ತಿ ಕೇಂದ್ರ!
ಸಮುದ್ರ ತೀರದಲ್ಲಿ ಸಿಗುವ ಈ ಹಣ್ಣನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಅಂತಲೇ ಕರೆಯುತ್ತಾರೆ. ಈ ಒಂದು ಹಣ್ಣಿನಲ್ಲಿ ಅತಿಹೆಚ್ಚು ವಿಟಮಿನ್ ಸಿ ಇರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಸಹಾಯಕಾರಿ. ಇದು ಮಾತ್ರವಲ್ಲ ಈ ಒಂದು ಹಣ್ಣಿನಲ್ಲಿ ಉಳಿದ ಹಣ್ಣುಗಳಿಗಿಂತಲೂ ಹೆಚ್ಚು ವಿಟಮಿನ್ ಎ, ಇ, ಬಿಗಳ ಪೋಷಕಾಂಶವು ಇದೆ. ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ ಹಾಗೂ ಪೋಟ್ಯಾಸಿಯಂ ಕೂಡ ಅತಿ ಹೆಚ್ಚು ಹೊಂದಿರುವ ಹಣ್ಣು ಅಂದ್ರೆ ಅದು ಈ ಆರೆಂಜ್ ಬೆರಿಽ ಎಂದು ಕರೆಸಿಕೊಳ್ಳುವ ಈ ಸೀಬಕ್ಥ್ರೋನ್ ಮಾತ್ರ.
ಸೌಂದರ್ಯವರ್ದಕ ಮತ್ತು ಚರ್ಮಕ್ಕೆ ಆರೋಗ್ಯ
ಅತಿಹೆಚ್ಚು ಸಿ ವಿಟಮಿನ್ ಈ ಹಣ್ಣಿನಲ್ಲಿ ಇರೋದ್ರಿಂದ ನಿಮ್ಮ ಚರ್ಮದ ಆರೋಗ್ಯದ ವಿಚಾರದಲ್ಲಿ ಇದು ಹೆಚ್ಚು ಪ್ರಮುಖ ಪಾತ್ರವಹಿಸುತ್ತದೆ. ಸದಾ ಹರೆಯದ ತ್ವಚೆ ತಮ್ಮದಾಗಬೇಕು ಅನಿಸಿದಲ್ಲಿ ಈ ಹಣ್ಣುಗಳ ಸೇವನೆ ಮಾಡಬೇಕು. ಇದು ಚರ್ಮದಲ್ಲಿ ಮೂಡ ನೀರಿಗೆ ಹಾಗೂ ಮೊಡವೆಗಳನ್ನು ನಿಯಂತ್ರಿಸುತ್ತದೆ. ಚರ್ಮದ ಮೇಲಾಗುವ ಸೋಂಕು ರೀತಿಯ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ.
ಇದನ್ನೂ ಓದಿ: ನೀವು ಈ ಔಷಧಿ ಸೇವಿಸಿದ್ರೆ ಕ್ಯಾನ್ಸರ್ ನಿಮ್ಮ ಬಳಿಯೂ ಸುಳಿಯಲ್ಲ; ಎಲ್ಲರೂ ಓದಲೇಬೇಕಾದ ಸ್ಟೋರಿ!
ಜೀರ್ಣಕ್ರಿಯೆಗೆ ಸಹಕಾರಿ ರಕ್ತನಾಳ ಆರೋಗ್ಯಕ್ಕೂ ಸಹಕಾರಿ
ಡೈಟಿಷಿನ್ ಡಾ ಅರ್ಚನಾ ಬಾತ್ರಾ ಹೇಳುವ ಪ್ರಕಾರ ಈ ಹಣ್ಣು ಕೇವಲ ಚರ್ಮದ ಸಮಸ್ಯೆಗಳಿಗೆ ಮಾತ್ರ ಪ್ರಯೋಜನಕಾರಿಯಲ್ಲ. ಸರ್ವತೋಮುಖ ಆರೋಗ್ಯಕ್ಕೂ ಕೂಡ ಇದು ಸಹಾಯಕಾರಿ. ಇದರಲ್ಲಿ ಅತಿ ಹೆಚ್ಚು ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯಕಾರಿಯಾಗುತ್ತದೆ ಎನ್ನುತ್ತಾರೆ ಡಾ ಬಾತ್ರಾ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ರಕ್ತನಾಳದ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಎನ್ನಲಾಗಿದೆ.
ಹಲವು ರೀತಿಯಲ್ಲಿ ಬಳಸಬಹುದು
ಇನ್ನೂ ಈ ಸೀಬಕ್ಥ್ರೋನ್ ಹಲವು ರೀತಿಯಾಗಿ ನಾವು ಮಾರ್ಪಡಿಸಿಕೊಳ್ಳಬಹುದು. ಇದನ್ನು ಜ್ಯೂಸ್ ಮಾಡಿಕೊಂಡು ಕುಡಿಯಬಹುದು, ಇದರಿಂದ ಎಣ್ಣೆ ಮಾಡಿಕೊಳ್ಳಬಹುದು. ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿಗಾಗಿ ಇದನ್ನು ಜ್ಯೂಸ್ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಸೇವಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಈ ಹಣ್ಣಿಗೆ ಒಳ್ಳೆಯ ಘಮ ಇರೋದ್ರಿಂದ ನೀವು ಇದನ್ನು ಹಲವು ರೀತಿಯ ಅಡುಗೆಯಲ್ಲಿಯೂ ಸಹ ಬಳಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ