newsfirstkannada.com

×

ನೆನೆಯಿಟ್ಟ ಹೆಸರು ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು; ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆ ಆಗಲಿದೆ?

Share :

Published October 1, 2024 at 4:14pm

Update October 1, 2024 at 4:15pm

    ನಿಮ್ಮ ನಿತ್ಯ ಉಪಹಾರದೊಂದಿಗಿರಲಿ ನೆನೆಯಿಟ್ಟ ಹೆಸರು ಕಾಳುಗಳು

    ನೆನೆಯಿಟ್ಟ ಹೆಸರು ಕಾಳುಗಳಿಂದ ನಿಮಗಿದೆ ಬಹಳಷ್ಟು ಪ್ರಯೋಜನಗಳು

    ದೇಹದ ಶಕ್ತಿವರ್ಧನೆ, ಸುಲಭ ಜೀರ್ಣಕ್ರಿಯೆ ಜೊತೆ ಹಲವು ಲಾಭಗಳು

ಹೆಸರು ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುತ್ತವೆ. ಈ ಕಾಳುಗಳನ್ನು ನೆನೆಯಿಟ್ಟು ಮೊಳಕೆ ಬರೆಸಿ ತಿಂದರೆ ಹಲವು ಆರೋಗ್ಯದ ಪ್ರಯೋಜನಗಳಿವೆ. ಹೆಸರುಕಾಳಿನಲ್ಲಿ ಪ್ರೋಟಿನ್ ಅಂಶ ಇರುವುದರಿಂದ ಇವುಗಳನ್ನು ರಾತ್ರಿಯಿಡಿ ನೆನೆಯಿಟ್ಟು ಬೆಳಗ್ಗೆ ಬ್ರೇಕ್​ಫಾಸ್ಟ್ ಜೊತೆ ತಿನ್ನಬೇಕು. ಇದರಿಂದ ಜೀರ್ಣಶಕ್ತಿಗೆ ಬಲ ಸಿಗುವುದರಿಂದ ದೇಹದಲ್ಲಿ ಶಕ್ತಿಯೂ ಕೂಡ ಹೆಚ್ಚಾಗುತ್ತದೆ. ಅದರ ಲಾಭಗಳನ್ನು ನೋಡುತ್ತಾ ಹೋಗುವುದಾದ್ರೆ.

ಮೊಳಕೆಕಾಳುಗಳಲ್ಲಿದೆ ಹೆಚ್ಚಿನ ಪ್ರೋಟೀನ್​
ಮೊಳಕೆಕಾಳುಗಳಲ್ಲಿ ಅತಿಹೆಚ್ಚು ಪ್ರೋಟೀನ್ ಅಂಶಗಳು ಇರುತ್ತದೆ. ಇದು ಸಸ್ಯಾಹಾರದಲ್ಲಿಯೇ ಅತಿಹೆಚ್ಚು ಪ್ರೋಟೀನ್ ಇರುವುದು ಈ ಕಾಳುಗಳಲ್ಲಿಯೇ. ಪೌಷ್ಠಿಕಾಂಶ ನಮ್ಮ ಸ್ನಾಯುಗಳಿಗೆ ಬಲ ತುಂಬುತ್ತದೆ. ಕಸರತ್ತು ಅಥವಾ ಜಿಮ್ ಮಾಡುವವರಿಗೆ ಕಡ್ಡಾಯವಾಗಿ ಇದನ್ನು ತಿನ್ನಲು ಹೇಳುತ್ತಾರೆ. ಕೇವಲ ಸ್ನಾಯು ಬಲವರ್ಧನೆಯಲ್ಲಿ ಮಾತ್ರವಲ್ಲ ಇಡೀ ದೇಹದ ಆರೋಗ್ಯಕ್ಕೆ ನೆನೆಸಿಟ್ಟ ಕಾಳುಗಳು ಸಹಾಯಕ.ಇದನ್ನು ಬೆಳಗಿನ ಉಪಹಾರದಲ್ಲಿ ಬಳಸುವುದರಿಂದ ತೃಪ್ತಿಕರವಾಗಿ ಹೊಟ್ಟೆ ತುಂಬ ಉಪಹಾರ ಮಾಡಿದ ಭಾವ ಮೂಡುತ್ತದೆ ಹಾಗೂ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ.

ದೇಹದ ಶಕ್ತಿಮಟ್ಟವನ್ನು ಬಲವರ್ಧನೆಗೊಳಿಸುತ್ತದೆ

ನೆನೆಯಿಟ್ಟ ಹೆಸರು ಕಾಳುಗಳಲ್ಲಿ ವಿಟಮಿನ್ ಬಿ, ಕಬ್ಬಿಣ ಅಂಶ, ಮ್ಯಾಗ್ನೆಶಿಯಂ, ಪ್ರೋಟೀನ್​ನಂತಹ ಅಂಶಗಳನ್ನು ಇರುವುದರಿಂದ ಇದು ನಿಮ್ಮ ದೇಹದ ಶಕ್ತಿವರ್ಧನೆಗೆ ಬಹಳ ಸಹಕಾರಿಯಾಗಿದೆ. ಇದರಲ್ಲಿರುವ ಪೌಷ್ಠಿಕಾಂಶ ದೇಹಕ್ಕೆ ಸರಬರಾಜು ಆಗುವ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ.

ಜೀರ್ಣಶಕ್ತಿಗೆ ನೆನೆಯಿಟ್ಟ ಕಾಳುಗಳು ಸಹಾಯಕ
ನೆನೆಯಿಟ್ಟ ಕಾಳುಗಳಲ್ಲಿ ಹೆಚ್ಚು ಫೈಬರ್ ಅಂಶಗಳು ಕೂಡ ಇರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಇದು ಸಹಾಯಕ. ಇದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಹಾಗೂ ಪೆಥಿಟಿಕ್ ಆ್ಯಸಿಡ್ ಅಂಶವನ್ನು ಒಡೆದು ಹಾಕುತ್ತದೆ. ಈ ಮೂಲಕ ಜೀರ್ಣಶಕ್ತಿಗೆ ಹೆಚ್ಚು ಬಲ ಕೊಡುತ್ತದೆ.

ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ

ನೆನೆಯಿಟ್ಟ ಹೆಸರು ಕಾಳಿನಲ್ಲಿ ಗ್ಲೈಸೆಮಿಕ್ ಇಂಡೆಕ್ಷ್ ಅತ್ಯಂತ ಕಡಿಮೆ ಇರುತ್ತದೆ. ಅಂದ್ರೆ ಇದು ರಕ್ತದಲ್ಲಿ ಅತ್ಯಂತ ನಿಧಾನವಾಗಿ ಸಕ್ಕರೆ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದರಲ್ಲಿ ಸಹಾಯಕ. ಸಕ್ಕರೆ ಕಾಯಿಲೆಯಿಂದ ನರಳುವವರು ಈ ನೆನೆಯಿಟ್ಟ ಕಾಳುಗಳನ್ನು ತಿನ್ನುವುದರಿಂದ ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ಪಡೆಯಬಹುದು ಹಾಗೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಯೂ ಇಡಬಹುದು.

ಹೃದಯದ ಆರೋಗ್ಯಕ್ಕೆ ಬಹಳ ಸಹಾಯಕಾರಿ
ನೆನೆಯಿಟ್ಟ ಹೆಸರು ಕಾಳಿನಲ್ಲಿ ಅತಿಹೆಚ್ಚು ಪೋಟ್ಯಾಶಿಯಂ, ಮೆಗ್ನಿಶಿಯಂ ಇರುವುದರಿಂದ ಇದು ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನೆಯಿಟ್ಟ ಕಾಳುಗಳು ರಕ್ತತದೊತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಿಂದ ಇದು ಹೃದಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಅದರ ಜೊತೆಗೆ ಇದರಲ್ಲಿ ಫೈಬರ್ ಅಂಶವೂ ಇರುವುದರಿಂದ ಇದು ದೇಹದಲ್ಲಿರುವ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ನಮ್ಮಿಂದ ದೂರ ಉಳಿಯುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆನೆಯಿಟ್ಟ ಹೆಸರು ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು; ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆ ಆಗಲಿದೆ?

https://newsfirstlive.com/wp-content/uploads/2024/10/SOAKED-MOONG-DAL-2.jpg

Load More