newsfirstkannada.com

ಪೋಷಕರೇ ಹುಷಾರ್.. ರಾಜ್ಯದಲ್ಲಿ ಒಂದೇ ದಿನ 5 ಮಕ್ಕಳ ದಾರುಣ ಸಾವು; ಘೋರ ದುರಂತ ಆಗಿದ್ಹೇಗೆ?

Share :

Published May 16, 2024 at 7:12pm

Update May 16, 2024 at 7:13pm

  ಕೆರೆಯಲ್ಲಿ ಈಜಲೆಂದು ಹೋಗಿದ್ದ 4 ಮಕ್ಕಳು ನೀರಿನಲ್ಲಿ ಮುಳುಗಿ ಸಾವು

  ಬಿರು ಬೇಸಿಗೆ ತಾಳಲಾರದೆ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ಐವರು

  ಚೇಳೂರು ತಾಲೂಕಿನ ಗುಂಡ್ಲಪಲ್ಲಿ ಗ್ರಾಮದ ಬಳಿ ಮತ್ತಿಬ್ಬರು ಮೃತ್ಯು

ಹಾಸನ: ಪೋಷಕರು ಮಕ್ಕಳ ವಿಚಾರದಲ್ಲಿ ಎಷ್ಟೋ ಜಾಗರೂಕರಾಗಿದ್ದರೂ ಕಡಿಮೆನೇ. ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಅಂತ ಗಮನಿಸುತ್ತಾ ಇರಬೇಕು. ಆದರೆ ಮಕ್ಕಳ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ಆಲೂರು ತಾಲೂಕಿನ, ತಿಮ್ಮನಹಳ್ಳಿ ಗ್ರಾಮದಲ್ಲಿ ನಾಲ್ಕು ಬಾಲಕರು ದಾರುಣವಾಗಿ ಮೃತಪಟ್ಟಿದ್ದಾರೆ. ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಜೀವನ್ (13), ಸಾತ್ವಿಕ್ (11), ವಿಶ್ವ (12), ಪೃಥ್ವಿ (12) ಮೃತ ದುರ್ದೈವಿಗಳು.

ಮೃತ ನಾಲ್ಕು ಮಕ್ಕಳು ಮುತ್ತಿಗೆ ಗ್ರಾಮದವರಾಗಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಕೆರೆಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಆಲೂರು ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಕಾರ್ಯಚರಣೆ ನಡೆಸಿ ನಾಲ್ಕು ಮಕ್ಕಳ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಬಳಿಕ ಆಲೂರು ತಾಲೂಕಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಮೃತ ಬಾಲಕರ ಕುಟುಂಬಸ್ಥರು ಆಸ್ಪತ್ರೆ ಬಳಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಇನ್ನು, ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ಗುಂಡ್ಲಪಲ್ಲಿ ಗ್ರಾಮದ ಬಳಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಜಲಸಮಾಧಿಯಾಗಿರೋ ಘಟನೆಯೊಂದು ನಡೆದು ಹೋಗಿದೆ. ಸೋಮನಾಥಪುರ ಗ್ರಾಮ ಮಹೇಂದ್ರ (16), ಬೀರಿಂಗವಾಡ್ಲಪಲ್ಲಿ ಗ್ರಾಮದ ಭಾಸ್ಕರ್ (32) ಮೃತ ದುರ್ದೈವಿಗಳು.

ಬಿರು ಬೇಸಿಗೆ ತಾಳಲಾರದೆ ಐದು ಜನ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು. ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟು ಮೂವರು ಬಚಾವ್ ಆಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಚೇಳೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್.. ರಾಜ್ಯದಲ್ಲಿ ಒಂದೇ ದಿನ 5 ಮಕ್ಕಳ ದಾರುಣ ಸಾವು; ಘೋರ ದುರಂತ ಆಗಿದ್ಹೇಗೆ?

https://newsfirstlive.com/wp-content/uploads/2024/05/death51.jpg

Load More