/newsfirstlive-kannada/media/post_attachments/wp-content/uploads/2025/06/Air-India-flight-6.jpg)
ಗುಜರಾತ್​ನಿಂದ ಲಂಡನ್​​ಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಪತನಗೊಂಡು ಭಾರೀ ಅನಾಹುತ ಸೃಷ್ಟಿಸಿದೆ. ತಾಂತ್ರಿಕ ದೋಷದಿಂದ ಟೇಕ್​ ಆಫ್ ಆದ ಐದು ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಅಹ್ಮದಾಬಾದ್​ನಲ್ಲಿರುವ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್​ಗೆ ಬಂದು ಅಪ್ಪಳಿಸಿದೆ. ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಆವರಿಸಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಐವರು ಮೆಡಿಕಲ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್​ಲೈನರ್ 242 ಪ್ರಯಾಣಿಕರೊಂದಿಗೆ ಟೇಕ್ ಆಪ್ ಆಗಿತ್ತು. ಅದರಲ್ಲಿ 230 ಪ್ರಯಾಣಿಕರು, 10 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ಸ್ ಇದ್ದರು. ಇಂದು ಮಧ್ಯಾಹ್ನ 1.38ಕ್ಕೆ ಸರಿಯಾಗಿ ವಿಮಾನ ಟೇಕ್​-ಆಫ್ ಆಗಿತ್ತು.
ಇದನ್ನೂ ಓದಿ: ಮಂಗಳೂರು ದುರಂತ ನೆನಪಿಸಿದ ಅಹ್ಮದಾಬಾದ್ ವಿಮಾನ ಪತನ.. ವಿಮಾನ ಅಪಘಾತಗಳೆಲ್ಲವೂ ಘನ ಘೋರ..
/newsfirstlive-kannada/media/post_attachments/wp-content/uploads/2025/06/Air-India-flight-2.jpg)
ವರದಿಗಳ ಪ್ರಕಾರ, ಹಾಸ್ಟೆಲ್​ನಲ್ಲಿದ್ದ 40 ಡಾಕ್ಟರ್​ಗಳು ಗಾಯಗೊಂಡಿದ್ದಾರೆ. ಅವರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತಾ ಪ್ರತ್ಯಕ್ಷದರ್ಶಿ ಡಾ.ಶ್ಯಾಮ್ ಗೋವಿಂದ್ ಅವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ನಾನು ಕೂಡ ಘಟನೆಯಲ್ಲಿ ಗಾಯಗೊಂಡಿದ್ದೇನೆ. ಜ್ಯೂನಿಯರ್ ಡಾಕ್ಟರ್ ಕೂಡ ಗಾಯಗೊಂಡಿದ್ದಾರೆ. ಸುಮಾರು 30 ರಿಂದ 40 ಮಂದಿ MBBS ಓದುತ್ತಿರುವ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಮೇಡೇ, ಮೇಡೇ, ಮೇಡೇ’ ಎಂದು ಕೂಗಿದ ಪೈಲಟ್​.. ಮಾರಣಾಂತಿಕ ‘ಎಮೆರ್ಜೆನ್ಸಿ ಕರೆ’ಯ ಅರ್ಥವೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us