/newsfirstlive-kannada/media/post_attachments/wp-content/uploads/2024/08/BLY_NIDHI_1.jpg)
ಬಳ್ಳಾರಿ: ನಿಧಿ ಆಸೆಗಾಗಿ ಬೆಟ್ಟದ ಮೇಲಿನ ಗುಹೆಯೊಳಗೆ ಸುರಂಗ ಕೊರೆಯಲು ಮುಂದಾಗಿದ್ದ 11 ಖದೀಮರ ಪೈಕಿ ಐವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಸಂಡೂರು ತಾಲೂಕಿನ ತಾರಾನಗರದ ನಾರಿಹಳ್ಳದ ಹಿಂಭಾಗದ ಗುಡ್ಡದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಭಾರತಕ್ಕೆ ಮತ್ತೊಂದು ನಿರಾಸೆ.. ಕೇವಲ ಒಂದೇ ಒಂದು ಕೆಜಿಯಿಂದ ಮೆಡಲ್ ಮಿಸ್ ಮಾಡಿಕೊಂಡ ಮೀರಾಬಾಯಿ ಚಾನು
ಆಂಧ್ರ ಮೂಲದ ಶ್ರೀನಿವಾಸ್ (45), ಆಕಾಶ್ ( 20), ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ಸಿಂಗ್ ದೊಡ್ಡಮನಿ (50)ಯನ್ನ ಬಂಧಿಸಲಾಗಿದೆ. 6 ಜನ ಅರಣ್ಯಾಧಿಕಾರಿಗಳು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಇವರೆಲ್ಲ ಸೇರಿ ನಿಧಿಗಾಗಿ 40 ಮೀಟರ್ ಆಳದ ಗುಹೆಯೊಳಗೆ ಇಳಿದಿದ್ದರು. ಗುಹೆಯೊಳಗೆ ಸುರಂಗ ಕೊರೆಯಲು ಕೃತಕ ಆಕ್ಸಿಜನ್ ವ್ಯವಸ್ಥೆ, ಲೈಟಿಂಗ್ಗಾಗಿ ಜನರೇಟರ್ ವ್ಯವಸ್ಥೆ ಮಾಡಿಕೊಂಡಿದ್ದರು. ಅತ್ಯಾಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆಗೆ ಮುಂದಾಗಿದ್ದರು. ಅರಣ್ಯದಲ್ಲಿರುವ ಗುಹೆಗಳನ್ನು ಖದೀಮರು ಟಾರ್ಗೆಟ್ ಮಾಡುತ್ತಿದ್ದರು. ತಾರಾನಗರ ಓರ್ವ ಹಾಗೂ ಹೊಸಪೇಟೆ ಇನ್ನೊಬ್ಬ ಇದಕ್ಕೆ ಕುಮ್ಮಕ್ಕು ನೀಡಿದ್ದಾನೆ.
ಇದನ್ನೂ ಓದಿ: BREAKING: ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್
ನಿಧಿಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡು ನೀರು ತರಲೆಂದು ಖದೀಮರು ನಾರಿಹಳ್ಳಕ್ಕೆ ಹೋಗಿದ್ದಾರೆ. ಈ ವೇಳೆ ಅದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಅವರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ನಿಧಿಗಾಗಿ ಬಂದಿರುವುದು ಗೊತ್ತಾಗಿ ಗುಹೆಯ ಬಳಿ ಹೋಗಿ ಎಲ್ಲ ನೋಡಿದ್ದಾರೆ. ಸುರಂಗ ಕೊರೆಯಲು ಮಾಡಿಕೊಂಡಿದ್ದ ವ್ಯವಸ್ಥೆ ನೋಡಿ ಅರಣ್ಯಾಧಿಕಾರಿಗಳು ಫುಲ್ ಶಾಕ್ ಆಗಿದ್ದಾರೆ. ಈ ಸಂಬಂಧ ಐವರನ್ನು ಅರೆಸ್ಟ್ ಮಾಡಿರುವ ಅರಣ್ಯಾಧಿಕಾರಿಗಳು ಕಾಡು ಪ್ರಾಣಿಗಳ ಹತ್ಯೆ ಕಾಯ್ದೆಯಡಿ ತನಿಕೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ