ಅತಿಬೇಗನೇ ತರಬೇತಿ ಕಲಿಯುವ ಶ್ವಾನದ ತಳಿಗಳು ಯಾವುವು? ಈ ಐದು ನಾಯಿಗಳು ಯಾವತ್ತಿಗೂ ಬೆಸ್ಟ್

author-image
Gopal Kulkarni
Updated On
ಅತಿಬೇಗನೇ ತರಬೇತಿ ಕಲಿಯುವ ಶ್ವಾನದ ತಳಿಗಳು ಯಾವುವು? ಈ ಐದು ನಾಯಿಗಳು ಯಾವತ್ತಿಗೂ ಬೆಸ್ಟ್
Advertisment
  • ಮನೆಯಲ್ಲಿ ಮೊದಲ ಬಾರಿ ಶ್ವಾನ ಸಾಕುವವರು ಇದನ್ನು ಗಮನಿಸಬೇಕು
  • ಅತಿವೇಗವಾಗಿ ನಿಮ್ಮ ಮಾತು ಕೇಳಲು ಕಲಿಯುತ್ತವೆ ಈ ಐದು ಶ್ವಾನಗಳು
  • ಈ ಐದು ಶ್ವಾನಗಳಿಗೆ ನೀವು ತರಬೇತಿ ನೀಡುವುದು ಅತ್ಯಂತ ಸರಳ

ಮನುಷ್ಯನೊಂದಿಗೆ ಅತ್ಯಂತ ಪ್ರೀತಿಯಿಂದ ಹೊಂದಿಕೊಂಡು ಸಾಗುವ ಸಾಕು ಪ್ರಾಣಿಗಳಲ್ಲಿ ಶ್ವಾನಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತವೆ. ಮನೆಯಲ್ಲಿ ತಂದು ಕಟ್ಟಿಕೊಂಡರೇ ಸಾಲದು. ಅವುಗಳಿಗೆ ಸರಿಯಾದ ಟ್ರೇನಿಂಗ್​ ಕೂಡ ನೀಡಬೇಕು. ಏನು ಮಾಡಬೇಕು ಏನು ಮಾಡಬಾರದು ಎಂಬ ಬೇಸಿಕ್​ ಟ್ರೇನಿಂಗ್ ಅವುಗಳಿಗೆ ಅವಶ್ಯಕತೆ ಇರುತ್ತದೆ. ಕೆಲವೊಂದು ಶ್ವಾನಗಳು ಬೇಗನೇ ತಿಳಿದುಕೊಳ್ಳುತ್ತವೆ. ಕೆಲವೊಂದು ಶ್ವಾನಗಳು ಸ್ವಲ್ಪ ಸಮಯತೆಗೆದುಕೊಳ್ಳುತ್ತವೆ. ಬೇಗನೆ ತರಬೇತಿ ಕಲಿಯುವ ಐದು ಶ್ವಾನಗಳ ತಳಿ ಯಾವುವು ಎಂದು ನೋಡುವುದಾದ್ರೆ

publive-image

1. ಬಾರ್ಡರ್ ಕೋಲಿ​: ಬಾರ್ಡರ್ ಕೊಲ್ಲಿ ಶ್ವಾನವನ್ನು ವಿಶ್ವದ ಅತ್ಯಂತ ಬುದ್ಧಿವಂತ ನಾಯಿ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಬೇಗನೇ ನಾವು ನೀಡುವ ಕಮಾಂಡ್​ಗಳನ್ನು ಅರ್ಥಮಾಡಿಕೊಂಡು ಬೇಗನೆ ಕಲಿಯುತ್ತದೆ. ಇನ್ನು ಟ್ರೇನಿಂಗ್ ಸಮಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಇದು ನಡೆದುಕೊಳ್ಳುತ್ತದೆ. ಈ ನಾಯಿಯ ಎನರ್ಜಿ ಲೇವಲ್ ಕೂಡ ಅದ್ಭುತವಾಗಿದ್ದು ಯಾವುದೇ ರೀತಿಯ ಟ್ರೇನಿಂಗ್​​ನ್ನು ಸರಳವಾಗಿ ಕಲಿತುಕೊಳ್ಳುತ್ತದೆ.

ಇದನ್ನೂ ಓದಿ:ಭಾರತದಲ್ಲಿ ಅತಿಹೆಚ್ಚು ಮಾಂಸಾಹಾರ ಸೇವನೆ ಯಾವ ರಾಜ್ಯದಲ್ಲಿದೆ? ಇಲ್ಲಿ 99.8ರಷ್ಟು ಜನ ನಾನ್​-ವೆಜ್​ ಪ್ರಿಯರು

publive-image

2. ಗೋಲ್ಡನ್ ರಿಟ್ರೈವರ್: ಈ ತಳಿಯ ಶ್ವಾನ ಅತ್ಯಂತ ಜನಪ್ರಿಯವಾಗಿರುವ ಫ್ಯಾಮಿಲಿ ಡಾಗ್, ಇದು ಫ್ರೆಂಡ್ಲಿಯಾಗಿ ಮನೆಯವರ ಜೊತೆಗೆ ಇರುತ್ತೆ. ಸದಾ ಶಾಂತಚಿತ್ತದ ಸ್ವಭಾವದ ಈ ಶ್ವಾನ, ನಾವು ಹೇಳಿಕೊಟ್ಟಿದ್ದನ್ನು ಅತಿಬೇಗ ಕಲಿಯುತ್ತದೆ. ಅತ್ಯಂತ ವೇಗವಾಗಿ ಕಮಾಂಡ್​ಗಳನ್ನು ಗ್ರಹಿಸಬಲ್ಲ ಶ್ವಾನಗಳ ಪಟ್ಟಿಯಲ್ಲಿ ಗೋಲ್ಡನ್ ರಿಟ್ರೈವರ್ ಕೂಡ ಒಂದು.

publive-image

3. ಲ್ಯಾಬ್ರಡಾರ್: ಅತ್ಯಂತ ಸರಳವಾಗಿ ತರಬೇತಿ ನೀಡಬಹುದಾದ ಶ್ವಾನವಿದ್ದರೆ ಅದು ಲ್ಯಾಬ್ರಡಾರ್​. ಅತ್ಯಂತ ಬುದ್ಧಿವಂತ ಶ್ವಾನಗಳ ಪೈಕಿ ಲ್ಯಾಬ್ರಡಾರ್ ಸದಾ ಮುಂದೆ ನಿಲ್ಲುವ ತಳಿ. ಇದಕ್ಕೆ ತರಬೇತಿ ನೀಡುವುದು ನೀರು ಕುಡಿದಷ್ಟೇ ಸರಳ. ಇವುಗಳ ಬುದ್ಧಿವಂತಿಕೆ ಹಾಗೂ ಪ್ರಾಮಾಣಿಕತೆಯಿಂದಾಗಿ ಹೇಳಿಕೊಟ್ಟ ಕಮಾಂಡ್​ಗಳನ್ನು ಬಹುಬೇಗನೆ ಗ್ರಹಿಸಿ ಬಹುಬೇಗನೇ ಕಲಿಯುತ್ತವೆ.

ಇದನ್ನೂ ಓದಿ:ಚಾಕೊಲೇಟ್​ ಚಿಪ್​ ಕುಕ್ಕಿ ತಯಾರಿಸಲು ಈತ ಏನು ಬಳಸಿದ ಗೊತ್ತಾ? ಫುಡ್ ಇಂಜಿನಿಯರ್ ವಿಡಿಯೋ ವೈರಲ್

publive-image

4. ಪೂಡಲ್ : ಪೂಡಲ್ ತಳಿಯ ಶ್ವಾನಗಳು ಕೂಡ ಅತ್ಯಂತ ಬುದ್ಧಿವಂತ ನಾಯಿಗಳ ಪೈಕಿಯಲ್ಲಿ ಒಂದು. ಶಿಸ್ತು ಹಾಗೂ ಶ್ರದ್ಧೆ ಎರಡನ್ನೂ ರೂಢಿಸಿಕೊಂಡಿರುವ ಈ ಶ್ವಾನಗಳನ್ನು ತರಬೇತಿಗೊಳಪಡಿಸುವುದು ಅತ್ಯಂತ ಸರಳ. ಇದರ ಚುರುಕುತನ ಹಾಗೂ ಬುದ್ಧಿವಂತಿಕೆಯಿಂದಾಗಿ ಮಾಲೀಕರು ಕಲಿಸಿಕೊಡುವ ಎಲ್ಲಾ ತರಬೇತಿಗಳನ್ನು ಸಲೀಸಾಗಿ ಮಾಡಿ ಮುಗಿಸುತ್ತವೆ.

publive-image

5. ಜರ್ಮನ್ ಶೆಫರ್ಡ್: ಜಗತ್ತಿನ ಅತ್ಯಂತ ಪ್ರಾಮಾಣಿಕ ಶ್ವಾನಗಳ ತಳಿಗಳಲ್ಲಿ ಜರ್ಮನ್ ಶೆಫರ್ಡ್ ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ. ಸದಾ ಚಟುವಟಿಕೆಯಿಂದ ಇರುವ ಈ ಶ್ವಾನ ತನ್ನ ಬುದ್ಧವಂತಿಕೆ ಏನು ಅನ್ನೋದನ್ನ ಇದನ್ನು ತರಬೇತಿ ಮಾಡಿದವರ ಅನುಭವಕ್ಕೆ ಬರುತ್ತದೆ. ಸೈನಿಕ ದೇಶ ಕಾಯ್ದಂತೆ ಇವು ಮನೆ ಹಾಗೂ ಮನೆಯವರನ್ನು ಕಾಯುತ್ತವೆ. ಈ ತಳಿಯೂ ಕೂಡ ಹೇಳಿಕೊಟ್ಟದ್ದನ್ನು ಸರಳವಾಗಿ ಕಲಿಯುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment