newsfirstkannada.com

×

ಅಸಿಡಿಟಿ ಸಮಸ್ಯೆಗಳು ಶುರುವಾಗಲು ಕಾರಣವೇನು? ಅದರಿಂದ ಪಾರಾಗಲು ಇಲ್ಲಿ ಇವೆ ಐದು ಟಿಪ್ಸ್

Share :

Published October 12, 2024 at 4:50pm

Update October 12, 2024 at 4:56pm

    ನೀವು ಆ್ಯಸಿಡಿಟಿಯಿಂದ ಬಳಲುತ್ತಿದ್ದರೆ ಅದಕ್ಕೆ ಇವೆ ಹಲವು ಕಾರಣ

    ಆ್ಯಸಿಡಿಟಿಯಿಂದ ಮುಕ್ತಿ ಪಡೆಯಬೇಕಾದಲ್ಲಿ ಐದು ನಿಯಮ ಪಾಲಿಸಿ

    ಆ್ಯಸಿಡಿಟಿಯಿಂದ ಪಾರಾಗಲು ನೀವು ಮಾಡಬೇಕಾಗಿದ್ದು ಏನು ಗೊತ್ತಾ?

ನೀವು ಊಟ ಮಾಡಿದ ಕೂಡಲೇ ನಿಮ್ಮ ಹೊಟ್ಟೆಯಲ್ಲಿ ಉರಿ ಕಾಣಿಸಲು ಶುರುವಾಗುತ್ತಾ? ಎದೆಯಲ್ಲಿ ಆಗಾಗ ಉರಿ ಬಂದಂತಾಗಿದೆ ಸಮಸ್ಯೆಗಳು ಆಗ್ತಿದೆಯಾ? ಹಾಗಿದ್ರೆ ನೀವು ತೀವ್ರ ಅಸಿಡಿಟಿಯಿಂದ ಬಳಲುತ್ತಿದ್ದೀರಾ ಅಂತಲೇ ಅರ್ಥ. ಅತಿಯಾದ ಆ್ಯಸಿಡ್ ರಿಫ್ಲಕ್ಸ್ (acid reflux) ಸೇವನೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ಅಸಿಡಿಟಿಯ ಬಗ್ಗೆ ಹಲವು ಕಾರಣಗಳನ್ನು ಬಿಚ್ಚಿಡುತ್ತಾರೆ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಪ್ರದೀಪ್ತಾ ಸೇಥಿ. ಅವರು ಹೇಳುವ ಪ್ರಕಾರ. ಸಮಯವಲ್ಲದ ಸಮಯದಲ್ಲಿ ಊಟ ಮಾಡುವುದು. ವಿಪರೀತ ಒತ್ತಡದ ಜೀವನ, ಧೂಮಪಾನ ಮಾಡುವುದು ಅತಿಹೆಚ್ಚು ಕಫೀನ್​ ಸೇವಿಸುವುದು. ಅತಿಯಾದ ಖಾರದ ಹಾಗೂ ಫ್ಯಾಟಿ ಫುಡ್ ಸೇವನೆ ಇವೆಲ್ಲವೂ ಅಸಿಡಿಟಿಯ ಪ್ರಮುಖ ಕಾರಣಗಳಾಗಿವೆ. ಸಾಧಾರಣವಾಗಿ ಶುರುವಾಗುವ ಈ ಅಸಿಡಿಟಿ ಮುಂದೆ ಅಲ್ಸರ್​ನಂತಹ ಸಮಸ್ಯೆಗಳನ್ನು ತಂದಿಡುತ್ತದೆ. ಊಟವನ್ನು ಮುಂದೂಡುವುದು ಅಸಿಡಿಟಿಗೆ ಪ್ರಮುಖ ಕಾರಣ. ಇದರಿಂದ ಹೊಟ್ಟೆಯ ಪಚನಕ್ರಿಯೆಯ ಶಕ್ತಿ ಕ್ಷೀಣಿಸುತ್ತದೆ. ಇದು ಮಾತ್ರವಲ್ಲ ಪದೇ ಪದೇ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೂಡ ಅಸಿಡಿಟಿಗೆ ಕಾರಣವಾಗುತ್ತದೆ ಎಂದು ಸೇಥಿ ಹೇಳಿದ್ದಾರೆ.

ಇದನ್ನೂ ಓದಿ: Heart attack ಭುಜ ಮತ್ತು ತೋಳಿನ ನೋವು ಕೂಡ ಡೇಂಜರ್​; ಈ 6 ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ..

ಅಸಿಡಿಟಿಯಿಂದ ಪಾರಾಗಲು ಪ್ರಮುಖವಾದ ಐದು ಸಲಹೆಗಳನ್ನು ನೀಡುತ್ತಾರೆ ಆನಂದಪುರದ ಫೋರ್ಟಿಸ್ ಕೊಲ್ಕತ್ತಾ ಆಸ್ಪತ್ರೆಯ ವೈದ್ಯರಾದ ಉದಿಪ್ತಾ ರಾಯ್. ಅವುಗಳು ಪ್ರಮುಖವಾಗಿ ಹೀಗಿವೆ

1 ಎರಡು ಗಂಟೆಗಿಂತ ಹೆಚ್ಚು ಉಪವಾಸ ಮಾಡಬೇಡಿ. ಪ್ರತಿ ಎರಡುಗಂಟೆಗೊಮ್ಮೆ ಅಲ್ಪವಾಗಿ ಏನಾದರೂ ತಿನ್ನುವ ರೂಢಿ ಇಟ್ಟುಕೊಳ್ಳಿ. ಹಿತಕರವಾದ ಆಹಾರ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಒಳ್ಳೆಯದು ಎಂದು ಉದೀಪ್ತಾ ಹೇಳುತ್ತಾರೆ.

2 ಊಟ ಮಾಡುವಾಗ ಅದಕ್ಕೆ ಬೇಕಾದ ಸಮಯವನ್ನು ನೀಡಿ. ಗಡಿಬಿಡಿಯಲ್ಲಿ ತಿಂದು ಎದ್ದು ಬರಬೇಡಿ. ಚೆನ್ನಾಗಿ ಅಗಿದು ಜಗಿದು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ ಇದರಿಂದ ಅಸಿಡಿಟಿಯಂತಹ ಸಮಸ್ಯೆಯಿಂದ ದೂರ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ತೊಗರಿಬೇಳೆಗಿಂತ ಮಸೂರ್ ಬೇಳೆ ಹೆಚ್ಚು ಉತ್ತಮ; ಈ ಬೇಳೆಯಲ್ಲಿ ಇರುವ ಆರೋಗ್ಯಕರ ಅಂಶಗಳೇನಿವೆ ಗೊತ್ತಾ..?

3 ಅಸಿಡಿಕ್ ಮತ್ತು ಏರೋಟೆಡ್ ಆಹಾರಗಳಿಂದ ಆದಷ್ಟು ದೂರ ಉಳಿಯಿರಿ. ಅಂದ್ರೆ ಹುಳಿ ಪದಾರ್ಥ ಹಾಗೂ ಅಸಿಡಿಟಿಯನ್ನು ಹೆಚ್ಚು ಮಾಡುವಂತ ಆಹಾರಗಳಿಂದ ನಾವು ದೂರ ಉಳಿಯಬೇಕು. ಕರಿದ ಪದಾರ್ಥಗಳು. ಡೈರಿ ಪದಾರ್ಥಗಳು . ಈ ತರಹದ ಪದಾರ್ಥಗಳಿಂದ ದೂರ ಇದ್ದು ಹೆಚ್ಚು ಮೊಸರು ಹಾಗೂ ಮಿಲ್ಕ್​ಶೇಕ್​ಗಳನ್ನು ಸೇವಿಸುವುದು ಉತ್ತಮ ಎಂದು ಹೇಳಲಾಗಿದೆ.

4 ಅಡುಗೆಯಲ್ಲಿ ಹೆಚ್ಚು ಎಣ್ಣೆ ಉಪಯೋಗ ಮಾಡಬಾರದು. ಪಲ್ಯ, ಸಾರು ಮಾಡುವಾಗ ಎಣ್ಣೆಯನ್ನು ಮಿತವಾಗಿ ಬಳಸಬೇಕು.

5 ಮನಸ್ಸನ್ನು ಆದಷ್ಟು ಪ್ರಫುಲ್ಲವಾಗಿರಿಸಿಕೊಳ್ಳಿ. ಉಲ್ಲಾಸದಿಂದ ಕೂಡಿದ ಮನಸ್ಸು ನಿಮ್ಮದಾದಲ್ಲಿ ಅಸಿಡಿಟಿಯಂತಹ ಸಮಸ್ಯೆಗಳು ಕಾಡುವುದಿಲ್ಲ. ಅತಿಯಾದ ಚಿಂತೆ ಹಾಗೂ ಒತ್ತಡಗಳಿಂದಲೂ ಅಸಿಡಿಟಿಯಿಂದ ಬಳಲುತ್ತಾರೆ ಎಂದು ಉದಿಪ್ತಾ ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಿಡಿಟಿ ಸಮಸ್ಯೆಗಳು ಶುರುವಾಗಲು ಕಾರಣವೇನು? ಅದರಿಂದ ಪಾರಾಗಲು ಇಲ್ಲಿ ಇವೆ ಐದು ಟಿಪ್ಸ್

https://newsfirstlive.com/wp-content/uploads/2024/10/ACIDITY-PROBLEM.jpg

Load More