/newsfirstlive-kannada/media/post_attachments/wp-content/uploads/2025/01/5-FOODS-CANCER-1.jpg)
ಕ್ಯಾನ್ಸರ್ ಎಂಬುದು ವಿಶ್ವಕ್ಕೆ ಮಹಾಮಾರಿಯಾಗಿ ಮಾರಣಾಂತಿಕ ಕಾಯಿಲೆಯಾಗಿ ಕಾಡುತ್ತಿದೆ. 2022ರ ವರದಿಯ ಪ್ರಕಾರ ಪ್ರತಿ 9 ಜನ ಪುರಷರಲ್ಲಿ ಒಬ್ಬರಿಗೆ ಹಾಗೂ ಪ್ರತಿ 12 ಜನ ಮಹಿಳೆಯರಲ್ಲಿ ಒಬ್ಬರಿಗೆ ಈ ಮಹಾಮಾರಿ ಅಂಟಿಕೊಂಡು ಪ್ರಾಣ ತೆಗೆಯುತ್ತಿದೆ ಎಂದು ಹೇಳಲಾಗಿದೆ. ಕ್ಯಾನ್ಸರ್​ನಿಂದ ದೂರ ಉಳಿಯಲು ನಮ್ಮ ಆಹಾರ ಕ್ರಮ ನಿಜಕ್ಕೂ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಪ್ರಮುಖಆಹಾರಗಳು ದೇಹದಲ್ಲಿ ಕ್ಯಾನ್ಸರ್ ಉತ್ಪತ್ತಿ ಮಾಡವಲ್ಲಿ ಪೂರಕವಾಗಿ ಕಾರ್ಯನಿರ್ವಹಸಿಸುತ್ತವೆ ಹೀಗಾಗಿ ಅವುಗಳಿಂದ ದೂರವೇ ಉಳಿಯಬೇಕು. ಹೇಗೆ ಸಿಗರೇಟ್ ಸೇವನೆ, ತಂಬಾಕು ಸೇವನೆ, ಮದ್ಯಪಾನ ಕ್ಯಾನ್ಸರ್​ಗೆ ಕಾರಣವಾಗಲಿವೆಯೋ ಅದೇ ರೀತಿ ಕೆಲವು ಆಹಾರಗಳು ಕೂಡ ಕ್ಯಾನ್ಸರಕಾರಕವಾಗಿ ಕಾಡಲಿವೆ. ಅವುಗಳಲ್ಲಿ ಪ್ರಮುಖವಾಗಿ ಈ ಐದು ಆಹಾರಗಳು
/newsfirstlive-kannada/media/post_attachments/wp-content/uploads/2025/01/5-FOODS-CANCER-2.jpg)
1. ಕೆಂಪು ಮತ್ತು ಸಂಸ್ಕರಿಸಿದ ಮಾಂಸ
ಕೆಂಪು ಮತ್ತು ಸಂಸ್ಕರಿಸಿದ ಮಾಂಸಾಹಾರ ಸೇವನೆ ನಿಜಕ್ಕೂ ಅಪಾಯಕಾರಿ. ಇದು ನೈಟ್ರೇಟ್ ಹಾಗೂ ಪ್ರಿಸರ್ವೇಟಿವ್​ನಂತಹ ಅಂಶಗಳನ್ನು ಹೊಂದಿರುತ್ತದೆ. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಕೆಂಪು ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಅಪಾಯಕಾರಿ ಅಂಶಗಳು ಅವುಗಳನ್ನು ಅತಿಹೆಚ್ಚು ಕಾವಿನಲ್ಲಿ ಬೇಯಿಸುವಾಗ ಸೇರಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಇದು ಜೀರ್ಣಾಂಗವ್ಯೂಹ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಕೂಡ ಉಲ್ಲೇಖಿಸಲಾಗಿದೆ. ಉಪ್ಪು ಹಾಕಿ ಒಣಗಿಸಲಾದ ಹಂದಿ ಮಾಂಸ ಅಂದ್ರೆ ಬೇಕನ್, ಸಲಾಮಿ, ಹ್ಯಾಮ್ ಮತ್ತು ಹಾಟ್​ಡಾಗ್​ಗಳ ಮಾಂಸ ತಿನ್ನುವುದು ನಿಜಕ್ಕೂ ಅಪಾಯಕಾರಿ ಎಂದು ಅಧ್ಯಯನಗಳು ಹೇಳುತ್ತವೆ.
/newsfirstlive-kannada/media/post_attachments/wp-content/uploads/2025/01/5-FOODS-CANCER-3.jpg)
2. ಸಕ್ಕರೆಯಂಶವುಳ್ಳ ಪಾನೀಯಗಳು
ಎನ್​ಐಹೆಚ್​ ಅಧ್ಯಯನವು ಹೇಳುವ ಪ್ರಕಾರ ತುಂಬಾ ಸಕ್ಕರೆ ಅಂಶವುಳ್ಳ ಪಾನೀಯಗಳು ಕ್ಯಾನ್ಸರ್​ಗೆ ಕಾರಣವಾಗುತ್ತವೆ. ಅತಿಯಾದ ಸಿಹಿ ಪದಾರ್ಥ, ಸಾಫ್ಟ್​ಡ್ರಿಂಕ್ಸ್, ಕ್ಯಾಂಡೀಸ್ ಮತ್ತು ತುಂಬಾ ಇಷ್ಟಪಟ್ಟು ತಿನ್ನುವ ಪೇಸ್ಟ್ರೀಸ್​ ಕೂಡ ನಿಮ್ಮ ದೇಹದಲ್ಲಿ ಬೊಜ್ಜನ್ನು ಸೃಷ್ಟಿಸಿ ಬ್ರೀಸ್ಟ್ ಹಾಗೂ ಎಂಡೊಮೆಟ್ರಿಯಲ್ ಕ್ಯಾನ್ಸರ್​ಗೆ ಕಾರಣವಾಗಬಹುದು.
3. ಸಂಸ್ಕರಿಸಿದ ಕಾರ್ಬೋಹೈಡ್ರೇಡ್​ಗಳು
ಕ್ಯಾನ್ಸರ್ ಪಿಜಿಷಿಯನ್ ಎಕ್ಸ್​ಪರ್ಟ್​ ಡಾ ಜೆಹ್ಯಾನ್ ಧಾಬರ್ ಹೇಳುವ ಪ್ರಕಾರ ಮನುಷ್ಯನ ದೇಹದಲ್ಲಿ ಸೃಷ್ಟಿಯಾಗು ಅನಾರೋಗ್ಯಕರ ಕೊಬ್ಬು ಕ್ಯಾನ್ಸರ್​ಗೆ ಮೊದಲ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ರಿಫೈನ್ಡ್​ ಕಾರ್ಬೋಹೈಡ್ರೇಡ್​ಗಳಿಂದಾಗಿ ದೇಹದಲ್ಲಿ ಅತಿಹೆಚ್ಚು ಕೊಬ್ಬು ಬೆಳೆಯುತ್ತದೆ. ಇವುಗಳಲ್ಲಿ ಅತಿಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಉದಾಹರಣೆಗೆ ವೈಟ್ ಬ್ರೇಡ್, ವೈಟ್ ರೈಸ್ ಇವೆಲ್ಲವೂ ಬ್ಲಡ್ ಶುಗರ್​ ಮತ್ತು ಇನ್ಸುಲೀನ್ ಲೇವಲ್​ಗಳನ್ನು ಹೆಚ್ಚಿಸುತ್ತದೆ ಜೊತೆಗೆ ಕ್ಯಾನ್ಸರ್ ಸೃಷ್ಟಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/10/FRENCH-FRIES.jpg)
4. ಅತಿಯಾಗಿ ಕರೆದ ಕುರುಕಲು ಪದಾರ್ಥಗಳು
ತುಂಬಾ ಡೀಪ್ ಫ್ರೈ ಮಾಡಿದ ಆಹಾರಗಳು ಕೂಡ ತುಂಬಾ ಅಪಾಯಕಾರಿ ಉದಾಹರಣೆಗೆ ಫ್ರೆಂಚ್ ಫ್ರೈಸ್​, ಫ್ರೈಡ್ ಚಿಕನ್, ಫಾಸ್ಟ್​ ಫುಡ್​ಗಳು, ಆನಿಯನ್ ರಿಂಗ್ಸ್​ಗಳು ಇವೆಲ್ಲವೂ ಕೊಬ್ಬು ಮತ್ತು ತೂಕವನ್ನು ಹೆಚ್ಚಿಸುವಂತ ಪದಾರ್ಥಗಳು. ಅನೇಕ ಅಧ್ಯಯನಗಳು ಈ ಹೇಳುವ ಪ್ರಕಾರ ತೀವ್ರವಾದ ಕಾವಿನಲ್ಲಿ ಅಇತಯಾಗಿ ಕರೆದ ಪದಾರ್ಥಗಳಲ್ಲಿ ಅಕ್ರಿಲಾಮೈಡ್ ಎಂಬ ಅಂಶವು ಸೇರಿಕೊಳ್ಳುವುದರಿಂದ ಇದು ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
/newsfirstlive-kannada/media/post_attachments/wp-content/uploads/2024/06/SMOKING_GIRL_1.jpg)
5. ಮದ್ಯಪಾನ ಮತ್ತು ತಂಬಾಕು
ಮದ್ಯಪಾನ ಅನೇಕ ರೀತಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಲೀವರ್ ಕ್ಯಾನ್ಸರ್, ಮೌತ್ ಕ್ಯಾನ್ಸರ್ ಹಾಗೂ ಬ್ರೀಸ್ಟ್​ ಕ್ಯಾನ್ಸರ್​ಗೆ ಇದು ಕಾರಣವಾಗಬಲ್ಲದು. ಮದ್ಯಪಾನವನ್ನು ಒಂದು ಮಿತಿಯಲ್ಲಿ ಅಥವಾ ಸಂಪೂರ್ಣವಾಗಿ ತ್ಯಜಿಸುವಲ್ಲಿ ನಾವು ಕ್ಯಾನ್ಸರ್​ ಅಪಾಯದಿಂದ ಬಚಾವಾಗಬಹುದು. ಇನ್ನು ತಂಬಾಕು ಸೇವನೆ ಅಂದ್ರೆ ಸಿಗರೇಟ್ ಸೇದುವುದು, ಪಾನ್ ಮಸಲಾ ಹಾಗೂ ಗುಟ್ಕಾ ತಿನ್ನುವುದು ಇವು ಕೂಡ ಒರಲ್ ಕ್ಯಾನ್ಸರ್, ಲಂಗ್ ಕ್ಯಾನ್ಸರ್, ಲೀವರ್, ಸ್ಟಮಕ್ ಬೊವೆಲ್ ಹಾಗೂ ಒವಾರಿಯನ್ ಕ್ಯಾನ್ಸರ್​ಗೆ ಕಾರಣವಾಗಲಿವೆ. ಹೀಗಾಗಿ ಈ ಚಟಗಳಿಂದ ದೂರ ಉಳಿಯುವುದು ತುಂಬಾ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us