/newsfirstlive-kannada/media/post_attachments/wp-content/uploads/2024/11/NIGHT-SHIFT.jpg)
ಅಮೆರಿಕಾದಲ್ಲಿ ಸುಮಾರು 1.50 ಕೋಟಿ ಜನರು ನೈಟ್​ಶಿಫ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಅನುಭವಿಸುತ್ತಿರುವ ಸಮಸ್ಯೆಗಳು ಜಾಗತಿಕವಾಗಿ ಎಚ್ಚರಿಕೆಯ ಕರೆಗಂಟೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕೆಲವು ಜಾಬ್​ಗಳು ನೈಟ್​ಶಿಫ್ಟ್​ನ್ನು ಡಿಮ್ಯಾಂಡ್ ಮಾಡುತ್ತವೆ. ಕೆಲಸದ ಅಗತ್ಯವಿದ್ದವರು ಅನಿವಾರ್ಯವಾಗಿ ಆ ಜಾಬ್​ಗಳನ್ನು ಸೇರಿಕೊಳ್ಳುತ್ತಾರೆ. ಈ ರೀತಿಯಾಗಿ ನಿರಂತರ ನೈಟ್​ಶಿಫ್ಟ್​ ಮಾಡುವವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್​ ನಡೆಸಿರುವ ಅಧ್ಯಯನದಲ್ಲಿ ಸತತ ಕಾಲ ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಹಿಡಿದು ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಿಳಿದು ಬಂದಿದೆ. ಅವುಗಳಲ್ಲಿ ಪ್ರಮುಖವಾಗಿ ಐದು ಆರೋಗ್ಯ ಸಮಸ್ಯೆಗಳು ಬಿಡದೇ ಕಾಡುತ್ತವೆ ಎಂದು ಕೂಡ ಹೇಳಲಾಗಿದೆ.
ಇದನ್ನೂ ಓದಿ:ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!
1 ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು
ನಿರಂತರ ಗುಣಮಟ್ಟವಲ್ಲದ ಅವಧಿಯಲ್ಲಿ ನಿದ್ರೆಯಿಲ್ಲದೇ ಕಾರ್ಯನಿರ್ವಹಿಸುವುದರಿಂದ ಇದು ಜೀರ್ಣಶಕ್ತಿಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಈ ರೀತಿಯಾಗಿ ನೈಟ್ ಶಿಫ್ಟ್​ನಲ್ಲಿ ನಿರಂತರವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಸಿರ್ಕಾಡಿಯನ್ ರಿದಮ್ ಅಂದ್ರೆ ಇವನ್ನು ದೇಹದ ಆಂತರಿಕ ಗಡಿಯಾರದ 24ಗಂಟೆಗಳ ಭಾಗ ಎಂದು ಹೇಳುತ್ತಾರೆ. ನಿರಂತರ ನೈಟ್​​ಶಿಫ್ಟ್ ಕರ್ತವ್ಯಗಳಿಂದ ಈ ರಿದಮ್ ತಪ್ಪಿ ಹೋಗುತ್ತದೆ. ಇದರಿಂದ ಜೀರ್ಣಶಕ್ತಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದು ಮಾತ್ರವಲ್ಲ ನಮ್ಮ ನಿತ್ಯದ ಆಹಾರ ಕ್ರಮವೇ ಬುಡಮೇಲಾಗಿದೆ. ದೂಮಪಾನ ಮದ್ಯಪಾನದಂತಹ ಚಟಗಳು ಅಂಟಿಕೊಳ್ಳುವ ಸಾಧ್ಯತೆಯೂ ಕೂಡ ಇರುತ್ತದೆ.
/newsfirstlive-kannada/media/post_attachments/wp-content/uploads/2024/10/Disturbed-Sleep.jpg)
2 ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು
ನಮ್ಮ ದೇಹವು ಸೂರ್ಯನ ಕಿರಣಗಳಿಗೆ ಪ್ರತಿಕ್ರಿಯಿಸುವ ಗುಣವನ್ನು ಹೊಂದಿದೆ. ಈಗಾಗಲೇ ಹೇಳಿದಂತೆ 24 ಗಂಟೆಗಳಲ್ಲಿ ನಮ್ಮ ಮಲಗುವ ಹಾಗೂ ಏಳುವ ಚಕ್ರವನ್ನೇ ನಾವು ಸಿರ್ಕಾಡಿಯನ್ ರಿದಮ್ ಎಂದು ಹೇಳುತ್ತೇವೆ. ಅದು ಸರಿಯಾದ ಕ್ರಮದಲ್ಲಿ ನಡೆಯದೇ ಹೋದಲ್ಲಿ ನಿದ್ರಾಹೀನತೆಯಿಂದ ಬಳಲುವ ಸಮಸ್ಯೆಗಳು ಎದುರಾಗುತ್ತವೆ. ಸರಿಯಾದ ಸಮಯದಲ್ಲಿ ಮಲಗದೇ ದಿನದ ವೇಳೆ ಮಲಗಲು ಹೋದಾಗ ನಮಗೆ ನಿದ್ದೆ ಬಾರದೇ ಸ್ಲೀಪ್ ಡಿಸಾರ್ಡರ್​ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
/newsfirstlive-kannada/media/post_attachments/wp-content/uploads/2024/11/Gastric-Problems.jpg)
3 ಗ್ಯಾಸ್ಟ್ರಿಕ್ ಸಮಸ್ಯೆಗಳು ಆಗುವ ಸಾಧ್ಯತೆ
ಸರಿಯಾದ ಸಮಯದಲ್ಲಿ ನಿದ್ದೆ ಮಾಡದಿರುವುದು ಹಾಗೂ ಊಟ ಮಾಡದಿರುವುದು ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಗ್ಯಾಸ್ಟ್ರಿಕ್​ನಂತಹ ಸಮಸ್ಯೆಗಳಿಗೆ ಮೂಲವಾಗುತ್ತದೆ. ನೈಟ್​ಶಿಫ್ಟ್​ನಲ್ಲಿ ನಿರಂತರವಾಗಿ ನಾವು ತೊಡಗಿಕೊಂಡರೆ, ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಾವು ಬಳಲಬೇಕಾಗುತ್ತದೆ. ಇವು ಡಯೆರಿಯಾ ಸೇರಿ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುವುದು ನಿಶ್ಚಿತ ಎನ್ನುತ್ತಾರೆ ತಜ್ಞರು
4 ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು
ಇನ್ನು ನಿರಂತರ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಉಂಟಾಗುತ್ತವೆ. ನ್ಯಾಷನಲ್ ಕ್ಯಾನ್ಸರ್ ಇನ್​ಸ್ಟ್ಯೂಟ್ ಹೇಳುವ ಪ್ರಕಾರ ಸತತವಾಗಿ ನಾವು ನಮ್ಮನ್ನು ರಾತ್ರಿ ಪಾಳಯದಲ್ಲಿ ತೊಡಗಿಸಿಕೊಂಡರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನಮಗೆ ಸಾವು ಬರುವ ಸಂಭವವಿದೆ ಎಂದು ಕೂಡ ಹೇಳಿದೆ. ಅದರಲ್ಲೂ ಮಹಿಳೆಯರ ಈ ಹಿಂದೆ ಎಂದೂ ರಾತ್ರಿ ಪಾಳಯದಲ್ಲಿ ಕೆಲಸ ಮಾಡಿ ಗೊತ್ತಿಲ್ಲದವರು, ಏಕಾಏಕಿ ಸತತ ನೈಟ್​ಶಿಫ್ಟ್​ಗಳಲ್ಲಿ ಕೆಲಸ ನಿರ್ವಹಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಸ್ಟ್ರೋಕ್​ನಂತಹ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಹೇಳಲಾಗಿದೆ.
ಕ್ಯಾನ್ಸರ್ ಬರುವ ಅಪಾಯವೂ ಇದೆ
ಈಗಾಗಲೇ ಹೇಳಿದಂತೆ ನೈಟ್ ಶಿಫ್ಟ್​ನಿಂದಾಗಿ ಸಿರ್ಕಾಡಿಯನ್ ರಿದಮ್​ ತಪ್ಪಿ ಹೋಗುತ್ತದೆ. ಇದು ಜೀವಕೋಶಗಳ ಕಾರ್ಯವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆ ಇದೆಯೆಂದು ನ್ಯಾಷನಲ್ ಟಾಕ್ಸಿಕಾಲೊಜಿ ಪ್ರೋಗ್ರಾಮ್​ವೋಂದು ವರದಿ ಮಾಡಿದೆ.
ನೀವು ನೈಟ್ ಶಿಫ್ಟ್​ ಮಾಡಿಯೂ ಇವುಗಳಿಂದ ಪಾರಾಗಬೇಕು ಎಂದುಕೊಂಡಲ್ಲಿ, ನೈಟ್ ಶಿಫ್ಟ್​ ಬಳಿಕವೂ ಚೆನ್ನಾಗಿ ನಿದ್ರೆ ಮಾಡುವುದನ್ನು ಕಲಿಯಿರಿ. ದಿನಕ್ಕೆ ಕನಿಷ್ಠ 7-9 ತಾಸುಗಳ ಕಾಲ ಗಾಢವಾದ ನಿದ್ದೆಯನ್ನು ಮಾಡಿ ನಿದ್ರೆಗೆ ಹೋಗುವ ಮುನ್ನ ಎರಡು ಗಂಟೆ ಮುಂಚೆ ಒಂದು ಕಪ್ ಕಾಫಿಯನ್ನು ತಪ್ಪದೇ ಕುಡಿಯಿರಿ.ಆಲ್ಕೋಹಾಲ್ ಹಾಗೂ ದೂಮಪಾದಿಂದ ದೂರ ಇರಿ.
ಇದನ್ನೂ ಓದಿ:ಅಳತೆ ಮೀರಿ ಉಪ್ಪು ತಿನ್ನುವ ತಪ್ಪು ಮಾಡಲೇಬೇಡಿ.. ಬಿಪಿ ಮಾತ್ರವಲ್ಲ ಹಲವು ರೋಗಗಳಿಗೆ ನೀಡುತ್ತೆ ಆಹ್ವಾನ!
ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳು ಹೆಚ್ಚು ಹೆಚ್ಚು ಜೀವಸತ್ವ, ಪೋಷಕಾಂಶಗಳಿರುವ ಆಹಾರವನ್ನು ಸೇವಿಸಿ. ಸಾಧ್ಯವಾದಲ್ಲಿ ಕೊಂಚ ವ್ಯಾಯಾಮ ಮಾಡಿ. ನಿಮ್ಮ ಆಹಾರ ಸೇವನೆಯಲ್ಲಿ ಉಪ್ಪು ಹಾಗೂ ಸಕ್ಕರೆ ಪ್ರಮಾಣ ಕಡಿಮೆ ಇರಲಿ. ನೈಟ್​ಶಿಫ್ಟ್​ನಿಂದ ಮಾನಸಿಕ ಆರೋಗ್ಯದ ಮೇಲೂ ಕೊಂಚ ಪರಿಣಾಮ ಬೀರುವುದರಿಂದ ನೀವು ಹೆಚ್ಚು ಹೆಚ್ಚು ಸಂತೋಷವಾಗಿರಲು ನೋಡಿ. ಗೆಳೆಯರೊಂದಿಗೆ ಬೆರೆಯಿರಿ, ಹರಟೆ ಜೋಕುಗಳನ್ನು ಹಂಚಿಕೊಳ್ಳಿ, ಈ ರೀತಿಯಾಗಿ ನಿತ್ಯ ಬದುಕಿನ ಕ್ರಮವನ್ನು ರೂಢಿಸಿಕೊಂಡರೆ ನಾವು ಮೇಲೆ ಹೇಳಿರುವ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us