ಚಹಾದಲ್ಲಿ ಒಂದು ಸ್ಪೂನ್ ತುಪ್ಪ.. ನಿತ್ಯ ಕುಡಿದರೆ 5 ಆರೋಗ್ಯ ಲಾಭಗಳು!

author-image
Gopal Kulkarni
Updated On
ಚಹಾದಲ್ಲಿ ಒಂದು ಸ್ಪೂನ್ ತುಪ್ಪ.. ನಿತ್ಯ ಕುಡಿದರೆ 5 ಆರೋಗ್ಯ ಲಾಭಗಳು!
Advertisment
  • ನಿತ್ಯ ಚಹಾದ ಜೊತೆ ಒಂದು ಸ್ಪೂನ್ ತುಪ್ಪ ಬೆರೆಸಿ ಕುಡಿಯಿರಿ
  • ಈ ರೀತಿಯ ಚಹಾ ಕುಡಿದರೆ 5 ಆರೋಗ್ಯಕಾರಿ ಪ್ರಯೋಜನಗಳು
  • ಋತುಚಕ್ರದ ನೋವುಗಳ ನಿವಾರಣೆಗೆ ಈ ರೀತಿ ಚಹಾ ಕುಡಿಯಿರಿ

ಜಗತ್ತಿನ ಎಷ್ಟೋ ಜನರ ಬೆಳಗು ಆರಂಭಗೊಳ್ಳುವುದೇ ಚಹಾದೊಂದಿಗೆ. ಎದ್ದ ತಕ್ಷಣ ಚಹಾದತ್ತ ನಮ್ಮ ಕೈ ಹೋಗಿರುತ್ತೆ. ಅದನ್ನು ಕುಡಿದ ಮೇಲೆಯೇ ಇಡೀ ದೇಹ ಹಾಗೂ ಮನಸ್ಸಿಗೆ ಒಂದು ಅಹ್ಲಾದ ಬರೋದು. ಟೀಯನ್ನು ನಾವು ಅನೇಕ ಬಗೆಯಲ್ಲಿ ನೋಡಿದ್ದೇವೆ. ಲೆಮನ್ ಟೀ, ಗ್ರೀನ್ ಟೀ, ಬೆಲ್ಲದ ಟೀ. ಘೀ ಟೀ ಬಗ್ಗೆ ಗೊತ್ತಾ. ಘೀ ಟೀ ಅಂದ್ರೆ ನಾವು ನಿತ್ಯ ಬೆಳಗ್ಗೆ ಕುಡಿಯುವ ಚಹಾದಲ್ಲಿ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಕುಡಿದರೆ ಅದೇ ಘೀ ಟಿ. ಅರೇ, ಚಹಾಗೆ ತುಪ್ಪಾ ಹಾಕಿ ಕುಡಿದಯೋದಾ? ವಿಚಿತ್ರ ಅನಿಸುತ್ತೆ ಅಲ್ವಾ. ಆದ್ರೆ ಇದರಿಂದ ಅನೇಕ ಲಾಭಗಳಿವೆ. ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ.

1. ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ತುಪ್ಪದಲ್ಲಿ ಆರೋಗ್ಯಕರವಾದ ಕೊಬ್ಬಿನಂಶ ಇರುತ್ತದೆ. ಇದರಿಂದ ದೇಹಕ್ಕೆ ಸರಿಯಾದ ಪ್ರಮಾಣದ ಶಕ್ತಿಯೂ ಪೂರೈಕೆಯಾಗುತ್ತದೆ. ಚಹಾದಲ್ಲಿ ತುಪ್ಪ ಬೆರೆಸಿ ತಿನ್ನುವುದರಿಂದ ದೀರ್ಘಕಾಲದವರೆಗೆ ದೇಹ ಶಕ್ತಿಯುತವಾಗಿ ಇರುತ್ತದೆ. ಮೆದುಳು ಹಾಗೂ ಸ್ನಾಯುಗಳಿಗೆ ಯಾವುದೇ ಸಕ್ಕರೆ ಅಂಶವನ್ನು ಬಿಡುಗಡೆ ಮಾಡದೇ ಈ ಪಾನೀಯ ಶಕ್ತಿಯನ್ನು ತುಂಬುತ್ತದೆ.

2. ಕರುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ
ತುಪ್ಪದಲ್ಲಿ ಫ್ಯಾಟಿ ಆಸಿಡ್ ಇದೆ ಇದು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉರಿಯೂತವು ಇದರಿಂದ ಕಡಿಮೆಯಾಗಿ ಕರುಳಿನ ಆರೋಗ್ಯ ವೃದ್ಧಯಾಗುತ್ತದೆ. ನೀವು ನಿಮ್ಮ ಟೀಯನ್ನು ತುಪ್ಪದೊಂದಿಗೆ ಸೇವಿಸಿದ್ದೇ ಆದರೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಹಾಲು ಮತ್ತು ತುಪ್ಪ ಸೇರುವುದರಿಂದ ಮಲಬದ್ಧತೆಯೂ ಕಡಿಮೆ ಆಗುತ್ತದೆ. ಮಲಬದ್ಧತೆಯ ಸಮಸ್ಯೆಯಿದ್ದವರಿಗೆ ಇದು ನಿಜಕ್ಕೂ ರಾಮಬಾಣ ಅಂತಾರೆ ತಜ್ಞರು.

ಇದನ್ನೂ ಓದಿ: ಚೀನಾದಲ್ಲಿ ಭೀತಿ ಹುಟ್ಟಿಸಿದ ಹೊಸ ವೈರಸ್​; ಇದು ಕೋವಿಡ್​ನಷ್ಟೇ ಅಪಾಯಕಾರಿನಾ? ತಜ್ಞ ವೈದ್ಯರು ಹೇಳೋದೇನು?

3. ತೂಕ ಇಳಿಕೆಗೆ ಇದು ತುಂಬಾ ಉಪಯೋಗ
ತುಪ್ಪವನ್ನು ತಿನ್ನುವುದರಿಂದ ಇಲ್ಲವೇ ಯಾವುದೇ ಆರೋಗ್ಯಕರ ಫ್ಯಾಟ್ ಇರುವ ಪದಾರ್ಥವನ್ನು ತಿನ್ನುವುದರಿಂದ ನೀವು ಸರಳವಾಗಿ ನಿಮ್ಮ ದೇಹದ ತೂಕವನ್ನು ಇಳಿಸಬಹುದು. ಅದರಲ್ಲೂ ಚಹಾದೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಇದು ಹಸಿವನ್ನು ನೀಗಿಸುತ್ತದೆ. ಅದರ ಜೊತೆಗೆ ಇದು ಚಯಾಪಚಯವನ್ನು ಕೂಡ ವೃದ್ಧಿಗೊಳಿಸುವುದರಿಂದ ದೇಹದಲ್ಲಿರುವ ಅನಾರೋಗ್ಯಕಾರಿ ಕೊಬ್ಬು ಸರಳವಾಗಿ ಕರಗುತ್ತದೆ.

4.ಋತುಚಕ್ರದ ನೋವುಗಳನ್ನು ಕಡಿಮೆ ಮಾಡುತ್ತದೆ
ಈಗಾಗಲೇ ಹೇಳಿದಂತೆ ತುಪ್ಪದಲ್ಲಿ ಉರಿಯೂತ ನಿರೋಧಕ ಗುಣವಿದೆ ಅದರ ಜೊತೆಗೆ ಹೆಚ್ಚು ಆ್ಯಂಟಿಆಕ್ಸಿಡೆಂಟ್​ ಅಂಶಗಳು ಇದರಲ್ಲಿ ಇವೆ.ಇದು ಋತುಚಕ್ರದ ವೇಳೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಹಾಗೂ ಬೆನ್ನಿನ ಸೆಳೆತವನ್ನು ಕಡಿಮೆ ಮಾಡಿ ನಿರಾಳತೆ ನಿಡುತ್ತದೆ. ಋತುಮತಿಯಾದವರು ನಿತ್ಯ ಈ ಚಹಾದೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಇಲ್ಲವೇ ನಿಮ್ಮ ಆಹಾರದಲ್ಲಿ ಹಾಕಿಕೊಂಡು ತಿನ್ನುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ:ಮಾವಿನ ಎಲೆಯಲ್ಲಿ ಆರೋಗ್ಯದ ರಹಸ್ಯ! ಈ ವಿಚಾರಗಳು ಗೊತ್ತಾದ್ರೆ ನೀವು ಮಿಸ್ ಮಾಡಲ್ಲ..!

ಮಾನಸಿಕ ಚೈತನ್ಯವನ್ನು ನೀಡುತ್ತದೆ
ತುಪ್ಪದಲ್ಲಿರುವ ಕೊಬ್ಬಿನ ಅಂಶ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಬ್ರೇನ್ ಶೆಲ್​ಗಳಿಗೆ ಶಕ್ತಿ ತುಂಬುವುರಿಂದ ಘೀಟೀ ನಿತ್ಯ ಕುಡಿಯುವುದರಿಂದ ನಮ್ಮ ಗಮನ ಏಕಾಗ್ರತೆ ಹೆಚ್ಚುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment