/newsfirstlive-kannada/media/post_attachments/wp-content/uploads/2024/12/hibiscus-tea.jpg)
ನೀವು ದಾಸವಾಳ ಹೂವನ್ನು ತೋಟದಲ್ಲಿ ಬೆಳೆಯುವ ಒಂದು ಹೂವು ಮಾತ್ರ ಅಂದುಕೊಂಡಿದ್ದೀರಾ.? ಹಾಗಾದ್ರೆ ನೀವು ಇನ್ನೊಮ್ಮೆ ಯೋಚಿಸಿ ನೋಡಿ. ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ದಾಸವಾಳ ಕೇವಲ ದೇವರ ಪೂಜೆಗೆ ಮಾತ್ರ ಸೀಮಿತವಲ್ಲ. ಅದು ತೋಟದಲ್ಲಿ ಬಿಡುವ ಹೂವುಗಳಲ್ಲಿ ಒಂದು ಹೂವಲ್ಲ. ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಹಲವು ಆರೋಗ್ಯಕಾರಿ ಪ್ರಯೋಜನಗಳು ಇದರಲ್ಲಿ ಇವೆ
ಹೃದಯವನ್ನು ಬಲಗೊಳಿಸುತ್ತದೆ
ದಾಸವಾಳ ಹೂವಿನಲ್ಲಿರುವ ಒಂದು ವಿಶೇಷತೆ ಅಂದ್ರೆ ಅದು ಬಿಪಿ ಅಂದ್ರೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಎರಡು ಬಗೆಯ ಬಿಪಿ ಅಂದ್ರೆ ಹೆಚ್ಚಾದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪೂರ್ತಿಯಾಗಿ ಕುಸಿದ ರಕ್ತದೊತ್ತಡವನ್ನು ಸರಿಯಾದ ಪ್ರಮಾಣಕ್ಕೆ ತಂದು ನಿಲ್ಲಿಸುವು ಶಕ್ತಿ ದಾಸವಾಳಕ್ಕಿದೆ. ಇದರಿಂದ ಹೃದಯ ಶಕ್ತಿಯು ಹೆಚ್ಚುತ್ತದೆ. ಆರೋಗ್ಯವಂತ ಹೃದಯ ನಿಮ್ಮದಾಗುತ್ತದೆ.
ಇದನ್ನೂ ಓದಿ:ಪದೇ ಪದೇ ಆಗ್ತಿರೋ ಕಿಡ್ನಿ ಸ್ಟೋನ್‌ಗಳಿಂದ ಮುಕ್ತಿ ಪಡೆಯೋದು ಹೇಗೆ; ಇಲ್ಲಿದೆ ಸಿಂಪಲ್ ಹೆಲ್ತ್ ಟಿಪ್ಸ್
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಈ ದಾಸವಾಳ ಹೂವು ದೇಹದಲ್ಲಿ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಹಿರಿಯ ವಯುಸ್ಸಿನವರು ಕಿರಿಯ ವಯಸ್ಸಿನವರಲ್ಲಿಯೂ ಇರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ದಾಸವಾಳದ ಟೀ ಮಾಡಿ ಕುಡಿಯುವದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಾಘಾತದಂತಹ ಸಮಸ್ಯೆಗಳಿಂದ ನಾವು ದೂರ ಇರಬಹುದು.
ನಿಮ್ಮ ತಾರುಣ್ಯವನ್ನು ರಕ್ಷಿಸುತ್ತದೆ
ದಾಸವಾಳದಲ್ಲಿ ಹೇರಳವಾಗಿ ಆ್ಯಂಟಿಆಕ್ಸಿಡೆಂಟ್ಗಳು ಇರುವುದರಿಂದ ಇದನ್ನು ನಿತ್ಯ ನಾವು ದೇಹಕ್ಕೆ ಟೀ ಮೂಲಕ ಪೂರೈಕೆ ಮಾಡುವುದಿರಂದ ದೇಹದಲ್ಲಿರುವ ಫ್ರೀ ಱಡಿಕಲ್ಸ್ಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ. ವಯಸ್ಸಾಗುವ ಪ್ರಕ್ರಿಯೆಯಲ್ಲಿ ಫ್ರೀ ಱಡಿಕಲ್ಸ್ ಪ್ರಮುಖ ಪಾತ್ರವಹಿಸುತ್ತವೆ. ಪ್ರಮುಖವಾಗಿ ಚರ್ಮದ ಮೇಲೆ ಇದು ಬೇಗ ಪರಿಣಾಮ ಬೀರುತ್ತದೆ. ನೀವು ದಾಸವಾಳದ ಟೀ ಮಾಡಿಕೊಂಡು ಕುಡಿದರೆ ಅದು ಫ್ರೀ ಱಡಿಕಲ್ಸ್ ವಿರುದ್ಧ ಯೋಧನಂತೆ ಹೋರಾಡಿ ರಕ್ಷಿಸುತ್ತದೆ.
ಸಕ್ಕರೆ ಕಾಯಿಲೆಯನ್ನು ತಡೆಯುತ್ತದೆ
ಒಲಿಪ್ಯಾನೊಲ್ಸ್ ಮತ್ತು ಆರ್ಗಾನಿಕ್ ಆಸಿಡ್ಸ್ನಂತಹ ಅಂಶಗಳು ದಾಸವಾಳದ ಟೀಯಲ್ಲಿ ಸಿಗುವುದರಿಂದ ಅತಿ ವೇಗವಾಗಿ ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಕಡಿಮೆ ಆಗುತ್ತದೆ ಹೀಗಾಗಿ ದಾಸವಾಳ ಹೂವಿನ ಚಹಾ ಸೇವಿಸುವುದರಿಂದ ನಾವು ಸಕ್ಕರೆ ಕಾಯಿಲೆಯನ್ನು ಬರದಂತೆ ನಿಯಂತ್ರಿಸಬಹುದು
ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ
ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಹೆಲ್ತ್ ಹೇಳುವ ಪ್ರಕಾರ, ದಾಸವಾಳ ಚಹಾ ಸೇವನೆಯಿಂದ ನಾವು ನಮ್ಮ ದೇಹದ ತೂಕವನ್ನು ಸರಳವಾಗಿ ಕಳೆದುಕೊಳ್ಳಬಹುದು ಎಂದು ಹೇಳಿದೆ. ಸತತವಾಗಿ 12 ವಾರಗಳ ಕಾಲ ನಾವು ದಾಸವಾಳದ ಚಹಾ ಸೇವಿಸಿದರೆ ದೇಹದ ತೂಕ ಸರಳವಾಗಿ ಕಡಿಮೆಯಾಗುತ್ತದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ