ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ದುರಂತ.. 8 ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ಘೋಷಣೆ

author-image
admin
Updated On
ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಭಕ್ತರ ದುರಂತ.. 8 ಮಾಲಾಧಾರಿಗಳ ಸ್ಥಿತಿ ಚಿಂತಾಜನಕ; ಆಗಿದ್ದೇನು?
Advertisment
  • ಅಯ್ಯಪ್ಪನ ಜ್ಯೋತಿಯಿಂದ ಸಿಲಿಂಡರ್ ಸ್ಫೋಟಗೊಂಡ ದುರಂತ
  • ಎಲ್ಲ ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮುಗಿಸಿಕೊಂಡು ಮಲಗಿದ್ದರು
  • ದೇವರ ಮುಂದೆ ಇದ್ದ ಜ್ಯೋತಿಯಿಂದ ಭಾರೀ ಪ್ರಮಾಣದಲ್ಲಿ ಬೆಂಕಿ

ಹುಬ್ಬಳ್ಳಿಯ ಸಿಲಿಂಡರ್ ಸ್ಫೋಟದಿಂದ ಪ್ರಾಣ ಬಿಟ್ಟ ಅಯ್ಯಪ್ಪ ಮಾಲಾಧಾರಿಗಳ ದುರಂತಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮೃತ 8 ಅಯ್ಯಪ್ಪ ಸ್ವಾಮಿ ಭಕ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಸಿಲಿಂಡರ್ ಸ್ಫೋಟದಿಂದ ಅಯ್ಯಪ್ಪ ಮಾಲಾಧಾರಿಗಳ‌ು ಸಾವನ್ನಪ್ಪಿದ ಕೇಸ್ ಕರುಣಾಜನಕವಾಗಿದೆ. ಅಯ್ಯಪ್ಪನ ಜ್ಯೋತಿಯಿಂದ ಸಿಲಿಂಡರ್ ಸ್ಫೋಟಗೊಂಡು ಮಲಗಿದ್ದ ಭಕ್ತರು ಬೆಂದು ಹೋಗಿದ್ದರು.
ಬೆಂಕಿಯಲ್ಲಿ ಬೆಂದ ಅಯ್ಯಪ್ಪ ಮಾಲಾಧಾರಿಗಳನ್ನ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬದುಕಿಸಲು ನುರಿತ ವೈದ್ಯರು ಶ್ರಮವಹಿಸಿದ್ದರು. ಆದರೆ ಓರ್ವ ಬಾಲಕ ಬಿಟ್ಟು ಇನ್ನುಳಿದ 8 ಭಕ್ತರು ದಿನಕಳೆದಂತೆ ಉಸಿರು ನಿಲ್ಲಿಸಿದ್ದರು. ಇದ್ದ ಒಬ್ಬನೇ ಮಗ, ಗಂಡ, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

publive-image

ಈ ಘಟನೆ ಸಂಬಂಧ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಮೃತಪಟ್ಟು 8 ಮಾಲಾಧಾರಿಗಳಿಗೆ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಘೋಷಣೆ ಮಾಡಿದ್ದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 8ಕ್ಕೆ ಏರಿಕೆ 

ಕಳೆದ ಡಿಸೆಂಬರ್ 22ರಂದು ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. 9 ದಿನಗಳು ಕಳೆಯುವಷ್ಟರಲ್ಲಿ ಸಿಲಿಂಡರ್​ ಸ್ಫೋಟದಲ್ಲಿ ಗಾಯಗೊಂಡಿದ್ದ 8 ಮಂದಿ ಹೆಣವಾಗಿ ಮನೆಗೆ ಮರಳಿದರು.

ಘಟನೆ ನಡೆದಿರುವುದು ಹೇಗೆ?
ಡಿಸೆಂಬರ್ 22ರ ನಡುರಾತ್ರಿ ಈ ಎಲ್ಲ ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮುಗಿಸಿಕೊಂಡು ಮಲಗಿದ್ದರು. ಆದ್ರೆ, ರಾತ್ರಿ 1:30ರ ಸಮಯಕ್ಕೆ ಮಲಗಿರುವಾಗ ಮಾಲಾಧಾರಿಗಳಲ್ಲಿ ಯಾರದ್ದೋ ಕಾಲು ಸಿಲಿಂಡರ್​ಗೆ ಟಚ್ ಆಗಿದೆ. ಇದರಿಂದ ಸಿಲಿಂಡರ್ ಸೋರಿಕೆಯಾಗಿದೆ. ದೇವರ ಮುಂದೆ ಇದ್ದ ಜ್ಯೋತಿ ಇದ್ದಿದ್ದರಿಂದ ತಕ್ಷಣ ಭಾರೀ ಪ್ರಮಾಣದಲ್ಲಿ ಬೆಂಕಿ ಆವರಿಸಿ 9 ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇದರಲ್ಲಿ ಈಗ ಒಬ್ಬರು ಮಾತ್ರ ಬದುಕುಳಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment