/newsfirstlive-kannada/media/post_attachments/wp-content/uploads/2025/05/Whats-up-Money.jpg)
ಜೂನ್ 1 ಅಂದ್ರೆ ಇಂದಿನಿಂದ ದೇಶಾದ್ಯಂತ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ವಾಟ್ಸಾಪ್‌ನಿಂದ ಹಿಡಿದು ATM, ಬ್ಯಾಂಕ್ ಬಡ್ಡಿ ಸೇರಿದಂತೆ ಹಲವು ಬದಲಾವಣೆಗಳು ನಿಮ್ಮ ಜೇಬಿಗೂ ಹೊರೆ ಆಗುತ್ತಿದೆ. ಜನಸಾಮಾನ್ಯರ ಪ್ರತಿದಿನದ ಹಣಕಾಸಿನ ಮೇಲೆ ಬದಲಾವಣೆಗಳನ್ನು ತರುತ್ತಿದೆ. ಆ ಪ್ರಮುಖ 5 ಬದಲಾವಣೆಗಳು ಯಾವುವು ಅನ್ನೋ ವಿವರ ಇಲ್ಲಿದೆ.
1. ಕ್ರೆಡಿಟ್ ಕಾರ್ಡ್ ಪೇಮೆಂಟ್ಸ್!
ಇದು ಕ್ರೆಡಿಟ್ ಕಾರ್ಡ್ ಬಳಸುವವರು ತಿಳಿದುಕೊಳ್ಳಲೇಬೇಕಾದ ವಿಚಾರ. ಇಂದಿನಿಂದ ಕ್ರೆಡಿಟ್ ಕಾರ್ಡ್ ಮೂಲಕ ಕರೆಂಟ್ ಬಿಲ್ ಅಥವಾ ನೀರಿನ ಬಿಲ್ ಪಾವತಿ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಟಬೇಕು. ಕೋಟಕ್ ಮಹೀಂದ್ರಾ ಬ್ಯಾಂಕ್ ಒಂದು ತಿಂಗಳಲ್ಲಿ ಹೆಚ್ಚುವರಿ ಪೆಟ್ರೋಲ್‌ಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ಶೇಕಡಾ 1ರಷ್ಟು ಶುಲ್ಕ ವಿಧಿಸುತ್ತಿದೆ. ಆದರೆ ಇನ್ಷೂರೆನ್ಸ್ ಬಿಲ್ ಸೇರಿದಂತೆ ಇತರೆ ಬಿಲ್ ಪಾವತಿಗಳಿಗೆ ರಿವಾರ್ಡ್ ಪಾಯಿಂಟ್ಸ್‌ಗಳನ್ನು ನೀಡಲಾಗುತ್ತಿದೆ.
2. ATM ಶುಲ್ಕ
ಜೂನ್ 1ರಿಂದ ATM ಬಳಕೆಯ ಶುಲ್ಕ ಕೂಡ ಹೆಚ್ಚಿಸಲಾಗುತ್ತಿದೆ. ಆಯಾ ಬ್ಯಾಂಕ್‌ಗಳು ATM ಬಳಕೆಯ ಮೇಲೆ ನಿಗದಿತ ಶುಲ್ಕಗಳನ್ನ ವಿಧಿಸಲು ಮುಂದಾಗಿದೆ.
3. LPG ಸಿಲಿಂಡರ್ ದರ
ಪ್ರತಿ ತಿಂಗಳ ಮೊದಲ ದಿನ LPG ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಗೃಹ ಬಳಕೆ ಮತ್ತು ವಾಣಿಜ್ಯ ಸಿಲಿಂಡರ್‌ಗಳ ದರ ಕಡಿಮೆ ಅಥವಾ ಏರಿಕೆಯಾಗುವ ಸಾಧ್ಯತೆ ಇದೆ.
4. ಸ್ಥಿರ ಠೇವಣಿ (FD) ದರಗಳು ಕಡಿತ
ನೀವೇನಾದ್ರು ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪೋಸಿಟ್ಸ್ (FD) ಇಟ್ಟು ಉಳಿತಾಯ ಮಾಡಿದ್ರೆ ಇಂದಿನಿಂದ ಕೆಲವು ಫೈನಾನ್ಸ್ ಕಂಪನಿಗಳು FD ಮೇಲಿನ ಬಡ್ಡಿದರವನ್ನು ಇಳಿಕೆ ಮಾಡುತ್ತಿವೆ. ಫೈನಾನ್ಸ್ ಕಂಪನಿಗಳ ರೆಪೋ ದರ, ಮಾರುಕಟ್ಟೆ ಸ್ಥಿತಿ ಮತ್ತು ಆರ್‌ಬಿಐ ನೀತಿಯ ಮೇಲೆ ಅದು ಅವಲಂಬಿತವಾಗುತ್ತದೆ.
ಇದನ್ನೂ ಓದಿ: ನಾನು ಅಣ್ಣಾವ್ರ ಮಗ.. ಕಮಲ್ ಹಾಸನ್ ಹೇಳಿಕೆಯ ವಿವಾದಕ್ಕೆ ಶಿವಣ್ಣ ಸ್ಪಷ್ಟನೆ; ಏನಂದ್ರು?
5. ಉಚಿತ ಆಧಾರ ಅಪ್ಡೇಟ್!
ನೀವೇನಾದರೂ ಆಧಾರನಲ್ಲಿ ತಿದ್ದುಪಡಿ, ಬದಲಾವಣೆ ಮಾಡಿಕೊಳ್ಳಬೇಕಿದ್ರೆ ಕೂಡಲೇ ಹೋಗಿ. ಯಾಕಂದ್ರೆ ಉಚಿತ ಆಧಾರ ಅಪ್ಡೇಟ್ ಜೂನ್ 14, 2025ರವರೆಗೆ ಮಾತ್ರ ಇದೆ. ಜೂನ್ 15ರಿಂದ ಆಧಾರ ತಿದ್ದುಪಡಿಗಾಗಿ 25, 50 ರೂಪಾಯಿ ಶುಲ್ಕ ಕಟ್ಟಬೇಕಾಗುತ್ತದೆ.
ಇಂದಿನಿಂದ ವಾಟ್ಸಾಪ್ ವರ್ಕ್ ಆಗಲ್ಲ!
ಜೂನ್ 1ರಿಂದ ಕೆಲವು ಐ-ಫೋನ್, ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ವಾಟ್ಸಾಪ್ ಕೂಡ ವರ್ಕ್ ಆಗಲ್ಲ. ಈ ಕೆಳಗಿನ ಫೋನ್‌ಗಳನ್ನು ನೀವು ಬಳಸುತ್ತಿದ್ದರೆ ನಿಮಗೆ ವಾಟ್ಸಾಪ್ ಬಳಸಬೇಕಾದ್ರೆ ಬೇರೆ ಫೋನ್‌ಗಳ ಮೊರೆ ಹೋಗಬೇಕಾಗುತ್ತದೆ.
ಇಂದಿನಿಂದ ಐ-ಫೋನ್‌ಗಳಲ್ಲಿ iOS 15 ಅಥವಾ ಅದಕ್ಕಿಂತ ಹಳೆಯ ಐಫೋನ್ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದರೆ ವಾಟ್ಸಾಪ್ ಬಂದ್ ಆಗುತ್ತಿದೆ.
ಯಾವ್ಯಾವ ಫೋನ್‌ಗಳಲ್ಲಿ ವರ್ಕ್ ಆಗಲ್ಲ?
iPhone 5s, iPhone 6, iPhone 6 Plus, iPhone 6s, iPhone 6s Plus, iPhone SE (1st gen)
Samsung Galaxy S4, Samsung Galaxy Note 3, Sony Zperia Z1, LG G2, Huawei Ascend P6, Moto G (1st Gen), Motorola Razr HD, Moto E 2014.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ