/newsfirstlive-kannada/media/post_attachments/wp-content/uploads/2024/12/NEWBORN.jpg)
ಮಗು ಪಡೆಯುವುದು ಎನ್ನುವುದು ಮದುವೆಯಾದ ಮೇಲೆ ದಂಪತಿಯ ಮೊದಲ ಆಸೆಯಾಗಿರುತ್ತದೆ. ನಮ್ಮ ಮಗುವನ್ನ ಹಾಗೆ ಬೆಳೆಸೋಣ, ಹೀಗೆ ಬೆಳೆಸೋಣ, ಇದು ಮಾಡೋಣ, ಅದು ಮಾಡೋಣವೆಂದು ನೂರಾರು ಕನಸುಗಳನ್ನು ದಂಪತಿ ಕಂಡಿರುತ್ತಾರೆ. ಆದರೆ ಮಗು ಜನನವಾದ ಮೇಲೆ ಅದರ ಆರೋಗ್ಯದ ಬಗ್ಗೆ ದಂಪತಿಗೆ ಅಷ್ಟೇನೂ ಗೊತ್ತಾಗಲ್ಲ. ಹೀಗಾಗಿ ನವಜಾತ ಶಿಶುವಿನ ಆರೋಗ್ಯ ಕಾಪಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ?.
ನವಜಾತ ಶಿಶುವಿನ ದೇಹ ತುಂಬಾ ಸೂಕ್ಷ್ಮವಾಗಿ ಮೃದುವಾಗಿರುತ್ತದೆ. ಅದರ ಚರ್ಮ, ದೇಹ ಯಾವುದೇ ಅಭಿವೃದ್ಧಿ ಹೊಂದಿಲ್ಲದ ಕಾರಣ ಸೋಂಕು, ಕಾಯಿಲೆಗಳು ಬೇಗನೆ ಹರಡುತ್ತವೆ. ಇದರಿಂದ ನವಜಾತ ಶಿಶು ಸಮಸ್ಯಗೆ ಸಿಲುಕುತ್ತದೆ. ಈ ರೀತಿ ಆಗದಂತೆ ದಂಪತಿ ಎಚ್ಚರಕೆ ವಹಿಸಬೇಕು. ಅದರಲ್ಲಿ ಚಳಿಗಾಲದಲ್ಲಿ ಮಗುವನ್ನು ರೋಗಗಳಿಂದ ರಕ್ಷಿಸಲು ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಶಿಶುವನ್ನು ಆರೋಗ್ಯವಾಗಿಡಲು ಈ ಕೆಳಗಿನವುಗಳನ್ನು ಪಾಲಿಸಿ.
ತಾಯಿಯ ಎದೆಹಾಲು ಮಗುವಿಗೆ ಸಂಪೂರ್ಣ ಆಹಾರ ಹಾಗೂ ಶಕ್ತಿ ಆಗಿರುತ್ತೆ. ಎದೆಹಾಲಿನಲ್ಲಿನ ಪ್ರತಿಕಾಯಗಳು (Antibodies) ಮಗುವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತವೆ. ಹೆರಿಗೆಯ ಬಳಿಕ ಮೊದಲ ಎದೆಹಾಲು ಕೊಲೊಸ್ಟ್ರಮ್ (Colostrum) ರೋಗನಿರೋಧಕ ವರ್ಧಕವಾಗಿ ಕೆಲಸ ಮಾಡುತ್ತದೆ. ಎದೆಹಾಲಿನಲ್ಲಿ ಜೀವಸತ್ವಗಳು, ಪ್ರತಿಕಾಯಗಳು ಸಮೃದ್ಧವಾಗಿ ಇರುವುದರಿಂದ ಕನಿಷ್ಠ 6 ತಿಂಗಳವರೆಗೆ ತಾಯಿಯ ಎದೆಹಾಲು ಮಗುವಿಗೆ ಮುಖ್ಯವಾಗಿರುತ್ತದೆ.
ಇದನ್ನೂ ಓದಿ: ಚಳಿಗಾಲ ಮತ್ತು ಹೃದಯದ ಆರೋಗ್ಯ; ಋತುಮಾನದ ಸವಾಲುಗಳನ್ನು ಎದುರಿಸುವುದು ಹೇಗೆ?
ಮಗುವಿನ ಸುತ್ತ ಸ್ವಚ್ಛತೆ ಕಾಪಾಡಿ
ಅಂಟು ರೋಗಗಳಿಗೆ ನವಜಾತ ಶಿಶುವಿನ ದೇಹ ಬೇಗ ಸಂಪರ್ಕ ಆಗುತ್ತದೆ. ಇದರಿಂದ ಮಗುವಿನ ಚರ್ಮವನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡಬೇಕು. ಬಟ್ಟೆ ಸೇರಿದಂತೆ ಮಗುವಿನ ಸುತ್ತ ಇರಿಸುವಂತ ವಸ್ತುಗಳನ್ನು ಸ್ವಚ್ಛತೆಯಿಂದ ಇರಬೇಕು.
ತಂಪು ಹಾಗೂ ಬಿಸಿ ವಾತಾವರಣಕ್ಕೆ ಮಗು ಬೇಗನೆ ಪ್ರತಿಕ್ರಿಯಿಸುವುದರಿಂದ ದಂಪತಿ ಈ ಬಗ್ಗೆ ಜಾಗೃತರಾಇರಬೇಕು. ತಂಪು ವಾತಾವರಣದಲ್ಲಿ ಬೆಚ್ಚಗಿನ ಉಡುಪುಗಳನ್ನು ಹಾಗೂ ಬಿಸಿ ವಾತಾವರಣ ಇದ್ದಲ್ಲಿ ಮೃದುವಾದ ಬಟ್ಟೆಗಳಿಂದ ಮಗುವಿಗೆ ರಕ್ಷಣೆ ಕೊಡಬೇಕು.
ಲಸಿಕೆ (vaccinated) ಕುರಿತು ವೈದ್ಯರ ಬಳಿ ಚರ್ಚಿಸಿ
ಮಗುವಿಗೆ ನೀಡುವ ಲಸಿಕೆ (vaccinated) ಕುರಿತು ವೈದ್ಯರ ಬಳಿ ಚರ್ಚಿಸಿ ವೇಳಾಪಟ್ಟಿ ಖಚಿತಪಡಿಸಿಕೊಳ್ಳಿ. ಲಸಿಕೆ ಹಾಕುವುದರಿಂದ ಮಗುವಿನ ರೋಗನಿರೋಧಕ (immunity) ಶಕ್ತಿ ಹೆಚ್ಚುತ್ತದೆ. ಅಲ್ಲದೇ ದಡಾರ, ಚಿಕನ್ಪಾಕ್ಸ್ ಸೇರಿ ಇತರ ಗಂಭೀರ ಕಾಯಿಲೆಗಳಿಂದ ರಕ್ಷಣೆ ಇರುತ್ತದೆ. ಈ ಲಸಿಕೆಗಳು ಚಳಿಗಾಲದಲ್ಲಿ ಮಗುವಿನ ಆರೋಗ್ಯವನ್ನು ಸಂಪೂರ್ಣವಾಗಿ ಕಾಪಾಡುತ್ತವೆ.
ಶಿಶುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಉತ್ತಮ ಆರೋಗ್ಯ ಹಾಗೂ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಗುವಿನ ಮುಂದಿನ ದಿನಗಳು ಆರೋಗ್ಯಕರವಾಗಿರುತ್ತವೆ. ಮಗುವನ್ನ ರೋಗಗಳಿಂದ ದೂರ ಇಡಲು ಮೊದಲು ತಾಯಿಯ ಹಾಲು, ಸ್ವಚ್ಛತೆ, ವ್ಯಾಕ್ಸಿನೇಷನ್ (vaccination) ಮತ್ತು ಸರಿಯಾದ ಆರೈಕೆ ಅತ್ಯಂತ ಮುಖ್ಯವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ