ಬೆಳಗಿನ ಈ 5 ಅಭ್ಯಾಸಗಳು ನಿಮ್ಮನ್ನು ಮಾರಣಾಂತಿಕ ಕಾಯಿಲೆಯಿಂದ ಕಾಪಾಡುತ್ತವೆ; ತಪ್ಪದೇ ಪಾಲಿಸಿ!

author-image
Gopal Kulkarni
Updated On
ಜಸ್ಟ್ 11 ನಿಮಿಷ ಅಷ್ಟೇ.. ನೀವು ಅಕಾಲಿಕ ಸಾವಿನಿಂದ ಬಚಾವ್ ಆಗ್ತೀರಿ.. ಹೆಂಗೆ ಅಂತೀರಾ ಈ ಸ್ಟೋರಿ ಓದಿ
Advertisment
  • ದೀರ್ಘಕಾಲಿಕ ರೋಗಗಳಿಂದ ತಪ್ಪಿಸಿಕೊಳ್ಳುವ ಈ 5 ಅಭ್ಯಾಸಗಳು ನಿಮ್ಮದಾಗಲಿ
  • ಈ ಅಭ್ಯಾಸಗಳಿಂದ ಯಾವೆಲ್ಲಾ ಮಾರಣಾಂತಿಕ ರೋಗಗಳನ್ನು ತಡೆಯಬಹುದು?
  • ಒಂದು ಗ್ಲಾಸ್ ನೀರಿನಿಂದ ಆರಂಭಿಸಿ, ಸೂರ್ಯನ ಬಿಸಿಲಿನಿಂದ ಮುಗಿಸಬಹುದು

ನಾವು ಸದಾ ಆರೋಗ್ಯದಿಂದ ಇರಲು ಹಲವು ಮಾರ್ಗಗಳಿವೆ. ನಮ್ಮ ನಿತ್ಯದ ಚಟುವಟಿಕೆಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಬೇಡವಾದ, ಅನಾರೋಗ್ಯಕಾರಿ ಚಟುವಟಿಕೆಯನ್ನು ನಿಮ್ಮದಾಗಿಸಿಕೊಂಡರೆ, ಅನಾರೋಗ್ಯವು ನಿಮ್ಮ ಬದುಕಿನ ಜೊತೆ ಆಟವಾಡುತ್ತವೆ. ನಿತ್ಯ ಮುಂಜಾನೆ ಸಣ್ಣ ವಾಕ್​ನಿಂದ ಹಿಡಿದು ಕೆಲವು ಉತ್ತಮ ಅಭ್ಯಾಸಗಳನ್ನು ನೀವು ರೂಢಿ ಮಾಡಿಕೊಂಡರೆ ನಿಮ್ಮ ಆರೋಗ್ಯದ ಮೇಲೆ ದೀರ್ಘಕಾಲಿಕ ಧನಾತ್ಮಕ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದು ಚೆನ್ನಾಗಿ ನೀರು ಕುಡಿಯುವುದರಿಂದ ಆರಂಭಿಸಿ ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವಂತಹ ಅಭ್ಯಾಸಗಳು ನಿಮ್ಮದಾಗಿಸಿಕೊಳ್ಳಿ. ಇದು ನಿಜಕ್ಕೂ ನಿಮ್ಮ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ತರಲಿದೆ. ಆ ಅಭ್ಯಾಸಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ನಾವು ಹೇಳುತ್ತೇವೆ.

publive-image

1. ನೀರು ಕುಡಿಯುವುದರೊಂದಿಗೆ ಆರಂಭಿಸಿ
ರಾತ್ರಿಯೀಡಿ ಮಲಗಿರುವ ನಮ್ಮ ದೇಹ ಹೈಡ್ರೆಡ್​ ಆಗಬೇಕಾಗುತ್ತದೆ. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಎದ್ದ ತಕ್ಷಣ ದೇಹವನ್ನು ರೀಹೈಡ್ರೇಡ್​ ಮಾಡಲು ಒಂದು ಗ್ಲಾಸ್ ನೀರು ಕುಡಿಯಿರಿ. ಇದರಿಂದ ನಿಮ್ಮ ದಿನಕ್ಕೆ ಒಳ್ಳೆ ಕಿಕ್​ಸ್ಟಾರ್ಟ್ ದೊರಕಿದಂತಾಗುತ್ತದೆ. ಚಯಾಪಚಯ ಕ್ರಿಯೆಗೆ ದಿನದ ಒಳ್ಳೆಯ ಆರಂಭವುಂಟಾಗುತ್ತದೆ. ಅದು ಮಾತ್ರವಲ್ಲ, ನಿತ್ಯವೂ ನೀವು ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯುವುದರಿಂದ ಎಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸರಾಗ ದಾರಿ ಮಾಡಿಕೊಟ್ಟಂತೆ ಆಗುತ್ತದೆ.

publive-image

2. ದೈಹಿಕ ವ್ಯಾಯಾಮದಲ್ಲಿ ತೊಡಗಿ
ಯೋಗಾ, ವಾಕಿಂಗ್, ಈ ರೀತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇಂತಹ ದೈಹಿಕ ವ್ಯಾಯಾಮಗಳು ನಿಮ್ಮ ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡಗಳನ್ನು ನಿಯಂತ್ರಿಸುತ್ತದೆ. ಒಟ್ಟಾರೆಯಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬಹುದೊಡ್ಡ ಧನಾತ್ಮಕ ಪರಿಣಾಮ ಉಂಟಾಗುತ್ತದೆ.

publive-image

3. ಪೋಷಕಾಂಶಗಳ ಉಪಹಾರ ನಿಮ್ಮದಾಗಿರಲಿ
ಬೆಳಗಿನ ಉಪಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಹಾಗೂ ಜೀವಸತ್ವಗಳು ಇರುವುದನ್ನು ನೋಡಿಕೊಳ್ಳಿ. ಧಾನ್ಯಗಳು, ಪ್ರೊಟೀನ್ ಒದಗಿಸುವ ಆಹಾರಗಳು ತಾಜಾ ಹಣ್ಣು, ಇವೆಲ್ಲವೂ ಬೆಳಗಿನಿಂದಲೇ ದೇಹ ಹಾಗೂ ಮನಸ್ಸು ಪ್ರಫುಲ್ಲವಾಗಿರಲು ನೀಡುವ ಇಂಧನ ಶಕ್ತಿಯಿದ್ದಂತೆ. ದೇಹದಲ್ಲಿ ಶಕ್ತಿ ಹೆಚ್ಚಿಸುವುದರ ಮೂಲಕ ದೇಹವನ್ನು ರೋಗ ನಿರೋಧಕ ಕವಚವನ್ನಾಗಿ ಮಾಡುತ್ತದೆ.

publive-image

4. ಧ್ಯಾನವನ್ನು ಮಾಡುವುದು ಒಳ್ಳೆಯದು
ನಿತ್ಯ ಒಂದಿಷ್ಟು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸು ತುಂಬಾ ಪ್ರಶಾಂತವಾಗಿರುತ್ತದೆ. ಇದು ಮೆದುಳನ್ನು ಕೇವಲ ಪ್ರಶಾಂತವಾಗಿಡುವುದಲ್ಲದೇ ಮತ್ತಷ್ಟು ಚುರುಕುಗೊಳಿಸುತ್ತದೆ. ನಿತ್ಯವೂ ನೀವು ಧ್ಯಾನದಲ್ಲಿ ಕೆಲವು ನಿಮಿಷಗಳ ಕಾಲ ಕಳೆದು ಹೋಗುವುದರಿಂದ ಪಾಸಿಟಿವ್ ಆ್ಯಟಿಟ್ಯೂಡ್ ನಿಮ್ಮದಾಗಿಸಿಕೊಳ್ಳುವುದರ ಮೂಲಕ ದಿನ ಕಳೆದಂತೆ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ನೀವು ಸಶಕ್ತರಾಗುವಷ್ಟು ನಿಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ ಧ್ಯಾನ

publive-image

5. ಎಳೆ ಬಿಸಿಲಿನಲ್ಲಿ ಸಮಯ ಕಳೆಯಿರಿ
ನಿತ್ಯ ಎಳೆಬಿಸಿನಲ್ಲಿ ಸಮಯ ಕಳೆಯುವುದು ಆರೋಗ್ಯದ ವಿಚಾರದಲ್ಲಿ ತುಂಬಾ ಒಳ್ಳೆಯದು.ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ವಿಟಮಿಟ್ ಡಿಯನ್ನು ಪೂರೈಸುತ್ತದೆ.ಇದು ನಮ್ಮ ಎಲುಬುಗಳನ್ನು ಗಟ್ಟಿಗೊಳಿಸಲು ಸಹಾಯವಾಗುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಅದು ಮಾತ್ರವಲ್ಲಿ ಎಳೆ ಬಿಸಿಲಿಗೆ ಮೈಯೊಡ್ಡುವುದರಿಂದ ನಮ್ಮ ಮೂಡ್ ಕೂಡ ಖುಷಿ ಖುಷಿಯಾಗಿ ಇರುತ್ತದೆ.
ಈ ರೀತಿಯ ಐದು ಅಭ್ಯಾಸಗಳನ್ನು ನಿಮ್ಮ ನಿತ್ಯದ ರೂಢಿಯಾಗಿಸಿಕೊಂಡರೆ ಉತ್ತಮ ಆರೋಗ್ಯದ ಜೊತೆ ಡಯಾಬಿಟಿಸ್, ತೀವ್ರ ಒತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ನಾವು ದೂರ ಇರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment