Advertisment

ಈ 5 ತರಕಾರಿ ತಿಂದ್ರೆ ಸಾಕು.. ನಿಮ್ಮ ದೇಹಕ್ಕೆ ಬೇಕಾದ ಪ್ರೊಟೀನ್​ ಹೇರಳವಾಗಿ ಸಿಗುತ್ತೆ; ತಪ್ಪದೇ ಈ ಸ್ಟೋರಿ ಓದಿ!

author-image
Gopal Kulkarni
Updated On
ಈ 5 ತರಕಾರಿ ತಿಂದ್ರೆ ಸಾಕು.. ನಿಮ್ಮ ದೇಹಕ್ಕೆ ಬೇಕಾದ ಪ್ರೊಟೀನ್​ ಹೇರಳವಾಗಿ ಸಿಗುತ್ತೆ; ತಪ್ಪದೇ ಈ ಸ್ಟೋರಿ ಓದಿ!
Advertisment
  • ಪ್ರೊಟೀನ್ ಕೇವಲ ಮೊಟ್ಟೆ ಮಾಂಸಾಹಾರಗಳಲ್ಲಿ ಮಾತ್ರವಿಲ್ಲ
  • ನೀವು ನಿತ್ಯ ಸೇವಿಸುವ ಸಸ್ಯಾಹಾರಗಳಲ್ಲಿಯೂ ಇದೆ ಪ್ರೊಟೀನ್
  • ಈ ಐದು ಪ್ರಮುಖ ಸಸ್ಯಾಹಾರಗಳಲ್ಲಿ ಇವೆ ಹೇರಳ ಪೌಷ್ಠಿಕಾಂಶ

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮಗೆ ಪೌಷ್ಠಿಕಾಂಶದ ಅಗತ್ಯ ತುಂಬಾ ಇರುತ್ತದೆ. ಸ್ನಾಯುಗಳಿಗೆ ಶಕ್ತಿ ತುಂಬಲು ಹಾಗೂ ಒಟ್ಟಾರೆ ದೈಹಿಕ ಆರೋಗ್ಯದ ವಿಚಾರದಲ್ಲಿ ಪ್ರೊಟೀನ್ ಅಂಶ ತುಂಬಾ ಸಹಾಯಕ. ಪ್ರೊಟೀನ್ ಅಂದಾಕ್ಷಣ ಮೊದಲು ನಮಗೆ ನೆನಪಾಗುವುದೇ ಮೊಟ್ಟೆ, ಚಿಕನ್ ಮಟನ್. ಮಾಂಸಾಹಾರದಲ್ಲಿ ಮಾತ್ರ ಪೌಷ್ಠಕಾಂಶ ಹೆಚ್ಚು ಇದೆ ಎಂಬ ನಂಬಿಕೆ ನಮ್ಮೆಲ್ಲರಲ್ಲಿಯೂ ಕೂಡ ಇದೆ. ಆದ್ರೆ ಸಸ್ಯಾಹಾರದಲ್ಲಿಯೂ ಕೂಡ ಅಷ್ಟೇ ಹೇರಳವಾಗಿ ಪೌಷ್ಠಿಕಾಂಶ ದೊರಕುತ್ತದೆ. ಅಂತಹ ಅನೇಕ ಬಗೆಯ ಸಸ್ಯಹಾರ ನಮ್ಮ ನಡುವೆಯೇ ಇವೆ. ಅದರಲ್ಲೂ ಈ ಐದು ಸಸ್ಯಾಹಾರಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶವನ್ನು ಸರಳವಾಗಿ ಪೂರೈಸಬಹುದು.

Advertisment

ಇದನ್ನೂ ಓದಿ:ಚಳಿಗಾಲದಲ್ಲಿ ಈ ತಪ್ಪು ಮಾಡಬೇಡಿ.. ವಾಕಿಂಗ್, ಜಾಗಿಂಗ್​​ಗೆ ಸೂಕ್ತ ಸಮಯ ಯಾವುದು?

publive-image

ಬ್ರಸೆಲ್ಸ್ ಮೊಗ್ಗುಗಳು ( ಮಿನಿ ಹೂಕೋಸು)
ನೀವು ಬ್ರಸೆಲ್ಸ್ ಮೊಗ್ಗುಗಳ ಬಗ್ಗೆ ಕೇಳಿರುವುದು ಅಪರೂಪ ಇವು ಹೆಚ್ಚು ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳಲ್ಲಿ ಹೆಚ್ಚು ಬೆಳೆಯುತ್ತಾರೆ ಹಾಗೂ ಬಳಸುತ್ತಾರೆ. ನಾವು ಬಳಸುವ ಕ್ಯಾಬೀಜ್​ ರೀತಿಯಲ್ಲಿಯೇ ಇರುವ ಇವು. ಸಣ್ಣ ಗಾತ್ರದಲ್ಲಿ ಇರುತ್ತವೆ. ಈ ಬ್ರಸೆಲ್ಸ್ ಮೊಗ್ಗುಗಳಲ್ಲಿ ಹೆಚ್ಚು ಪೌಷ್ಠಿಕಾಂಶ ಇದೆ ಎಂದು ಅನೇಕ ತಜ್ಞರು ಹೇಳುತ್ತಾರೆ. ಒಂದು ಬಟ್ಟಲು ಬ್ರಸೇಲ್ಸ್ ಮೊಗ್ಗು ಅಥವಾ ಮಿನಿ ಹೂಕೋಸಿನಲ್ಲಿ ಮೂರು ಗ್ರಾಂನಷ್ಟು ಪ್ರೊಟೀನ್ ಇರುತ್ತದೆ ಎಂದು ಹೇಳಲಾಗುತ್ತದೆ. ಕೇವಲ ಪೌಷ್ಠಿಕಾಂಶ ಅಲ್ಲ ಈ ಒಂದು ಸಸ್ಯಾಹಾರದಲ್ಲಿ ಆ್ಯಂಟಿಆಕ್ಸಿಡಂಟ್ಸ್​ ಹಾಗೂ ವಿಟಮಿನ್ ಸಿ ಮತ್ತು ಕೆ ಕೂಡ ಹೇರಳವಾಗಿ ಇವೆ. ಇವುಗಳನ್ನು ಚೆನ್ನಾಗಿ ರೋಸ್ಟ್ ಮಾಡಿಕೊಂಡು ತಿಂದಾಗ ನಾಲಿಗೆ ರುಚಿಯನ್ನು ತೃಪ್ತಿಪಡಿಸುವುದರೊಂದಿಗೆ ದೇಹಕ್ಕೆ ಪ್ರೊಟೀನ್​ ಕೂಡ ದೊರಕುತ್ತದೆ.

publive-image

ಪಾಲಕ ಸೊಪ್ಪು
ಪಾಲಕ ಸೊಪ್ಪಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣ ಅಂಶ ಇರುತ್ತದೆ. ಒಂದು ಬಟ್ಟಲು ಬೇಯಿಸಿದ ಪಾಲಕ್​ನಲ್ಲಿ ಸುಮಾರು 6 ಗ್ರಾಂ ಪ್ರೊಟೀನ್​ ನಮಗೆ ಸಿಗುತ್ತದೆ. ಪಾಲಕ್​ ಪೌಷ್ಠಿಕಾಂಶದ ಬಹುದೊಡ್ಡ ಮೂಲ ಎಂದೇ ಹೇಳಲಾಗುತ್ತದೆ. ಇದರಲ್ಲಿಯೂ ಕೂಡ ವಿಟಮಿನ್ ಎ ಮತ್ತು ಕೆ ಪ್ರಮಾಣ ಹೆಚ್ಚಾಗಿ ದೊರೆಯುತ್ತದೆ.

Advertisment

publive-image

ಕೊಸುಗಡ್ಡೆ (Broccoli)
ಈ ಒಂದು ತರಕಾರಿ ಹೆಚ್ಚಾಗಿ ತಮಿಳುನಾಡು ಗುಜರಾತ್​ನಲ್ಲಿ ಬೆಳೆಯುತ್ತಾರೆ. ನೋಯ್ಡಾದ ಐಐಎಂಎಸ್ ಕಾಲೇಜ್​ನ ಡಯಟೀಷನ್ ಆಗಿರುವ ಡಾ ಪ್ರೀತಿ ನಾಗರ್ ಹೇಳುವ ಪ್ರಕಾರ ಪೌಷ್ಠಿಕಾಂಶವನ್ನು ಹೆಚ್ಚು ಬಯಸುವವರು ಕೊಸುಗಡ್ಡೆಯನ್ನು ಸೇವಿಸುಬೇಕು. ಪ್ರೊಟೀನ್ ವಿಚಾರದಲ್ಲಿ ಈ ಒಂದು ತರಕಾರಿ ಅತ್ಯಂತ ಶ್ರೀಮಂತವಾಗಿದೆ. ಹೇರಳವಾಗಿ ಪ್ರೊಟೀನ್ ಅಂಶ ಈ ತರಕಾರಿಯಿಂದ ನಾವು ಪಡೆಯಬಹುದು ಎಂದು ಹೇಳಿದ್ದಾರೆ. ಒಂದು ಕಪ್ ಕೋಸುಗಡ್ಡೆಯಲ್ಲಿ ಸುಮಾರು 4 ರಿಂದ 6 ಗ್ರಾಂ ಪ್ರೊಟೀನ್ ಅಂಶ ಇರುತ್ತದೆ ಎಂದು ಹೇಳಲಾಗುತ್ತೆ. ಇದನ್ನು ಜೀವಸತ್ವಗಳ ಹಾಗೂ ಪೋಷಕಾಂಶಗಳ ಶಕ್ತಿಕೇಂದ್ರವೆಂದೇ ಕರೆಯತ್ತಾರೆ. ಅಷ್ಟು ಜೀವಸತ್ವಗಳು ಹಾಗೂ ಪೋಷಕಾಂಶಗಳು ಇದರಲ್ಲಿ ಇವೆ.

publive-image

ಬಟಾಣಿ ಕಾಳು
ಬಟಾಣಿ ಕಾಳಿನಲ್ಲಿ ಸಿಗುವಷ್ಟು ಪೌಷ್ಠಿಕಾಂಶ ನಮಗೆ ಇನ್ಯಾವ ಸಸ್ಯಾಹಾರದಲ್ಲಿಯೂ ಕಾಣಸಿಗುವುದಿಲ್ಲ. ಒಂದು ಕಪ್ ಬಟಾಣಿ ಕಾಳಿನಲ್ಲಿ ಒಟ್ಟು 9 ಗ್ರಾಂ ಪ್ರೊಟೀನ್ ಅಂಶ ಇರುತ್ತದೆ. ಇದನ್ನು ನಾವು ಎಲ್ಲಾ ರೀತಿಯ ಅಡುಗೆಯಲ್ಲೂ ಕೂಡ ಬಳಸಹುದು. ಪ್ರೊಟೀನ್ ಜೊತೆ ಹಸಿ ಬಟಾಣಿ ಕಾಳಿನಲ್ಲಿ ಫೈಬರ್ ಜೊತೆ ವಿಟಮಿನ್ ಸಿ ಹಾಗೂ ಎ ಕೂಡ ಇವೆ

ದ್ವಿದಳ ಧಾನ್ಯಗಳು
ಡೈಯಟ್ ಎಕ್ಸ್​ಪರ್ಟ್​ನ ಸಿಇಒ ಸಿಮ್ರತ್ ಕಥುರಿಯಾ ಹೇಳುವ ಪ್ರಕರಾ ದ್ವಿದಳ ಧಾನ್ಯಗಳಲ್ಲಿಯೂ ಕೂಡ ಸಾಕಷ್ಟು ಪ್ರೊಟೀನ್ ಅಂಶ ಇದೆ. ಇದರಲ್ಲಿ ಒಂದು ಕಪ್​ ಧಾನ್ಯಗಳಲ್ಲಿ ಸುಮಾರು 18 ಗ್ರಾಂನಷ್ಟು ಪೌಷ್ಠಕಾಂಶಗಳು ನಮಗೆ ಸಿಗುತ್ತವೆ. ಅದೇ ಪ್ರಮಾಣದ ಫೈಬರ್ ವಿಟಮಿನ್ ಹಾಗೂ ಮಿನಿರಲ್ಸ್​ಗಳು ಕೂಡ ನಮಗೆ ಇದರಲ್ಲಿ ಸಿಗುತ್ತವೆ.

Advertisment

ಇದನ್ನೂ ಓದಿ:ಸೋಮವಾರದಿಂದ ರವಿವಾರದವರೆಗೂ ಈ ಡಯಟ್​ ಪಾಲಿಸಿ; ತಿಂಗಳಲ್ಲಿ 7 ಕೆಜಿ ತೂಕ ಕಳೆದುಕೊಳ್ಳಿ

ಪ್ರೊಟೀನ್ ಬೇಕು ಎಂದಾಗಲೆಲ್ಲಾ ಮೊಟ್ಟೆ ಹಾಗೂ ಮಾಂಸಾಹಾರಗಳ ಮೊರೆ ಹೋಗುವುದೇ ಮಾರ್ಗವಲ್ಲ ಸಸ್ಯಾಹಾರದಲ್ಲಿಯೂ ಕೂಡ ನಮಗೆ ಪೌಷ್ಠಿಕಾಂಶಗಳು ಸಿಗುತ್ತವೆ. ಹೇರಳವಾಗಿ ಪೌಷ್ಠಿಕಾಂಶ ಹೊಂದಿರುವ ಅನೇಕ ಸಸ್ಯಾಹಾರಗಳಿವೆ. ಅವುಗಳತ್ತ ಗಮನಕೊಡಬೇಕಷ್ಟೇ. ಮೇಲೆ ವಿವರಿಸಿದ ಕೇವಲ ಐದು ಸಸ್ಯಾಹಾರಗಳಲ್ಲಿ ಮಾತ್ರವಲ್ಲ ಇನ್ನೂ ಅನೇಕ ಸಸ್ಯಾಹಾರ ಪದಾರ್ಥಗಳಲ್ಲಿಯೂ ಕೂಡ ಪೌಷ್ಠಿಕಾಂಶಗಳು ಹೇರಳವಾಗಿ ದಕ್ಕುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment