newsfirstkannada.com

×

ರೇಬೀಸ್​ ಬಗ್ಗೆ ಸಾರ್ವಜನಿಕರಲ್ಲಿರುವ ಐದು ತಪ್ಪು ಕಲ್ಪನೆಗಳೇನು? ಸತ್ಯಗಳೇನು..?

Share :

Published September 28, 2024 at 8:04pm

    ಜನಸಾಮಾನ್ಯರಲ್ಲಿದೆ ರೇಬೀಸ್ ಬಗ್ಗೆ ಐದು ಸಾಮಾನ್ಯ ತಪ್ಪು ಕಲ್ಪನೆಗಳು

    ರೇಬೀಸ್ ಕೇವಲ ಶ್ವಾನದಿಂದ ಹರಡುವ ವೈರಸ್ ಎಂಬುದು ಶುದ್ಧ ಸುಳ್ಳು

    ಪ್ರಾಣಿಗಳು ಕಚ್ಚುವ ಮೊದಲೇ ನೀವು ರೇಬೀಸ್ ಲಸಿಕೆ ಪಡೆಯಬಹುದು

ರೇಬೀಸ್ ಎಂಬ ಭೀಕರ ಕಾಯಿಲೆ ಸಸ್ತನಿಗಳಿಂದ ಹರಡುವ, ಪ್ರಾಣಿಗಳಿಂದ ಮನುಷ್ಯನಿಗೆ ಅವುಗಳ ಎಂಜಲುಗಳಿಂದ ಹರಡುವಂತಹ ಒಂದು ಕಾಯಿಲೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯ ಪ್ರಕಾರ ರೇಬೀಸ್​ನಿಂದಾಗಿಯೇ ವಿಶ್ವದಲ್ಲಿ ಸುಮಾರು 50 ಸಾವಿರ ಸಾವುಗಳಾಗಿವೆ. ಅದರಲ್ಲಿ ಭಾರತದ ಪಾಲು ಶೇಕಡಾ 36 ರಷ್ಟು. ಇವೆಲ್ಲವನ್ನೂ ನೋಡಿದಾಗ ರೇಬೀಸ್ ವಿಚಾರದಲ್ಲಿ ನಾವು ತುಂಬಾ ಜಾಗರೂಕರಾಗಿ ಇರಬೇಕು. ಆದ್ರೆ ಈ ಒಂದು ರೋಗದ ಬಗ್ಗೆ ಅನೇಕ ಮಿತ್ಯೆಗಳನ್ನು ಹರಿಬಿಡಲಾಗಿದೆ. ಇದು ಹರಡುವುದರ ಬಗ್ಗೆ. ಒಮ್ಮೆ ರೇಬೀಸ್ ಬಂದ ಮೇಲೆ ಮನುಷ್ಯ ಉಳಿಯುವುದರ ಬಗ್ಗೆ ಅನೇಕ ಕಪೋಲಕಲ್ಪಿತ ಸುದ್ದಿಗಳನ್ನು ನಾವು ಕೇಳುತ್ತವೆ ಅಂತಹ ಐದು ಮಿತ್ಯೆಗಳಾವುವು ಎಂಬುದನ್ನು ನೋಡುವುದಾದ್ರೆ.

ರೇಬೀಸ್ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ರೋಗಗಳಿಗೆ ಸಂಬಂಧಪಟ್ಟಂತೆ ವಿಡಿಯೋಗಳು. ಲೇಖನಗಳು ನಮಗೆ ಕಾಣ ಸಿಗುತ್ತವೆ. ತಜ್ಞರಲ್ಲದ ತಜ್ಞರು ಅನೇಕ ರೋಗಗಳ ವಿಚಾರವಾಗಿ ತಮ್ಮದೇ ಒಂದು ಷರಾ ಬರೆದು ಬಿಡುತ್ತಾರೆ. ಅದೇ ರೀತಿ ರೇಬೀಸ್ ಸೇರಿ ಹಲವು ರೋಗಗಳು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಪೋಸ್ಟ್​ಗಳನ್ನು ನೀವು ನೋಡಿರಬಹುದು. ಆದ್ರೆ ರೇಬೀಸ್​ ಒಂದು ಮಾರಕರೋಗ. ಇದು ಹಲವು ಸಸ್ತನಿಗಳು ಸೇರಿದಂತೆ ಮನುಷ್ಯನಲ್ಲಿಯೂ ಕಂಡು ಬರುವಂತಹ ರೋಗ ಹೀಗಾಗಿ ರೇಬೀಸ್​ ಎನ್ನುವುದರು ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವಂತಹ ಪೋಸ್ಟ್​ಗಳನ್ನು ವಿಡಿಯೋಗಳನ್ನು ನೀವು ನಂಬದಿರುವುದೇ ಒಳಿತು

ರೇಬೀಸ್ ಕೇವಲ ಶ್ವಾನಗಳಲ್ಲಿ ಮಾತ್ರ ಇರುತ್ತದೆ
ಈಗಾಗಲೇ ನಾವು ಹೇಳಿದಂತೆ ರೇಬೀಸ್ ಅನ್ನೋದು ಆ ವೈರಸ್ ಇರುವ ಪ್ರಾಣಿಗಳಿಂದ ಪ್ರಾಣಿಗೆ ಹಾಗೂ ಮನುಷ್ಯರಿಗೆ ಹರುಡವಂತ ರೋಗ. ಶ್ವಾನ ಕಚ್ಚುವುದರಿಂದ ಈ ರೋಗ ಮನುಷ್ಯರು ಸೇರಿದಂತೆ ಉಳಿದ ಪ್ರಾಣಿಗಳಿಗೆ ಹರಡುವುದು ಸಾಮಾನ್ಯ. ಆದ್ರೆ ಇದೊಂದೇ ಮಾರ್ಗದಿಂದ ರೇಬೀಸ್ ಹರಡುವುದಿಲ್ಲ. ಶ್ವಾನಗಳ ಜೊತೆ ಬೆಕ್ಕು, ಬಾವಲಿ ಹಾಗೂ ನರಿಗಳಲ್ಲಿಯೂ ಕೂಡ ಈ ಒಂದು ವೈರಸ್ ಇರುತ್ತದೆ. ಈ ಒಂದು ರೋಗ ಪ್ರಾಣಿಗಳಿಂದ ಪ್ರಾಣಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ರೆ ಇದು ಮನುಷ್ಯರಿಗೆ ಅವುಗಳ ದಾಳಿ ಮಾಡುವ ಇಲ್ಲವೇ ಕಚ್ಚುವ ಮೂಲಕ ಹರಡುತ್ತದೆ.

ಇದನ್ನೂ ಓದಿ: ನಿತ್ಯ ಪ್ರಾಣಾಯಾಮದಿಂದ ಮಾಡುವುದರಿಂದ ಇವೆ 8 ಪ್ರಯೋಜನಗಳು; ಯಾವುವು?

ಪ್ರಾಣಿಗಳು ಕಚ್ಚಿದ ಕೂಡಲೇ ರೇಬೀಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ರೇಬೀಸ್​ನ ವಿಚಾರದಲ್ಲಿನ ಅತ್ಯಂತ ಕಳವಳಕಾರಿ ಸಂಗತಿ ಅಂದ್ರೆ ಅದರ ಲಕ್ಷಣಗಳು ಬೇಗೆ ಕಾಣಿಸಿಕೊಳ್ಳುವುದಿಲ್ಲ. ರೇಬೀಸ್ ವೈರಸ್ ನಮ್ಮ ದೇಹ ಸೇರಿದ ಮೇಲೆ ಲಕ್ಷಣಗಳು ಕಾಣಿಸಿಕೊಳ್ಳುವುದರಲ್ಲಿ ವಾರವೂ ಆಗಬಹುದು, ತಿಂಗಳವೂ ಆಗಬಹುದು ವರ್ಷವೂ ಆಗಬಹುದು. ಈ ಒಂದು ವಿಳಂಬ ನಿಮ್ಮನ್ನು ಸಾವಿನಿಂದ ಕಾಪಾಡುವುದು ಸಮಸ್ಯೆಯನ್ನುಂಟು ಮಾಡುತ್ತದೆ. ಹೀಗಾಗಿ ನಾಯಿ, ಬೆಕ್ಕು ಕಚ್ಚಿದ ಕೂಡಲೇ ನೀವು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ರೇಬೀಸ್​ನ ಆರಂಭಿಕ ಲಕ್ಷಣಗಳು ನಿಮಗೆ ರೇಬೀಸ್​ನ ಸೂಚನೆಯನ್ನು ನೀಡುವುದಿಲ್ಲ ಏಕೆಂದರೆ, ಆರಂಭಿಕ ಲಕ್ಷಣಗಳು ಜ್ವರ ತಲೆನೋವು ಮೈಕೈ ನೋವಿನಂತಹ ಸಾಮಾನ್ಯ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎರಡನೇ ಹಂತದಲ್ಲಿ ನರವೈಜ್ಞಾನಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದ್ದಕ್ಕಿದ್ದಂತೆ ಮನುಷ್ಯ ವ್ಯಘ್ರಗೊಳ್ಳಲು ಆರಂಭಿಸುತ್ತಾನೆ. ರೋಷಾವೇಷದಿಂದ ವರ್ತಿಸಲು ಆರಂಭಿಸುತ್ತಾರೆ. ಮೂರನೇ ಹಾಗೂ ಕೊನೆಯ ಹಂತದಲ್ಲಿ ವ್ಯಕ್ತಿ ಕೋಮಾಗೆ ಹೋಗುತ್ತಾನೆ. ಕೆಲವು ದಿನಗಳ ನಂತರ ಮರಣವೂ ಕೂಡ ಸಂಭವಿಸುತ್ತದೆ.

ಕಚ್ಚಿದ ಮೇಲೆ ಮಾತ್ರ ಲಸಿಕೆ ಪಡೆದುಕೊಳ್ಳಬೇಕು
ಇನ್ನೂ ನಾಯಿ ಮತ್ತು ಬೆಕ್ಕಿನಂತಹ ರೇಬೀಸ್ ವೈರಸ್ ಹೊಂದಿದ ಪ್ರಾಣಿಗಳು ಕಚ್ಚಿದಾಗ ಮಾತ್ರ ಲಸಿಕೆ ಪಡೆಯಬೇಕು ಎಂಬ ಒಂದು ಮಿತ್ಯೆ ನಮ್ಮ ಸುತ್ತಲೂ ಹಲವು ವರ್ಷಗಳಿಂದಲೂ ಹರಿದಾಡುತ್ತಿದೆ. ಆದ್ರೆ ಅದು ಆ ರೀತಿಯಿಲ್ಲ. ರೇಬೀಸ್ ಲಸಿಕೆಯಲ್ಲಿ ಒಟ್ಟು ಎರಡು ರೀತಿಯ ಲಸಿಕೆಗಳು ಬರುತ್ತವೆ. ಪ್ರಾಣಿಗಳು ಕಚ್ಚುವುದಕ್ಕಿಂತ ಮೊದಲೆ ಪಡೆಯುವ ಲಸಿಕೆ ಹಾಗೂ ಕಚ್ಚಿದ ಮೇಲೆ ಪಡೆಯುವ ಲಸಿಕೆ ಪಶುವೈದ್ಯರು, ವನ್ಯಜೀವಿಗಳ ಅಧ್ಯಯನಕಾರರು ಇಂತವರಿಗೆ ಪ್ರಿಎಕ್ಸ್​ಪೋಸರ್ ಪ್ರೊಪಾಲ್ಯಾಕ್ಸಿಸ್​ ಎಂಬ ಲಸಿಕೆಯನ್ನು ನೀಡಲಾಗುತ್ತದೆ. ಇವರಿಗೆ ರೇಬೀಸ್ ವೈರಸ್​ಯುಕ್ತ ಪ್ರಾಣಿಗಳು ಯಾವಾಗ ಬೇಕಾದರು ಕಚ್ಚುವ ಸಂಭವವಿರುತ್ತದೆ. ಹೀಗಾಗಿಯೇ ಅವರು ಈ ಲಸಿಕೆ ಪಡೆಯುತ್ತಾರೆ. ಎರಡನೇಯದ್ದು ನಾವು ನೀವು ಸಾಮಾನ್ಯವಾಗಿ ಪಡೆಯುವ ಲಸಿಕೆ ನಾಯಿ ಅಥವಾ ಬೆಕ್ಕು ಕಚ್ಚಿದ ಮೇಲೆ ಪಡೆದುಕೊಳ್ಳುವಂತಹ ಲಸಿಕೆ.

ಇದನ್ನೂ ಓದಿ: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!

ರೇಬೀಸ್ ಪೀಡಿತ ಪ್ರಾಣಿ ಕಚ್ಚಿದವರ ಪ್ರಾಣ ಉಳಿಸುವುದು ಕಷ್ಟ
ಒಮ್ಮೆ ರೇಬೀಸ್ ಪೀಡತ ಪ್ರಾಣಿ ಏನಾದರೂ ಕಚ್ಚಿದರೆ ಅವನ ಕಥೆ ಅಲ್ಲಿಗೆ ಮುಗಿಯಿತು ಅವನು ಉಳಿಯುವುದಿಲ್ಲ ಎಂಬ ಮಾತುಗಳು ಈಗಲೂ ನಮಗೆ ಕೇಳಿ ಬರುತ್ತವೆ, ಆದ್ರೆ ಅದು ಶುದ್ಧಸುಳ್ಳ. ಒಂದು ವೇಳೆ ರೇಬೀಸ್ ಪೀಡೀತ ಪ್ರಾಣಿ ನಿಮ್ಮನ್ನು ಕಚ್ಚಿದಾಗ ನೀವು ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಂಡಲ್ಲಿ ಖಂಡಿತವಾಗಿಯೂ ನೀವು ರೇಬೀಸ್​ನಿಂದ ಪಾರಾಗಬಹುದು. ಅದು ಮಾತ್ರವಲ್ಲ ಆರಂಭಿಕ ಕೆಲವು ಪ್ರಥಮ ಚಿಕತ್ಸೆಯನ್ನು ಮಾಡಿಕೊಳ್ಳಬೇಕು. ಮೊದಲು ಗಾಯವನ್ನು ಕಚ್ಚಿದ 15 ನಿಮಿಷದೊಳಗಡೆ ಸೋಪಿನಿಂದ ಸ್ವಚ್ಛವಾಗಿ ತೊಳೆಯಬೇಕು. ಕೂಡಲೇ ನಿಮ್ಮ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಆಮೇಲೆ ನಿಮ್ಮನ್ನು ಕಚ್ಚಿದ ಪ್ರಾಣಿಯ ವಿವರಣೆಯನ್ನು ಸಮೀಪದ ಪ್ರಾಣಿ ನಿಯಂತ್ರಣ ಮಂಡಳಿಗೆ ತಿಳಿಸಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಬೀಸ್​ ಬಗ್ಗೆ ಸಾರ್ವಜನಿಕರಲ್ಲಿರುವ ಐದು ತಪ್ಪು ಕಲ್ಪನೆಗಳೇನು? ಸತ್ಯಗಳೇನು..?

https://newsfirstlive.com/wp-content/uploads/2024/09/Rabies.jpg

Load More