/newsfirstlive-kannada/media/post_attachments/wp-content/uploads/2024/11/MUSTARD-OIL.jpg)
ಚಳಿಗಾಲದ ಮುಖ ಒಡೆಯುವುದು, ಚರ್ಮ ತೇವವನ್ನು ಕಳೆದುಕೊಳ್ಳುವುದು ಸಾಮಾನ್ಯ. ಈ ಸಮಯದಲ್ಲಿ ನಾವು ಚರ್ಮದ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ತೆಗೆದುಕೊಳ್ಳುವ ಒಂದೊಂದು ಮುನ್ನೆಚ್ಚರಿಕೆಯೂ ಕೂಡ ನಿಮ್ಮ ಚರ್ಮದ ಕಾಂತಿಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಅದರಲ್ಲೂ ಚಳಿಗಾಲದಲ್ಲಿ ದೇಹಕ್ಕೆ ಸಾಸಿವೆ ಎಣ್ಣೆ ಹಚ್ಚುವುದಿರಂದ ನಿಮ್ಮ ಚರ್ಮದ ಕಾಂತಿ ಎಂದಿನಂತೆ ಉಳಿಯಲಿದ್ದು. ಅದರ ಆರೋಗ್ಯದ ರಕ್ಷಣೆಯೂ ಕೂಡ ಆಗುತ್ತದೆ. ಅದರಲ್ಲಿ ಈ ಚಳಿಗಾಲದಲ್ಲಿ ಇದರ ಉಪಯೋಗ ಬಹಳವೇ ಇವೆ.
ಚರ್ಮದ ಆರೋಗ್ಯ ಸುಧಾರಣೆ
ಮಸ್ಟರ್ಡ್ ಆಯಿಲ್ ಅಥವಾ ಸಾಸಿವೆ ಎಣ್ಣೆಯಲ್ಲಿ ಆ್ಯಂಟಿಆಕ್ಸಿಂಡೆಟ್ ಅಂಶಗಳು ಅತ್ಯಂತ ಶ್ರೀಮಂತವಾಗಿವೆ. ಇದರ ಜೊತೆಗೆ ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇ ಕೂಡ ಇದೆ. ಇದು ಮುಖದ ಚರ್ಮದ ಮೇಲೆ ಉಂಟಾಗುವ ಹಾನಿಗಳ ವಿರುದ್ಧ ರಕ್ಷಣಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಈ ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕೆ ಸಾಸಿವೆ ಎಣ್ಣೆ ತುಂಬಾ ಉಪಯುಕ್ತ.
ಕೇಶಗಳ ಆರೋಗ್ಯಕ್ಕೂ ಒಳ್ಳೆಯದು
ಕೂದಲು ಆರೋಗ್ಯದ ಮೇಲೆಯೂ ಸಾಸಿವೆ ಎಣ್ಣೆ ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಒಣಗಿದ ಕೂದಲ, ತಲೆಯ ಹೊಟ್ಟು ಹಾಗೂ ಕೂದಲು ಸೀಳುವಿಕೆಯನ್ನು ನಿಯಂತ್ರಿಸುತ್ತದೆ. ಅದರಲ್ಲೂ ಚಳಿಗಾದಲ್ಲಿ ಕೂದಲು ಉದುರುವುದು ಹೆಚ್ಚು. ಇದು ತಲೆ ಕೂದಲನ್ನು ಬುಡದಿಂದ ಗಟ್ಟಿ ಮಾಡುತ್ತದೆ ಹಾಗೂ ಅಷ್ಟೇ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ಬದುಕಿನ ನಯನ ಚೆನ್ನಾಗಿದ್ದರೆ ಮಾತ್ರ ಜೀವನ.. ಈ ಅಭ್ಯಾಸ ನಿಮಗೆ ಇದೆಯಾ?
ಸ್ನಾಯು ಸೆಳೆತವನ್ನು ದೂರ ಮಾಡುತ್ತದೆ.
ಚಳಿಗಾಲ ಅಂದ ಮೇಲೆ ಒಳನೋವುಗಲು ಜಾಸ್ತಿ ಅದರಲ್ಲೂ ಸ್ನಾಯು ಸೆಳೆತ, ಸಂದು ನೋವುಗಳು ಬಹಳಷ್ಟು ಕಾಡುತ್ತವೆ. ಇದರಿಂದ ಮುಕ್ತಿ ಪಡೆಯಲು ಸಾಸಿವೆ ಎಣ್ಣೆ ಬಹಳಷ್ಟು ಸಹಾಯವಾಗುತ್ತದೆ. ನಿತ್ಯ ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದರಿಂದ ದೇಹವು ಚಳಿಗಾದಲ್ಲಿ ಬೆಚ್ಚಗೆ ಉಳಿಯುವುದರೊಂದಿಗೆ ಸ್ನಾಯು ಸೆಳೆತ, ಮಸಲ್ ಕ್ಯಾಚ್ನಂತಹ ಸಮಸ್ಯೆಗಳು ಉಳಿಯುವುದಿಲ್ಲ. ಅದರ ಜೊತೆಗೆ ದೇಹವನ್ನು ಸ್ಟಿಫ್ ಆಗಿ ಉಳಿಯುತ್ತದೆ ಹಾಗೂ ಮಾನಸಿಕ ಒತ್ತಡಗಳು ಕೂಡ ದೂರ ಆಗುತ್ತವೆ.
ಮೃದುವಾದ ಚರ್ಮ ನಿಮ್ಮದಾಗಬೇಕಾ? ಸಾಸಿವೆ ಎಣ್ಣೆ ಬಳಸಿ
ಇನ್ನು ಮಸ್ಟರ್ಡ್ ಆಯಿಲ್ನ್ನು ಚಳಿಗಾಲದಲ್ಲಿ ದೇಹಕ್ಕೆ ಹಚ್ಚಿಕೊಳ್ಳುವುದಿರಂದ ಚರ್ಮವು ಮೃದುವಾಗಿ ಉಳಿಯುತ್ತದೆ ಹಾಗೂ ತ್ವಚೆಯ ಶುಷ್ಕತೆಯೂ ಕೂಡ ದೂರವಾಗುತ್ತದೆ. ಚಳಿಗಾಲದಲ್ಲಿ ಮುಖ, ಮೈ ಕೈಗಳು ಒಡೆಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಅದನ್ನೂ ದೂರ ಮಾಡುತ್ತದೆ ಈ ಮಸ್ಟರ್ಡ್ ಆಯಿಲ್
ನವೆಯನ್ನು ಇಲ್ಲದಂತೆ ಮಾಡುತ್ತದೆ.
ಇನ್ನು ಸಾಸಿವೆ ಎಣ್ಣೆಯನ್ನು ಚಳಿಗಾಲದಲ್ಲಿ ಹೆಚ್ಚು ಬಳಸುವುದರಿಂದ ಅಥವಾ ದೇಹಕ್ಕೆ ಮಸಾಜ್ ಮಾಡುವುದರಿಂದ ಚಳಿಗಾದಲ್ಲಿ ಉಂಟಾಗುವ ನವೆಯನ್ನು ಶಮನಗೊಳಿಸುತ್ತದೆ. ಉರಿಯೂತವನ್ನು ಶಮನಗೊಳಿಸುವ ಶಕ್ತಿ ಸಾಸಿವೆ ಎಣ್ಣೆಯಲ್ಲಿ ಇರುವುದರಿಂದ. ಕಿರಿಕಿರಿ ಎನಿಸುವು ನವೆ, ಡ್ರೈ ಸ್ಕಿನ್ ಇವೆಲ್ಲವುಗಳನ್ನು ನಿವಾರಿಸುತ್ತದೆ ಸಾಸಿವೆ ಎಣ್ಣೆ. ಹೀಗಾಗಿ ಚಳಿಗಾಲದಲ್ಲಿ ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ತುಂಬಾ ಒಳ್ಳೆಯದು.
ಡೆಡ್ ಸೆಲ್ಗಳ ಶುದ್ಧೀಕರಣ
ಇನ್ನು ಸಾಸಿವೆ ಎಣ್ಣೆಯನ್ನು ನಾವು ದೇಹಕ್ಕೆ ಅಪ್ಲೈ ಮಾಡುವುದರಿಂದ ಇದು ಚರ್ಮದೊಳಗಿರುವ ಡೆಡ್ ಸೆಲ್ಗಳನ್ನು ಶುದ್ಧೀಕರಣ ಮಾಡುತ್ತದೆ. ಈ ಮೂಲಕ ನಮ್ಮ ಚರ್ಮವನ್ನು ಮತ್ತಷ್ಟು ಆರೋಗ್ಯಕರ ಹಾಗೂ ತಾಜಾಗೊಳಿಸುವ ಕೆಲಸವನ್ನು ಸಾಸಿವೆ ಎಣ್ಣೆ ಮಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದು ಚರ್ಮದ ಆರೋಗ್ಯವನ್ನು ವೃದ್ಧಿಗೊಳಿಸಿವುದರ ಜೊತೆಗೆ ತ್ವಚೆಯ ಕಾಂತಿಯ ಕಳೆಯೇರಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ