/newsfirstlive-kannada/media/post_attachments/wp-content/uploads/2024/11/coriander-tea-2.jpg)
ಹವೀಜದಲ್ಲಿ ಅನೇಕ ಔಷಧಿಯ ಗುಣಗಳು ಇರುವುದು ಗೊತ್ತೆ ಇದೆ. ಇದು ಕೇವಲ ಮಸಾಲೆ ಪದಾರ್ಥಕ್ಕೆ ಮಾತ್ರವಲ್ಲ ಹಲವು ಆರೋಗ್ಯ ಸಮಸ್ಯೆಗಳ ನಿರ್ಮೂಲನೆಗೂ ಕೂಡ ಸಹಾಯಕವಾಗುತ್ತದೆ. ಇದರಿಂದ ಚಹಾ ಮಾಡಿಕೊಂಡು ಕುಡಿದರೆ ಅನೇಕ ರೀತಿಯ ಆರೋಗ್ಯದ ಲಾಭಗಳು ಇವೆ. ಅವು ಯಾವವು ಅಂತ ನೋಡುವುದಾದ್ರೆ.
ಪಚನಕ್ರಿಯಗೆ ತುಂಬಾ ಸಹಾಯಕ
ಹವೀಜದಿಂದ ತಯಾರಿಸಿದ ಟೀ ನಿಮ್ಮ ಪಚನ ಕ್ರಿಯೆಯನ್ನು ತುಂಬಾ ಪರಿಣಾಮಕಾರಿಯಾಗಿ ಸರಳವಾಗುವಂತೆ ಮಾಡುತ್ತದೆ. ಪಚನಕ್ರಿಯೆಗೆ ಇದು ಬೂಸ್ಟರ್ ನೀಡುತ್ತದೆ. ಇದು ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸೃಷ್ಟಿ ಮಾಡುವುದರಿಂದ ಪಚನಕ್ರಿಯೆ ಸರಳವಾಗಿ ಆಗುವಂತೆ ಸಹಾಯಕವಾಗಿ ನಿಲ್ಲುತ್ತದೆ.
ದೇಹಕ್ಕೆ ನೈಸರ್ಗಿಕವಾಗಿ ಡಿಟಾಕ್ಸ್ ನೀಡುತ್ತದೆ
ಕೊತ್ತಂಬರಿ ಬೀಜದಿಂದ ತಯಾರಿಸಿದ ಟೀ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿರ್ನಾಮ ಮಾಡುವಲ್ಲಿ ಬಹಳ ಸಹಕಾರಿ. ಇದು ದೇಹದಲ್ಲಿ ಸ್ವಚ್ಛತಾ ಅಭಿಯಾನವನ್ನೇ ನಡೆಸುತ್ತದೆ. ಇದರಲ್ಲಿ ಅತಿಹೆಚ್ಚು ಆ್ಯಂಟಿ ಆಕ್ಸಿಡೆಂಟ್ಸ್ಗಳು ಇರುವುದರಿಂದ ಆಹಾರಗಳಿಂದ ದೇಹದಲ್ಲಿ ಸೃಷ್ಟಿಯಾಗುವ ವಿಷಕಾರಿ ಅಂಶಗಳನ್ನು ತೊಡೆದು ಹಾಕುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ತ್ವಚೆಯ ಕಾಂತಿ ಹೆಚ್ಚಾಗಬೇಕಾದರೆ ಹವೀಜದ ಟೀ ಕುಡಿಯಿರಿ
ನೀವು ಅತಿಯಾಗಿ ಸ್ಕಿನ್ ಕೇರ್, ಸೊಲ್ಯೂಷನ್ ಅನ್ನು ಬಳಸುವುದೇ ಬೇಡ ನಿತ್ಯ ಹವೀಜದ ಟೀ ಕುಡಿಯುವುದರಿಂದ ನಿಮ್ಮ ಮುಖದ ಕಾಂತಿ ಪಳಪಳ ಹೊಳೆಯುತ್ತದೆ. ಚರ್ಮ ಸ್ನೇಹಿ ಆ್ಯಂಟಿಆಕ್ಸಿಡೆಂಟ್ಗಳು ಹವೀಜದಲ್ಲಿ ಇರುವುದರಿಂದ ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಉರಿಯೂತ ನಿರೋಧಕವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ನಿರಂತರವಾಗಿ ಹವೀಜ ಟೀ ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ
ಯಾರು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಒದ್ದಾಡುತ್ತಿದ್ದಾರೊ ಅವರಿಗೆ ಹವೀಜ ಟೀ ರಾಮಬಾಣ. ಇತ್ತೀಚೆಗೆ ನಡೆದ ಒಂದು ಅಧ್ಯಯನ. ನಿರಂತರ ಹವೀಜ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಗ್ಲುಕೋಸ್ ಅಂಶವನ್ನು ಸೃಷ್ಟಿಯಾಗುವುದನ್ನು ಇದು ನಿಯಂತ್ರಿಸುತ್ತದೆ ಹೀಗಾಗಿ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ.
ತೂಕ ನಿಯಂತ್ರಣಕ್ಕೂ ಕೂಡ ಇದು ಸಹಾಯಕಾರಿ
ತೂಕ ನಿಯಂತ್ರಣ ನಿಮಗೆ ತುಂಬಾ ಕಠಿಣ ಅನಿಸಿದರೆ ನೀವು ಹವೀಜ ಟೀ ಮೊರೆ ಹೋಗಬೇಕು. ಇದು ಅನಗತ್ಯ ಹಸಿವಿನಂತ ಬಯಕೆಯಗಳನ್ನು ನಿಯಂತ್ರಿಸುತ್ತದೆ. ನಿರಂತರ ಹವೀಜ ಪುಡಿಯಿಂದ ತಯಾರಾಗುವ ಟೀಯನ್ನು ಸೇವಿಸುವುದರಿಂದ ನಮ್ಮ ಚಯಾಪಚಯ ಕ್ರಿಯೆಯಲ್ಲಿಯೂ ಸುಧಾರಣೆ ಕಂಡು ಬಂದು ತೂಕ ನಿರ್ವಹಣೆಗೆ ಅನುಕೂಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ