/newsfirstlive-kannada/media/post_attachments/wp-content/uploads/2025/02/Warren-Buffett-1.jpg)
ವಾರೆನ್ ಬಫೆಟ್ ಯಾರಿಗೆ ಗೊತ್ತಿಲ್ಲ. ಅಮೆರಿಕಾದ ದೊಡ್ಡ ಹೂಡಿಕೆದಾರ, ಬಿಲಿಯೇನಿಯರ್, ಪರೋಪಕಾರಿ, ಸದ್ಯದ ಬರ್ಕ್ಶೈರ್ ಹಾಥ್ವೇನ ಸಿಇಒ. 94 ವರ್ಷಷದ ವಾರೆನ್ ಬಫೆಟ್ ಇಂದಿಗೂ ಕೂಡ ಫಿಟ್ ಆ್ಯಂಡ್ ಫೈನ್ ಆಗಿ ಇದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಕೂಡ ತುಂಬಾ ಚಟುವಟಿಕೆಯಿಂದ ಓಡಾಡುತ್ತಾರೆ. ಅವರ ಲೈಫ್ಸ್ಟೈಲ್ ಅವರಿಗೆ ಈ ಒಂದು ಚೈತನ್ಯವನ್ನು ತಂದುಕೊಟ್ಟಿದೆ. ಅವರಿಗಿರುವ ಕೆಲವು ಅಭ್ಯಾಸಗಳು ಅವರನ್ನು ಫಿಟ್ ಆ್ಯಂಡ್ ಫೈನ್ ಆಗಿ ಇಟ್ಟಿವೆ
1. ನಿದ್ರೆಗೆ ಬಹಳ ಮಹತ್ವ ಕೊಡುತ್ತಾರೆ.
ನಾವು ಅತಿ ಶ್ರೀಮಂತರಾಗಿ ಬೆಳೆಯಬೇಕಾದರೆ. ಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಬೇಕಾದರೆ ಅಷ್ಟು ಗಂಟೆ ಕೆಲಸ ಮಾಡಬೇಕು ಇಷ್ಟು ಗಂಟೆ ಕೆಲಸ ಮಾಡಬೇಕು, ನಿದ್ರೆ ಊಟ ಮರೆಯಬೇಕು ಎಂಬ ಮಾತುಗಳು ನಾವು ಈಗ ಕೇಳುತ್ತಲೇ ಇದ್ದೇವೆ. ಅಂತಹ ಮಾತುಗಳೆಲ್ಲಾ ವಿವಾದಕ್ಕೆ ಸಿಲುಕತ್ತಲೂ ಇವೆ. ಆದ್ರೆ ವಾರೆನ್ ಬಫೆಟ್ ತಮ್ಮ ನಿದ್ರೆಯ ವಿಚಾರದಲ್ಲಿ ಎಲ್ಲಿಯೂ ಕೂಡ ರಾಜಿಯಾಗುವುದಿಲ್ಲ ನಿತ್ಯ ಬರೋಬ್ಬರಿ 8 ಗಂಟೆಗಳ ಕಾಲ ಅವರು ನಿದ್ರಿಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಮುಖ್ಯ ಎಂದು ಖುದ್ದು ಅವರೇ ಹೇಳುತ್ತಾರೆ. ಇದರಿಂದ ಭಾವನೆಗಳ ನಿಯಂತ್ರಣ ಹಾಗೂ ಒತ್ತಡ ನಿವಾರಣೆ ಸಾಧ್ಯ ಎಂದು ಹೇಳುತ್ತಾರೆ.
ಇದನ್ನೂ ಓದಿ:ವೈಯಕ್ತಿಕ ಬದುಕು ಮತ್ತು ವೃತ್ತಿ ಜೀವನದ ನಡುವೆ ಒದ್ದಾಡುತ್ತಿದ್ದೀರಾ? 8+8+8 ನಿಯಮವನ್ನು ಪಾಲಿಸಿ
2. ಮೆದುಳಿಗೆ ಬೂಸ್ಟ್ ನೀಡುವ ಕೆಲಸದಲ್ಲಿ ತೊಡಗುವುದು
ವಾರೆನ್ ಬಫೆಟ್ ವಾರದಲ್ಲಿ ಒಂದು ದಿನ ಕಾರ್ಡ್ಸ್ ಆಡುತ್ತಾರೆ. ಇದರಿಂದ ಮೆದುಳಿಗೆ ಚುರುಕತನ ಬಂದು ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ಅದು ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಈ ಒಂದು ಆಟವನ್ನು ಆಡಬೇಕು ಆದ್ರೆ ಅದು ಗೀಳಾಗಿ ಪರಿಣಮಿಸಬಾರದು ಎಂದು ಬಫೆಟ್ ಹೇಳುತ್ತಾರೆ.
3. ನಿತ್ಯ ಐದು ಕ್ಯಾನ್ ಕೋಕ್ ಕುಡಿಯುತ್ತಾರೆ
ವಾರೆನ್ ಬಫೆಟ್ ಕೋಕ್ ಪ್ರಿಯರು. ನಿತ್ಯ ಕನಿಷ್ಠ ಅಂದರೂ ಐದು ಕೋಕ್ಗಳನ್ನು ಕುಡಿಯುತ್ತಾರೆ. 1985ರಲ್ಲಿ ಚೆರಿಽ ಕೋಕ್ ಪರಿಚಯವಾದಾಗಿನಿಂದಲೂ ಅವರಿಗೆ ಈ ಒಂದು ಅಭ್ಯಾಸವಿದೆ. ಇತ್ತೀಚಿನ ಹಲವು ದಶಕಗಳಿಂದ ಅವರು ಕೋಕ್ನಿಂದ ಪೆಪ್ಸಿಗೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
4. ನಿತ್ಯ ವೇಳಾಪಟ್ಟಿಯಲ್ಲಿ ಫ್ರಿಯಾಗಿಯೂ ಇರುತ್ತಾರೆ.
ಒಂದು ಕಂಪನಿಯ ಸಿಎಒ ಕಾರ್ಯವೆಂದರೆ ಅದು ಒಂದು ಸಾಮಾನ್ಯ ಹುದ್ದೆಯಲ್ಲ. ನೂರೆಂಟು ಕೆಲಸಗಳಿರುತ್ತವೆ. ಬಿಡುವಿಲ್ಲದ ಕಮಿಟ್ಮೆಂಟ್ಗಳು ಇರುತ್ತವೆ. ಇವುಗಳ ಮಧ್ಯೆ ನಮಗಾಗಿ ಸಮಯ ಕೊಡುವುದು ಕಷ್ಟ. ಆದ್ರೆ ಬಫೆಟ್ ಈ ವಿಷಯದಲ್ಲಿ ತುಂಬಾ ವಿಭಿನ್ನ. ತಮಗಾಗಿ ಅಂತ ಕ್ಯಾಲೆಂಡರ್ನಲ್ಲಿ ಒಂದಿಷ್ಟು ದಿನಗಳನ್ನು ಕಾಯ್ದಿಟ್ಟುಕೊಳ್ಳುತ್ತಾರೆ ಆ ದಿನ ಅವರು ತುಂಬಾ ಸಂತೋಷದಂದ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಾರೆ. ಅವತ್ತೊಂದು ದಿನ ತಮ್ಮಿಚ್ಛೆಯಂತೆ ದಿನವನ್ನು ಕಳೆಯುತ್ತಾರೆ.
ಇದನ್ನೂ ಓದಿ:ಸಾದಾ ಸೀದಾ ಹಳ್ಳಿ ಹೈದನಿಗೆ ಅದೆಂಥ ಕ್ರೇಜು.. ಹೇಗಿದ್ದ, ಹೇಗಾದ ಗೊತ್ತಾ ಹುನುಮ..?
5 ಪುಸ್ತಕ ಓದುವುದನ್ನು ಪ್ರೀತಿಸುತ್ತಾರೆ
ಪುಸ್ತಕಗಳು ನಮ್ಮ ನಿಜವಾದ ಗೆಳೆಯರು ಅಂತ ಅನೇಕ ತತ್ವಜ್ಞಾನಿಗಳು ಹೇಳಿದ್ದಾರೆ. ಅದನ್ನು ಬಫೆಟ್ ತಪ್ಪದೇ ಪಾಲಿಸುತ್ತಾರೆ. ಅವರು ನಿತ್ಯ ಐದರಿಂದ ಆರು ಗಂಟೆಗಳ ಕಾಲ ಓದಿನಲ್ಲಿ ಮುಳುಗಿರುತ್ತಾರೆ. ಅದರಲ್ಲೂ ಬ್ಯುಸಿನೆಸ್ ಹಾಗೂ ಹೂಡಿಕೆ ಟಾಪಿಕ್ ಬಗ್ಗೆಯ ಪುಸ್ತಕಗಳು ಅಂದ್ರೆ ಅವರಿಗೆ ಬಹಳವಿಷ್ಟ. ಇಂತಹ ಪುಸ್ತಕಗಳನ್ನು ಅವರು ನಿತ್ಯವೂ ತಪ್ಪದೇ ಓದುತ್ತಾರೆ. ಓದುವುದು ಅರಿವಿನ ಕೊರತೆಯನ್ನು ನೀಗಿಸುವ ಸಾಧನ ಎಂದು ಬಫೆಟ್ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ