/newsfirstlive-kannada/media/post_attachments/wp-content/uploads/2024/12/MAHAKUMBHAMELA-1.jpg)
ಮಹಾಕುಂಭಮೇಳದ ಸಮಯದಲ್ಲಿ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಮಿಂದೆಳುವುದೇ ಒಂದು ಬಹುದೊಡ್ಡ ಆಧ್ಯಾತ್ಮಿಕ ಕಾರ್ಯದಲ್ಲಿ ಭಾಗಿಯಾದ ಪುಣ್ಯ. ಸದ್ಯ ಅಮೃತ ಸ್ನಾನದ ದಿನವನ್ನು ಮಹಾಕುಂಭಮೇಳದಲ್ಲಿ ಜನವರಿ 29 ರಂದು ನಡೆಸಲಾಗುವುದು. ದಿನಕ್ಕಿಂತ ಅಂದು ಅತಿಹೆಚ್ಚು ಭಕ್ತರು ತ್ರಿವೇಣಿ ಸಂಗಮಕ್ಕೆಹರಿದು ಬರುವ ನಿರೀಕ್ಷೆಯಿದೆ. ಅಂದು ಮೌನಿ ಅಮವಾಸ್ಯೆ ಇರುವುದರಿಂದ, ಮೌನಿ ಅಮವಾಸ್ಯೆಯಂದು ಗಂಗೆಯಲ್ಲಿ ಮಿಂದೆದ್ದರೆ ಅತಿಯಾದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಗಳು ಪುರಾಣಕಾಲದಿಂದಲೂ ಕೂಡ ಇವೆ.
ಇದನ್ನೂ ಓದಿ:ಗಂಗಾ ಸ್ನಾನದಿಂದ ಬಡತನಕ್ಕೆ ಮುಕ್ತಿ ಸಿಗಲ್ಲ ಎಂದ ಖರ್ಗೆ; ಬಿಜೆಪಿ ನಾಯಕರು ನಿಗಿನಿಗಿ ಕೆಂಡ..!
ಅಮೃತಸ್ನಾನಕ್ಕೆ ಆಧ್ಯಾತ್ಮದಲ್ಲಿ ಅನೇಕ ರೀತಿಯ ಮಹತ್ವಗಳಿವೆ. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನ ಕೈಗೊಂಡವರು ತಪ್ಪದೇ ಈ ಒಂದಿಷ್ಟು ಕಾರ್ಯಗಳನ್ನು ಮಾಡಿಕೊಂಡು ಅಮೃತಸ್ನಾನದ ಲಾಭ ಪಡೆಯಬೇಕು ಎಂದು ಹೇಳಲಾಗುತ್ತದೆ.
1. ಪೂರ್ವಜರನ್ನು ಗೌರವಿಸಿ: ಮೌನಿ ಅಮವಾಸ್ಯೆಯ ದಿನ ನಮ್ಮ ಪೂರ್ವಜರು ಭೂಮಿಗೆ ಇಳಿದು ಬರುತ್ತಾರೆ ಎಂಬ ನಂಬಿಕೆ ಇದೆ. ನೀವು ಅಮೃತಸ್ನಾನ ಮುಗಿಸಿದ ನಂತರ ನಿಮ್ಮ ಪೂರ್ವಜರಿಗೆ ತರ್ಪಣ ನೀಡುವುದನ್ನು ಮರೆಯಬೇಡಿ. ತ್ರಿವೇಣಿ ಸಂಗಮದ ಪವಿತ್ರ ನೀರನ್ನು ತೆಗೆದುಕೊಂಡು ಪೂರ್ವಜರಿಗೆ ಅರ್ಘ್ಯವನ್ನು ಬಿಡುವುದನ್ನು ಮರೆಯಬೇಡಿ. ಇದರಿಂದ ನಿಮಗೆ ನಿಮ್ಮ ಪೂರ್ವಜರ ಗೌರವ ಸಿಗುತ್ತದೆ.
ಇದನ್ನೂ ಓದಿ: 10 ದಿನಕ್ಕೆ ₹10 ಕೋಟಿ ಗಳಿಸಿದ್ರಾ ಮಹಾಕುಂಭಮೇಳದ ಮೊನಾಲಿಸಾ? ಏನಿದರ ಅಸಲಿಯತ್ತು?
2. ಶಿವ ಹಾಗೂ ವಿಷ್ಣುವನ್ನು ಪೂಜಿಸಿ: ಗಂಗಾ, ಯಮುನಾ ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡಿ ಮೇಲೆದ್ದು ಬಂದ ಬಳಿಕ ಭಗವಾನ್ ಶಿವ ಹಾಗೂ ವಿಷ್ಣುವನ್ನು ಪ್ರಾರ್ಥಿಸಿ. ಸಾಧ್ಯವಾದಷ್ಟು ವಿಷ್ಣು ಸಹಸ್ರನಾಮ, ಶಿವತಾಂಡವಗಳನ್ನು ಪಠಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
3. ಸ್ನಾನದ ಬಳಿಕ ದಾನವನ್ನು ಮಾಡಿ: ಇನ್ನು ಪವಿತ್ರ ಸ್ನಾನವಾದ ಬಳಿಕ ಇಲ್ಲದವರಿಗೆ, ಬಡವರಿಗೆ, ಭಿಕ್ಷುಕರಿಗೆ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಮಾಡಿ. ಅದರಲ್ಲೂ ಮೌನಿ ಅಮವಾಸ್ಯೆಯಂದು ದೀನರಿಗೆ ದಾನ ಮಾಡುವುದು ತುಂಬಾ ಶ್ರೇಷ್ಠ ಕಾರ್ಯ. ಊಟವಿರಬಹುದು, ಉಡುಗೆ ಇರಬಹುದು, ನೀರು ಇರಬಹುದು ಇಲ್ಲವೇ ಹಣವು ಇರಬಹುದು ಏನಾದರೂ ಒಂದು ದಾನವನ್ನು ಮಾಡಿ ದೇವರಿಗೆ ಕೈಮುಗಿದು ಬನ್ನಿ ಇದಿರಂದ ಆಧ್ಯಾತ್ಮಿಕ ಲಾಭಗಳು ಬಹಳಷ್ಟು ಲಭಿಸಲಿವೆ.
4. ಪವಿತ್ರ ಕ್ಷೇತ್ರಗಳಿಗೆ ಭೇಟಿ: ಇನ್ನು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪೂರ್ವಜರಿಗೆ ತರ್ಪಣ ಬಿಟ್ಟು, ದೇವರನ್ನು ನೆನೆದು ಕೊಂಚ ದಾನ ಧರ್ಮಗಳನ್ನು ಮಾಡಿದ ಮೇಲೆ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ. ಅದರಲ್ಲೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ ಪ್ರಯಾಗರಾಜ್ನಲ್ಲಿರುವ ಸಿದ್ಧಾ ಮಂದಿರಕ್ಕೆ ಭೇಟಿ ನೀಡುವುದು ಹಾಗೂ ಅಲ್ಲಿಯ ಪ್ರಸಾದವನ್ನು ಸ್ವೀಕರಿಸುವುದು ತುಂಬಾ ಪುಣ್ಯದಾಯಕ ಎಂದು ಹೇಳಲಾಗುತ್ತದೆ.
5. ಋಣಾತ್ಮಕ ಕಾರ್ಯಗಳಿಂದ ದೂರವಿರಿ: ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಮನಸ್ಸನ್ನು ಸದಾಕಾಲಕ್ಕೆ ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿ. ಯಾರ ಮನಸ್ಸನ್ನು ನೋವಿಸದಂತೆ, ಅಸಹ್ಯ ಎನಿಸುವ ನಡುವಳಿಕೆಗಳು, ಋಣಾತ್ಮಕ ಚಿಂತನೆಗಳು, ಇವುಗಳಿಂದ ದೂರವಿರಿ. ಸಾಧ್ಯವಾದಷ್ಟು ಮೌನದಿಂದ ಇರಲು ಕಲಿಯಿರಿ. ಮೌನಿ ಅಮವಾಸ್ಯೆಯಂದು ಮೌನವ್ರತ ಪಾಲಿಸುವುದರಿಂದ ತುಂಬ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ