/newsfirstlive-kannada/media/post_attachments/wp-content/uploads/2025/06/tiger.jpg)
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯದಲ್ಲಿ ಏಕಾಏಕಿ 5 ಹುಲಿಗಳ ಕಳೆಬರ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಕೊನೆಗೂ ಹುಲಿ ಸಾವಿನ ಹಿಂದಿರು ಕೈ ಯಾರದ್ದು ಅಂತ ಪತ್ತೆ ಹಚ್ಚಿದ್ದಾರೆ. ಹೌದು, ಹಸುವನ್ನ ಹುಲಿ ಬೇಟೆಯಾಡಿದ್ದೆ 5 ಹುಲಿ ಸಾವಿಗೆ ಮೂಲ ಕಾರಣ. ಕೊನೆಗೂ ಹುಲಿ ಕೊಂದವನನ್ನ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS
ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಕುಟುಂಬ ಹಸುಗಳನ್ನ ಮೇಯಲು ಕಾಡಿಗೆ ಬಿಟ್ಟಿದ್ದ. ಈ ವೇಳೆ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ತನ್ನ ಹಸುಗಳ ಮೇಲೆ ಹುಲಿ ದಾಳಿ ಮಾಡಿದೆ ಎಂದು ಕೋಪಗೊಂಡ ಶಿವಣ್ಣ ಮೃತದೇಹದ ಮೇಲೆ ವಿಷ ಸಿಂಪಡಣೆ ಮಾಡಿದ್ದಾನೆ. ಇದಾದ ಬಳಿಕ ಮೃತ ಹಸುವಿನ ಮೇಲಿದ್ದ ವಿಷ ಪೂರಿತ ಮಾಂಸ ತಿಂದು 5 ಹುಲಿಗಳು ಮೃತಪಟ್ಟಿವೆ. ಈ ಬಗ್ಗೆ ಇನ್ನೂ ಅರಣ್ಯಾಧಿಕಾರಿಗಳು ಅಧಿಕೃತವಾಗಿ ಮಾಹಿತಿ ಬಹಿರಂಗಪಡಿಸಿಲ್ಲ. ಸದ್ಯದಲ್ಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಸದ್ಯ ತಂದೆಯನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆಯುತ್ತಿದಂತೆ ಮಗ ಎಸ್ಕೇಪ್ ಆಗಿದ್ದಾನೆ. ಈಗ ಅಧಿಕಾರಿಗಳು ಗಾಜನೂರು ಗ್ರಾಮದ ಅರಣ್ಯ ಇಲಾಖೆ ವಿಶ್ರಾಂತಿ ಕೊಠಡಿಯಲ್ಲಿ ಶಿವಣ್ಣ ಜೊತೆ ಅದೇ ಗ್ರಾಮದ ಮತ್ತೈದು ಆರೋಪಿಯನ್ನು ಇರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ