Advertisment

ಪದೇ ಪದೇ ತೂಕ ನೋಡಿಕೊಳ್ಳುವ ಹುಚ್ಚು ಇದೆಯಾ? ಈ ಐದು ಸಮಯದಲ್ಲಿ ಮಾತ್ರ ವೇಟ್ ಚೆಕ್ ಮಾಡಿಕೊಳ್ಳಬೇಡಿ

author-image
Gopal Kulkarni
Updated On
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಕ್ಯಾರೆಟ್; ಪ್ರತಿದಿನ ಈ ತರಕಾರಿ ತಿನ್ನುವುದರಿಂದ ಇವೆ 8 ಆರೋಗ್ಯಕರ ಲಾಭಗಳು
Advertisment
  • ನಿಮ್ಮ ದೇಹದ ತೂಕ ಸರಿಯಾಗಿ ತಿಳಿದುಕೊಳ್ಳಲು ಈ ನಿಯಮಗಳನ್ನು ಪಾಲಿಸಿ
  • ಯಾವೆಲ್ಲಾ ಸಮಯದಲ್ಲಿ ನೀವು ನಿಮ್ಮ ತೂಕವನ್ನು ನೋಡಬಾರದು ಗೊತ್ತಾ?
  • ಊಟವಾದ ಕೂಡಲೇ ವೇಟ್ ಚೆಕ್ ಮಾಡಬಾರದು ಯಾಕೆ ಅಂತ ಗೊತ್ತಾ?

ಎತ್ತರಕ್ಕೆ ತಕ್ಕ ತೂಕ, ತೂಕಕ್ಕೆ ತಕ್ಕ ಎತ್ತರ ಇದನ್ನು ನಾವು ಸದಾ ಕಾಯ್ದುಕೊಂಡು ಹೋಗಬೇಕು. ಆರೋಗ್ಯ ದೃಷ್ಟಿಯಿಂದ ಹೆಚ್ಚಾದ ತೂಕವೂ ಅಪಾಯ, ತೂಕ ಅತಿಯಾಗಿ ಇಳಿದರೂ ಕೂಡ ಅಪಾಯ. ಹೀಗಾಗಿ ನಾವು ಒಂದು ಸಮತೋlನದಲ್ಲಿ ನಮ್ಮ ತೂಕವನ್ನು ಕಾಯ್ದುಕೊಂಡು ಹೋಗಬೇಕು ಆಗ ಮಾತ್ರ ನಾವು ಫಿಟ್ ಆಗಿರೋಕೆ ಸಾಧ್ಯ. ತೂಕ ಏರಿಸಲು ಇಳಿಸಲು ಎರಡಕ್ಕೂ ನಾವು ಜಿಮ್ ಅನ್ನೋ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ವಾಕಿಂಗ್, ಜಾಗಿಂಗ್​ನಂತಹ ಕಸರತ್ತನ್ನು ಮಾಡುತ್ತೇವೆ. ಸರಿಯಾದ ಆಹಾರ ಪದ್ಧತಿಯನ್ನು ನಮ್ಮದು ಮಾಡಿಕೊಳ್ಳುವುದರ ಮೂಲಕ ತೂಕವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುತ್ತೇವೆ.

Advertisment

ಇದನ್ನೂ ಓದಿ:AC ಬಳಕೆ ಹೆಚ್ಚಾದ್ರೆ ಎಷ್ಟು ಅಪಾಯ? ತಜ್ಞರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ

ಹೀಗೆ ತೂಕ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸ್ಪರ್ಧೆಗೆ ಬಿದ್ದವರಲ್ಲಿ ಒಂದು ಹುಚ್ಚು ಇರುತ್ತೆ. ಎಲ್ಲಿಯೇ ತೂಕದ ಮಷಿನ್ ಕಂಡರೂ ಅಲ್ಲಿ ಕ್ವಾಯಿನ್ ಹಾಕಿ ತೂಕ ಚೆಕ್ ಮಾಡಿಬಿಡೋದು. ಹೆಚ್ಚಾಯ್ತಾ ಕಡಿಮೆ ಆಯ್ತಾ ಅಂತ ತಿಳಿದುಕೊಂಡು ಚಿಂತೆಗೆ ಬೀಳೋದು. ಆದ್ರೆ ನೆನಪಿರಲಿ. ನಿಮ್ಮ ತೂಕವನ್ನು ಪರೀಕ್ಷಿಸಲು ಕೂಡ ಕೆಲವು ನಿಯಮಗಳಿವೆ. ಆ ಸಮಯದಲ್ಲಿ ಮಾತ್ರ ನೀವು ನಿಮ್ಮ ತೂಕವನ್ನು ನೋಡಿಕೊಂಡಾಗ ಮಾತ್ರ ಸರಿಯಾದ ತೂಕವನ್ನು ಅದು ತಿಳಿಸುತ್ತದೆ. ಯಾವ ಯಾವ ಸಮಯಲ್ಲಿ ನೀವು ನಿಮ್ಮ ತೂಕವನ್ನು ನೋಡಕೊಳ್ಳಬಾರದು ಅನ್ನೋದಕ್ಕೂ ಕೂಡ ಒಂದಿಷ್ಟು ಟಿಪ್ಸ್​ ಇಲ್ಲಿವೆ

publive-image

1 ಊಟ ಮಾಡಿದ ತಕ್ಷಣ ತೂಕವನ್ನು ನೋಡಿಕೊಳ್ಳಬಾರದು: ನೀವು ಊಟ ಮಾಡಿದ ತಕ್ಷಣ ತೂಕವನ್ನು ನೋಡಿಕೊಳ್ಳುವುದರಿಂದ ನಿಮಗೆ ನಿಮ್ಮ ಸರಿಯಾದ ತೂಕ ಎಷ್ಟಿದೆ ಎಂದು ಗೊತ್ತಾಗುವುದಿಲ್ಲ. ಊಟ ಮಾಡಿದಾಗ ಹೊಟ್ಟೆಯಲ್ಲಿ ನೀವು ಸೇವಿಸಿರುವ ಆಹಾರ ಇನ್ನೂ ಜೀರ್ಣವಾಗುತ್ತಿರುತ್ತದೆ. ಅಲ್ಲದೇ ನೀರನ್ನು ಸಾಕಷ್ಟು ಪ್ರಮಾಣ ಕುಡಿದಿರುವುದರಿಂದ, ಆಹಾರ ಮತ್ತು ನೀರು ಇನ್ನೂ ಜೀರ್ಣ ಪ್ರಕ್ರಿಯೆಯಲ್ಲಿಯೇ ಇರುತ್ತವೆ. ಈ ವೇಳೆ ನೀವು ತೂಕವನ್ನು ಪರೀಕ್ಷಿಸಿದ್ರೆ ಅದು ನಿಮ್ಮನ್ನು ದಾರಿ ತಪ್ಪಿಸುತ್ತದೆ. ನಿಮಗೆ ದೇಹದ ತೂಕ ಎಷ್ಟು ಇದೆ ಎಂದು ಸರಿಯಾದ ಒಂದು ಲೆಕ್ಕ ಸಿಗುವುದಿಲ್ಲ.

Advertisment

ಇದನ್ನೂ ಓದಿ:ಆಲಿಯಾ ಭಟ್​​ಗೆ ಇದ್ಯಾ ಈ ಮನೋರೋಗ? ಮದುವೆಯ ವೇಳೆ ಮೇಕಪ್​ ಮ್ಯಾನ್​ಗೆ ಬಿಗ್​ ಶಾಕ್​!

publive-image

2 ರಾತ್ರಿ ಸರಿಯಾಗಿ ನಿದ್ದೆ ಮಾಡದ ದಿನ: ಇನ್ನೂ ರಾತ್ರಿ ಸರಿಯಾಗಿ ನಿದ್ದೆ ಮಾಡದ ದಿನ ನೀವು ತೂಕವನ್ನು ಪರೀಕ್ಷಿಸಿಕೊಳ್ಳಬೇಡಿ ಹಾರ್ಮೋನಲ್ ಅಸಮತೋಲನಗಳು ಸರಿಯಾಗಿ ನಿದ್ದೆ ಮಾಡದಿದ್ದಾಗ ಉಂಟಾಗಿರುತ್ತದೆ. ಹೀಗಾಗಿ ತೂಕದಲ್ಲಿ ಏರಿಳಿತಗಳು ಕಾಣುವುದು ಸಾಮಾನ್ಯ. ನೀವು ಸರಿಯಾಗಿ ನಿದ್ದೆ ಮಾಡದ ಮಾರನೇ ದಿನ ತೂಕ ಚೆಕ್ ಮಾಡಿದ್ದಲ್ಲಿ ತೂಕದಲ್ಲಿ ಏರಿಕೆಯಾಗಿದ್ದು ಕಾಣುತ್ತದೆ. ರಾತ್ರಿ ಹೆಚ್ಚು ನೀರು ಕುಡಿದಿರುವುದರಿಂದ ಹಸಿವಿನಂತಹ ಬಯಕೆಗಳು ಹುಟ್ಟಿರುವುದರಿಂದ ತೂಕದಲ್ಲಿ ಏರುಪೇರಾಗಿರುವ ಸಾಧ್ಯತೆ ಇರುತ್ತದೆ ಹೀಗಾಗಿ ಕಡಿಮೆ ನಿದ್ದೆ ಮಾಡಿದಾಗ ತೂಕವನ್ನು ನೋಡಿಕೊಳ್ಳಬಾರದು.

publive-image3 ಕಸರತ್ತು ಮಾಡಿದ ಕೆಲವೇ ಕ್ಷಣಗಳಲ್ಲಿ : ಇನ್ನೂ ವ್ಯಾಯಾಮ ಮಾಡಿ ಕೆಲವೇ ಕ್ಷಣಗಳಲ್ಲಿ ತೂಕ ನೋಡಿಕೊಳ್ಳುವುದು ಕೂಡ ತಪ್ಪು . ನೀವು ವ್ಯಾಯಾಮ ಮಾಡಿದಾಗ ದೇಹದ ಸ್ನಾಯುಗಳು ತಾತ್ಕಾಲಿಕವಾಗಿ ಉಬ್ಬಿಕೊಂಡಿರುತ್ತವೆ. ಅದು ಅಲ್ಲದೇ ವ್ಯಾಯಾಮ ಮಾಡಿದಾಗ ಹೆಚ್ಚು ಹೆಚ್ಚು ನೀರು ಕುಡಿದಿರುವುದರಿಂದ ಹೊಟ್ಟೆಯಲ್ಲಿ ಇನ್ನೂ ನೀರು ತುಂಬಿಕೊಂಡಿರುತ್ತದೆ. ಹೀಗಾಗಿ ನಿಮಗೆ ನಿಮ್ಮ ತೂಕದ ಸ್ಪಷ್ಟ ಅಂಕಿ ಅಂಶಗಳು ಗೊತ್ತಾಗುವುದಿಲ್ಲ.

Advertisment

4 ಋತುಮತಿಯರಾದ ಸಮಯದಲ್ಲಿ : ಹೆಣ್ಣು ಮಕ್ಕಳು ಋತುಮತಿಯರಾದ ಸಮಯದಲ್ಲಿ ತಮ್ಮ ತೂಕದ ಪ್ರಮಾಣವನ್ನು ನೋಡಿಕೊಳ್ಳುವುದರಿಂದ ಸರಿಯಾದ ದೇಹದ ತೂಕ ಗೊತ್ತಾಗುವುದಿಲ್ಲ. ಋತುಚಕ್ರದಿಂದಾಗಿ ಹಾಗೂ ಹಲವು ಕಾರಣಗಳಿಂದಾಗಿ ಈ ವೇಳೆ ನೀವು ತೂಕ ನೋಡಿಕೊಂಡಾಗ ತೂಕದಲ್ಲಿ ಹೆಚ್ಚಳವಾಗಿದ್ದು ಕಾಣಸಿಗುತ್ತದೆ. ಹೀಗಾಗಿ ಈ ಸಮಯದಲ್ಲಿ ನೀವು ತೂಕವನ್ನು ನೋಡಿಕೊಳ್ಳುವುದರಿಂದ ನಿಮಗೆ ನಿಮ್ಮ ಸರಿಯಾದ ತೂಕದ ಪ್ರಮಾಣ ಸಿಗುವುದಿಲ್ಲ.

ಇದನ್ನೂ ಓದಿ:ಮೈಸೂರು ಪಾಕ್​ ಗೊತ್ತಿದೆ .. ಮೋತಿ ಪಾಕ್​ ಗೊತ್ತಿದ್ಯಾ? ಮನೆಯಲ್ಲೇ ಮಾಡಬಹುದು ಕಣ್ರಿ

5 ರಾತ್ರಿ ತಡವಾಗಿ ಊಟ ಮಾಡಿದಾಗ ಬೆಳಗ್ಗೆ ನೋಡಿಕೊಳ್ಳುವ ತೂಕ; ಒಮ್ಮೊಮ್ಮೆ ಅನಿವಾರ್ಯವಾಗಿ ರಾತ್ರಿ ಊಟವನ್ನು ತಡವಾಗಿ ಮಾಡಬೇಕಾದ ಪ್ರಸಂಗ ಬರುತ್ತದೆ. ಇಂತಹ ಸಮಯದಲ್ಲಿ ಬೆಳಗ್ಗೆ ಎದ್ದು ನೀವು ತೂಕ ನೋಡಿಕೊಂಡಾಗ ಸಹಜವಾಗಿ ಅದು ಹೆಚ್ಚು ತೋರಿಸುತ್ತದೆ. ಕಾರಣ, ರಾತ್ರಿ ಲೇಟಾಗಿ ಮಾಡಿದ ಊಟ ಇನ್ನೂ ಸಂಪೂರ್ಣವಾಗಿ ಜೀರ್ಣವಾಗಿರುವುದಿಲ್ಲ. ಹೀಗಾಗಿ ಈ ಐದು ಸಮಯ ಬಿಟ್ಟು ಉಳಿದ ಸಮಯದಲ್ಲಿ ಅಂದ್ರೆ ನೀವು ಸರಿಯಾಗಿ ನಿದ್ದೆ ಮಾಡಿ ಎದ್ದ ದಿನ. ಊಟ ಮಾಡಿದ ಮೇಲೆ ಅದು ಸಂಪೂರ್ಣವಾಗಿ ಜೀರ್ಣಗೊಂಡ ಸಮಯದಲ್ಲಿ ನಿಮ್ಮ ತೂಕವನ್ನು ಚೆಕ್ ಮಾಡಿಕೊಂಡಲ್ಲಿ ಸರಿಯಾದ ತೂಕವನ್ನು ನೀವು ಕಾಣಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment