/newsfirstlive-kannada/media/post_attachments/wp-content/uploads/2024/12/DIVORCE-1.jpg)
ದೇಶದಲ್ಲಿ ಇತ್ತೀಚೆಗೆ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್ಥಿಕವಾಗಿ ಸಬಲ ಹಾಗೂ ಸ್ವಾತಂತ್ರ್ಯ ಹುಟ್ಟಿರುವುದು. ಆಧುನಿಕ ಕಾಲದ ಜೀವನ ಪದ್ಧತಿ ಹೀಗೆ ಹತ್ತು ಹಲವು ಕಾರಣಗಳಿಂದ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಷ್ಟವೋ ನಷ್ಟವೋ, ಸುಖವೋ ದುಃಖವೋ ದಾಂಪತ್ಯ ಎನ್ನುವುದು ಏಳು ಜನ್ಮದ ಸಂಬಂಧ ಎನ್ನುವ ಆದರ್ಶಗಳೆಲ್ಲಾ ಈಗ ಕಟ್ಟುಪಾಡುಗಳಂತೆ, ಡಂಬಾಚಾರದಂತೆ ಈ ತಲೆಮಾರಿಗೆ ಕಾಣತ್ತಿದೆ. ಹೊಸ ಚಿಗುರು ಚಿಗುರಿದಂತೆಲ್ಲಾ ಹಳೆ ಬೇರು ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಮಯವಿದು. ಹೀಗಾಗಿ ಪಾಶ್ಚಾತ್ಯ ಪದ್ಧತಿಗಳು ಹಾಗೂ ಜೀವನಕ್ರಮದ ವಿಧಾನ ಭಾರತೀಯರ ಮೇಲೆಯೂ ವಿಪರೀತ ಪ್ರಭಾವ ಬೀರಿವೆ.ಕೂಡು ಕುಟುಂಬ ಹಾಗೂ ದೊಡ್ಡ ಕುಟುಂಬಗಳು ಈ ಕಾಲಯ ಯುವಜನತೆಗೆ ಹೆಚ್ಚು ಕಡಿಮೆ ಅಲರ್ಜಿ ಅನಿಸಲು ಶುರುವಾಗಿದೆ.
ಭಾರತದಲ್ಲಿ ಸದ್ಯ ಮದುವೆ ವಿಚ್ಛೇದನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಗತಿಯಲ್ಲಿ ಸಾಗುತ್ತಿವೆ. ಅದರಲ್ಲೂ ಈ 5 ರಾಜ್ಯಗಳಲ್ಲಿ ಡಿವೋರ್ಸ್​ ಅನ್ನೋದು ಹಾಸುಹೊಕ್ಕಾಗಿದೆ.ಅವುಗಳು ಯಾವುವು ಅಂತ ನೋಡುವುದಾದ್ರೆ.
1. ಕೇರಳ
ಅತಿಹೆಚ್ಚು ಸಾಕ್ಷರತೆ ಹೊಂದಿರು ಭಾರತದ ರಾಜ್ಯ ಕೇರಳ, ಅಭಿವೃದ್ಧಿ ಹೊಂದುತ್ತಿರುವ ಸಾಮಾಜಿಕ ಪದ್ಧತಿಗಳು ಇಂದು ಇಲ್ಲಿ ವಿಚ್ಛೇದನ ಪ್ರಕಣಗಳನ್ನು ಹೆಚ್ಚಾಗುವಂತೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಕೇರಳದಲ್ಲಿ ಡಿವೋರ್ಸ್​ ಪ್ರಕರಣಗಳು ಹೆಚ್ಚಾಗಿವೆ,ಅದರಲ್ಲೂ ಈ ರೀತಿಯ ಪ್ರಕರಣಗಳು ವಿದ್ಯಾವಂತ ಜೋಡಿಗಳಲ್ಲಿಯೇ ಹೆಚ್ಚು ಕಂಡು ಬರುತ್ತಿದೆ.
/newsfirstlive-kannada/media/post_attachments/wp-content/uploads/2024/12/DIVORCE.jpg)
2. ಗೋವಾ
ಇನ್ನು ಡಿವೋರ್ಸ್ ಪ್ರಕರಣಗಳು ಅತಿಹೆಚ್ಚಾಗಿ ಕಾಣುತ್ತಿರುವ ಎರಡನೇ ರಾಜ್ಯ ಗೋವಾ. ಗೋವಾವನ್ನು ಅದರ ಉದಾರವಾದ ಹಾಗೂ ಸಮಾಜವಾದದಿಂದಲೇ ಹೆಚ್ಚು ಗುರುತಿಸಲಾಗುತ್ತದೆ. ಇಲ್ಲಿ ನೆಲೆಸುವ ಜನ ಜೀವನದ ಶೈಲಿಯೇ ಬೇರೆಯದ್ದು. ಗೋವಾ ಎಂದರೆ ವಿದೇಶಿ ಪ್ರಭಾವ ಪೋರ್ಚುಗೀಸರ ಕಾಲದಿಂಲೇ ಇದೆ. ಹೀಗಾಗಿ ಈ ರಾಜ್ಯದಲ್ಲಿ ಇತ್ತೀಚೆಗೆ ಡಿವೋರ್ಸ್​ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಇದನ್ನೂ ಓದಿ:60 ಸಾವಿರ ರೂಪಾಯಿಗೆ 9 ದಿನದ ಕಂದಮ್ಮನ್ನು ಮಾರಿದ ನೀಚ; ಬಂದ ಹಣದಲ್ಲಿ ಏನು ಮಾಡಿದ ಗೊತ್ತಾ?
/newsfirstlive-kannada/media/post_attachments/wp-content/uploads/2024/12/DIVORCE-CASES.jpg)
3. ಮಹಾರಾಷ್ಟ್ರ
ಮಹಾರಾಷ್ಟ್ರದ ಮುಂಬೈನಂತಹ ನಗರಗಳಲ್ಲಿ ಡಿವೋರ್ಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿವೇಗದ ಜೀವನ ಶೈಲಿ, ಮುಂದಿನ ಭವಿಷ್ಯದ ಬಗ್ಗೆ ಇರುವ ಕಾಳಜಿ ಹೀಗೆ ಹತ್ತು ಹಲವು ಕಾರಣಗಳಿಂದ ಈ ರಾಜ್ಯ ಪ್ರಮುಖವಾಗಿ ಮುಂಬೈನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ
/newsfirstlive-kannada/media/post_attachments/wp-content/uploads/2024/12/DIVORCE-3.jpg)
4. ಕರ್ನಾಟಕ
ಅತಿಹೆಚ್ಚು ವಿಚ್ಛೇದನಗಳು ಕಾಣುತ್ತಿರುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕವೂ ಕೂಡ ಇದೆ. ಅತಿಹೆಚ್ಚು ಡಿವೋರ್ಸ್ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಈ ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಬದಲಾಗುತ್ತಿರುವ ಸೊಷಿಯಲ್ ಡೈನಾಮಿಕ್ಸ್​ ಪರಿಣಾಮದಿಂದಾಗಿ, ಜೀವನ ಪದ್ಧತಿಗಳಲ್ಲಿ ಆದ್ಯತೆ ಹಾಗೂ ಪ್ರಧಾನ್ಯತೆಗಳು ಬದಲಾಗಿರುವ ಕಾರಣದಿಂದ ಡಿವೋರ್ಸ್​ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ:ಊಟ ಬಡಿಸುವುದು ಲೇಟಾಗಿದ್ದಕ್ಕೆ ಸಿಡಿದ ವರ ಮಾಡಿದ್ದೇನು? ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ವಧು?
5. ದೆಹಲಿ
ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲೂ ಕೂಡ ಬದಲಾಗಿರುವ ಜೀವನ ಪದ್ಧತಿ ಹಾಗೂ ದಂಪತಿಗಳ ನಡುವಿನ ಬಾಂಧವ್ಯದಿಂದಾಗಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us