ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಪರದಾಡುತ್ತಿದ್ದೀರಾ? ಈ ಐದು ತರಕಾರಿ ತಪ್ಪದೇ ಸೇವಿಸಿ

author-image
Gopal Kulkarni
Updated On
ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಪರದಾಡುತ್ತಿದ್ದೀರಾ? ಈ ಐದು ತರಕಾರಿ ತಪ್ಪದೇ ಸೇವಿಸಿ
Advertisment
  • ಸಕ್ಕರೆ ಕಾಯಿಲೆ, ಬಿಪಿ ನಿಯಂತ್ರಿಸಲು ಒದ್ದಾಡುತ್ತಿದ್ದೀರಾ?
  • ಮನೆಯಲ್ಲಿರುವ ತರಕಾರಿಯಲ್ಲಿಯೇ ಇದೆ ಇವಕ್ಕೆ ಮದ್ದು
  • 5 ತರಕಾರಿಗಳನ್ನು ಸೇವಿಸುವುದರಿಂದ ಈ ಕಾಯಿಲೆಗಳು ಮಾಯ

ಒತ್ತಡಗಳ ದುನಿಯಾ ಇದು. ನಿತ್ಯ ಒಂದಿಲ್ಲೊಂದು ಗೋಳಿನಲ್ಲಿಯೇ ಜೀವನ ಸಾಗುತ್ತಲೇ ಇರುತ್ತದೆ. ಇದರ ಪರಿಣಾಮವಾಗಿಯೇ ಸದ್ಯ ಹಲವು ರೋಗಗಳ ಮಾಲೀಕರು ನಾವಾಗುತ್ತಿದ್ದೇವೆ. ಅದರಲ್ಲೂ ಪ್ರಮುಖವಾಗಿ ಭಾರತದಲ್ಲಿ ಅತಿ ಹೆಚ್ಚಾಗಿ ಕಾಡುವ ಕಾಯಿಲೆಗಳು ಅಂದ್ರೆ ಅದು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ(ಬಿಪಿ). ಇವುಗಳ ನಿಯಂತ್ರಣಕ್ಕಾಗಿ ಜನರು ಹರಸಾಹಸಪಡುತ್ತಾರೆ. ಮಾತ್ರೆಗಳಿಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.

ಇದಕ್ಕೆ ಸರಿಯಾದ ಆಹಾರಕ್ರಮ ಇಲ್ಲದೇ ಇರುವುದೇ ಪ್ರಮುಖ ಕಾರಣ. ನಮ್ಮ ಆರೋಗ್ಯದ ಮೇಲೆ ನಾವು ಸೇವಿಸುವಂತ ಆಹಾರ ಮತ್ತು ಮಾಡುವ ನಿತ್ಯ ವ್ಯಾಯಾಮಗಳು ಬಹಳ ಪರಿಣಾಮ ಬೀರುತ್ತವೆ. ಹೀಗಾಗಿ ಈ ಎರಡು ಕಾಯಿಲೆಯನ್ನು ನಾವು ನಿತ್ಯ ಬಳಸುವ ತರಕಾರಿಯಲ್ಲಿಯೇ ಮಣಿಸಬಹುದು. ಈ ಐದು ಪ್ರಮುಖ ತರಕಾರಿಯನ್ನು ನಿತ್ಯ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಹಾಗೂ ಬಿಪಿ ನಿಯಂತ್ರಣಕ್ಕೆ ಬರುತ್ತದೆ.

publive-image

ಹಾಗಲಕಾಯಿ
ಹಾಗಲಕಾಯಿಯಲ್ಲಿ ಚಾರಂಟಿನ್ ಹಾಗೂ ಪಾಲಿಪೆಪ್ಟಿಡ್ ಪಿ ಎಂಬ ವಿರಳವಾದ ಪೋಷಕಾಂಶಗಳು ಇರುತ್ತವೆ. ಈ ಅಂಶಗಳು ನಮ್ಮ ದೇಹದಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿರುತ್ತವೆ. ಈ ಒಂದು ತರಕಾರಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

publive-image

ಪಾಲಕ ಸೊಪ್ಪು
ಪಾಲಕ ಸೊಪ್ಪಿನಲ್ಲಿ ಹೇರಳವಾಗಿ ಮ್ಯಾಗ್ನೇಶಿಯಂ ಹಾಗೂ ಫೈಬರ್ ಅಂಶಗಳು ಇರುತ್ತವೆ. ಇದು ಸಕ್ಕರೆ ಕಾಯಿಲೆಯನ್ನು ಗುಣಪಡಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಇನ್ಸೂಲಿನ್ ಸೆನ್ಸಿಟಿವಿಟಿ ಕಡಿಮೆ ಮಾಡುವುದರಲ್ಲಿ ಪಾಲಕ ಸೊಪ್ಪು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

publive-image

ಬೆಂಡೆಕಾಯಿ
ಬೆಂಡೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶವಿದೆ. ಇದು ರಕ್ತದಲ್ಲಿ ಗ್ಲುಕೋಸ್​ ಬಿಡುಗಡೆಯಾಗುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಸರಳವಾಗಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

publive-image

ಕೋಸುಗಡ್ಡೆ
ಕೋಸುಗಡ್ಡೆಯಲ್ಲಿ ಸಲ್ಫೊರಾಫೆನ್ ಎಂಬ ಅಪರೂಪದ ಅಂಶವಿರುತ್ತದೆ. ಇದನ್ನು ಆ್ಯಂಟಿಕ್ಯಾನ್ಸರ್​ ಅಂಶವೆಂದು ಕೂಡ ಕರೆಯುತ್ತಾರೆ. ಕೋಸುಗಡ್ಡೆಯನ್ನು ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ಇಸ್ಸೂಲಿನ್ ಸೆನ್ಸಿಟಿವಿಟಿಯನ್ನು ಇದು ಕಡಿಮೆ ಮಾಡುತ್ತದೆ. ದಿನದಿಂದ ದಿನಕ್ಕೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ.

publive-image

ಗೆಣಸು (ಸಿಹಿ ಆಲೂಗಡ್ಡೆ)
ಗೆಣಸು ಯಾರಿಗೆ ಪ್ರಿಯವಲ್ಲ ಹೇಳಿ. ಸಿಹಿ ಆಲೂಗಡ್ಡೆಯೆಂದು ಕರೆಸಿಕೊಳ್ಳುವ ಈ ತರಕಾರಿಯಲ್ಲಿ ಗ್ಲಸೆಮಿಕ್ ಇಂಡೆಕ್ಸ್ ಅಂದ್ರೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಂಶ ತೀರ ಅಂದ್ರೆ ತೀರ ಕಡಿಮೆ ಇರುತ್ತದೆ. ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಬಿಡುಗಡೆಯಾಗುವುದು ಕಡಿಮೆಯಾಗಿ ಸಕ್ಕರೆ ಕಾಯಿಲೆಯಿಂದ ನಾವು ದೂರ ಉಳಿಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment