/newsfirstlive-kannada/media/post_attachments/wp-content/uploads/2025/02/KIDNEY-CANCER.jpg)
ಕಿಡ್ನಿ ಕ್ಯಾನ್ಸರ್ ಎಂಬುವುದು ಜಗತ್ತಿನ್ನೇ ಆತಂಕಕ್ಕೀಡು ಮಾಡಿರುವ ಒಂದು ಆರೋಗ್ಯದ ಸಮಸ್ಯೆ. ಕಿಡ್ನಿ ಕ್ಯಾನ್ಸರ್ ಎಂಬುದು ಜಗತ್ತಿನಲ್ಲಿರುವ ವಿವಿಧ ಕ್ಯಾನ್ಸರ್ಗಳಲ್ಲಿ 14ನೇ ಬಗೆಯ ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ಮೂತ್ರಪಿಂಡದಲ್ಲಿ ಕೋಶಗಳು ಅಸಹಜವಾಗಿ ಬೆಳೆಯಲು ಅರಂಭವಾಗುತ್ತವೆಯೋ ಆಗ ನಿಮಗೆ ಕಿಡ್ನಿಯಲ್ಲಿ ಕ್ಯಾನ್ಸರ್ ಕಂಡು ಬರುತ್ತದೆ. ಈ ಅಪಾಯದಿಂದ ಪಾರಾಗಲು ಐದು ಸುಲಭ ಮಾರ್ಗಗಳಿವ.
1. ಧೂಮಪಾನ ಮಾಡುವುದನ್ನು ಬಿಡಿ
ಧೂಮಪಾನ ಮಾಡುವುದರಿಂದ ಕಿಡ್ನಿ ಕ್ಯಾನ್ಸರ್ ಸೃಷ್ಟಿಯಾಗುವ ಅಪಾಯ ಶೇಕಡಾ 39 ರಷ್ಟಿರುತ್ತದೆ. ನಾನ್ ಸ್ಮೂಕರ್ ಅಂದ್ರೆ ಸಿಗರೇಟು ಸೇದದವರಿಗೆ ಹೋಲಿಸಿ ನೋಡಿದರೆ ಸಿಗರೇಟ್ ಸೇದುವವರಲ್ಲಿ ಶೇಕಡಾ 39ರಷ್ಟು ಮೂತ್ರಪಿಂಡದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೀಗಾಗಿ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದಿರಂದ ಕಿಡ್ನಿ ಕ್ಯಾನ್ಸರ್ ಎಂಬ ಅಪಾಯದಿಂದ ಪಾರಾಗಬಹುದು. ಅದು ಮಾತ್ರವಲ್ಲ ಧೂಮಪಾನವನ್ನು ನಿಲ್ಲಿಸುವುದರಿಂದ ನಿಮ್ಮ ಶ್ವಾಸಕೋಶ ಹಾಗೂ ಉಸಿರಾಟದ ಆರೋಗ್ಯಕ್ಕೂ ಕೂಡ ಒಳ್ಳೆಯದು.
2. ದೇಹದ ತೂಕವನ್ನು ಸರಿಯಾಗಿ ನಿರ್ವಹಿಸಿ
ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹೇಳುವ ಪ್ರಕಾರ ಯಾರು ಅಗತ್ಯಕ್ಕಿಂತ ಹೆಚ್ಚಿನ ದೇಹದ ತೂಕ ಹೊಂದಿರುತ್ತಾರೋ ಅವರಲ್ಲಿ ಕಿಡ್ನಿ ಕ್ಯಾನ್ಸರ್ ಉಂಟಾಗುವ ಸಂಭಾವ್ಯತೆ ಹೆಚ್ಚು ಇರುತ್ತದೆಯಂತೆ. ಹೆಚ್ಚಿನ ದೇಹ ತೂಕ ದೇಹದಲ್ಲಿ ಹಾರ್ಮೋನ್ಸ್ಗಳನ್ನು ಬದಲಾಯಿಸುತ್ತವೆ. ಇದು ಆರ್ಸಿಸಿ ಅಂದ್ರೆ ರೆನಲ್ ಸೆಲ್ ಸರ್ಕಿನೊಮಾ ಹೆಚ್ಚಾಗುವ ಅಪಾಯವನ್ನು ತಂದಿಡುತ್ತದೆ ಇದರಿಂದಾಗಿ ಕಿಡ್ನಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಯ ಕೇಂದ್ರ ಹೇಳಿದೆ. ಹೀಗಾಗಿ ದೇಹದ ತೂಕ ಹೆಚ್ಚಾಗದಂತೆ ನಿತ್ಯ ವ್ಯಾಯಾಮ, ಸರಿಯಾದ ಆಹಾರ ಕ್ರಮವನ್ನು ನಿಮ್ಮದಾಗಿಸಿಕೊಳ್ಳುವುದು ಒಳ್ಳೆಯದು
3. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ
ಅತಿಯಾದ ರಕ್ತದೊತ್ತಡವೂ ಕಿಡ್ನಿ ಕ್ಯಾನ್ಸರ್ನೊಂದಿಗೆ ನಂಟನ್ನು ಹೊಂದಿದೆ. ಬ್ಲಡ್ ಪ್ರೆಶ್ಯರ್ ಪ್ರಮುಖವಾಗಿ ಕಿಡ್ನಿ ಹಾಗೂ ಕಣ್ಣಿನಲ್ಲಿರುವ ಆರ್ಟಿರೀಸ್ ಅಂದ್ರೆ ಅಪಧಮನಿಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಆದಷ್ಟು ರಕ್ತದೊತ್ತಡವನ್ನ ನಿಯಂತ್ರಣದಲ್ಲಿಡಿ.
4. ನಿಮ್ಮ ಆಹಾರ ಕ್ರಮದಲ್ಲಿ ಎಚ್ಚರವಿರಲಿ
ಇನ್ನು ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಉತ್ತಮವಾದ ಆಹಾರ ಅದರಲ್ಲೂ ಪೌಷ್ಠಿಕಾಂಶ ಪೋಷಕಾಂಶ ಹೆಚ್ಚಿರುವ ಆಹಾರ ಸೇವನೆಯಿಂದ ನಾವು ನಮ್ಮ ಕಿಡ್ನಿ ಆರೋಗ್ಯವನ್ನು ಚೆನ್ನಾಗಿಡಬಹುದು. ತರಕಾರಿ, ಹಣ್ಣು ಸೊಪ್ಪು ಇಂತಹ ಆಹಾರಗಳೆಡೆಗೆ ಗಮನಕೊಡಿ.
5. ಮದ್ಯಪಾನ ಮಿತಿಯಲ್ಲಿರಲಿ
ಮದ್ಯಪಾನ ತುಂಬಾ ಅಪರೂಪಕ್ಕೆ ಕುಡಿದರು ಕೂಡ ಅದು ಕಿಡ್ನಿ ಕ್ಯಾನ್ಸರ್ನಂತಹ ಅಪಾಯವನ್ನು ತಂದಿಡಬಲ್ಲದು. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಆಲ್ಕೋಹಾಲ್ನಿಂದ ಸಂಪೂರ್ಣವಗಿ ಮುಕ್ತವಾಗುದರಿಂದ ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಲಾಗಿದೆ. ಅತಿಯಾದ ಕುಡಿತ ಮಿತಿ ಮೀರಿದ ಕುಡಿತ ಕಿಡ್ನಿ ಕ್ಯಾನ್ಸರ್ಗೆ ನೇರವಾಗಿ ಕಾರಣವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ